ಸುದ್ದಿಗಳು

ಮತ್ತೆ ಎಲ್ಲರ ಗಮನ ಸೆಳೆದ ಆಲಿಯಾ ಭಟ್..!

ವೈಟ್ ಶರ್ಟ್ ಮತ್ತು ಜೀನ್ಸ್ ಪ್ಯಾಂಟ್ ಜೊತೆಗೆ ಬ್ಲೂ ಬಣ್ಣದ ಫ್ಯಾನಿ ಬ್ಯಾಗ್

ಮುಂಬೈ,ನ.02: ಬಾಲಿವುಡ್‍ನಲ್ಲಿ ಬ್ಯೂಟಿ ಹೀರೋಯಿನ್‍ ಗಳ ಪೈಕಿ ಆಲಿಯಾ ಭಟ್ ಕೂಡ ಒಬ್ಬರು. ಒಂದಲ್ಲ ಒಂದು ರೀತಿಯಲ್ಲಿ ಸುದ್ದಿ ಮಾಡುವ ಈ ಮಿಲ್ಕಿ ಬ್ಯೂಟಿ ಇದೀಗ ಮತ್ತೊಮ್ಮೆ ನೆಟ್ಟಿಗರ ಹೃದಯ ಬಡಿತವನ್ನು ಹೆಚ್ಚಿಸಿದ್ದಾರೆ. ಸದ್ಯ `ಕಳಂಕ್’ ಚಿತ್ರದಲ್ಲಿ  ಬ್ಯುಸಿಯಾಗಿರುವ ಆಲಿಯಾ  ಏರ್‍ಪೋರ್ಟ್‍ನಲ್ಲಿ ಸಖತ್ ಫ್ಯಾಷನ್ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ ಆಲಿಯಾ.

ಸ್ಟೈಲಿಸ್ ಸೆಲೆಬ್ರಿಟಿ

ವೈಟ್ ಶರ್ಟ್ ಮತ್ತು ಜೀನ್ಸ್ ಪ್ಯಾಂಟ್ ಜೊತೆಗೆ ಬ್ಲೂ ಬಣ್ಣದ ಫ್ಯಾನಿ ಬ್ಯಾಗ್ ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ ಆಲಿಯಾ. ಈ ಲುಕ್‍ ನ ಫೋಟೋಗಳು ತಮ್ಮ ಇನ್ಸ್ಟಾ ಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ ಆಲಿಯಾ. ಈ ಫೋಟೋಗಳೂ ಸದ್ಯ ಸಖತ್ ವೈರಲ್ ಆಗಿವೆ. ತಮ್ಮ ಬ್ಯೂಟಿಫುಲ್ ಫೇಸ್‍ನಿಂದಲೇ ಎಲ್ಲ ಹೃದವನ್ನು ಕದಿಯುವ ಆಲಿಯಾ ತುಂಬಾ ಸ್ಟೈಲಿಸ್ ಸೆಲೆಬ್ರಿಟಿ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ.

 

View this post on Instagram

 

Lurker for life ????????

A post shared by Alia ✨⭐️ (@aliaabhatt) on

ಅನೇಕ ಚಿತ್ರದಲ್ಲಿ ಬ್ಯುಸಿ

ಆಲಿಯಾ ಭಟ್ ಸದಾ ಡಿಫರೆಂಟ್ ಫ್ಯಾಷನ್ ಎಕ್ಸ್ ಪರಿಮೆಂಟ್ ಮಾಡುತ್ತಾರೆ. ಕೆಲ ದಿನಗಳ ಹಿಂದೆ ನಟ ರಣಬೀರ್ ಸಿಂಗ್ ಅವರೊದಿಗೆ ಸಂಬಂಧದಿಂದ ಆಲಿಯಾ ಸುದ್ದಿಯಾಗಿದ್ದರು. ನಂತರದ ದಿನಗಳಲ್ಲಿ ತಮ್ಮ ನಟನೆ, ಲುಕ್, ಫ್ಯಾಷನ್ ಮೂಲಕ ಆಲಿಯ ಸುದ್ದಿಯಾಗುತ್ತಾ ಬರುತ್ತಿದ್ದಾರೆ.

ವರ್ಷಪೂರ್ತಿ ತುಂಬಾ ಬ್ಯುಸಿಯಾಗಿರುವ ಆಲಿಯಾ, ಸದ್ಯ `ಕಳಂಕ್’  ಚಿತ್ರದ ಶೂಟಿಂಗ್‍ ನಲ್ಲಿ ಬ್ಯೂಸಿಯಾಗಿದ್ದಾರೆ. ಇದಲ್ಲದೆ, ರಣಬೀರ್ ಕಪೂರ್ ಅವರೊಂದಿಗೆ `ಬ್ರಹ್ಮಾಸ್ತ್ರ’ ಮತ್ತು ರಣವೀರ್ ಸಿಂಗ್ ಅವರೊಂದಿಗೆ `ಗಲ್ಲಿ ಬಾಯ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಲ್ಲದೆ, ಕರಣ್ ಜೋಹರ್ ಅವರ `ತಕ್ತ್’ ಚಿತ್ರದಲ್ಲಿಯೂ ಅಭಿನಯಿಸುತ್ತಿದ್ದಾರೆ ಆಲಿಯಾ. ಈ ಚಿತ್ರದಲ್ಲಿ ರಣವೀರ್ ಸಿಂಗ್, ಕರೀನಾ ಕಪೂರ್, ಜಾನ್ವಿ ಕಪೂರ್, ವಿಕಿ ಕೌಶಾಲ್ ಮತ್ತು ಭೂಮಿ ಪೆಡ್ನೇಕರ್ ಕೂಡ ತಾರಾಂಗಣದಲ್ಲಿದ್ದಾರೆ.

Tags

Related Articles