ಸುದ್ದಿಗಳು

ಇಸ್ಮಾರ್ಟ್ ಶಂಕರ್: ನಭಾ-ರಾಮ್ ಕೆಮಿಸ್ಟ್ರಿಗೆ ಫಿದಾ ಆದ ಟಾಲಿವುಡ್ ಮಂದಿ

ಬಿಡುಗಡೆಯಾದಾಗಿನಿಂದ ತೆಲುಗು ‘ಇಸ್ಮಾರ್ಟ್ ಶಂಕರ್’ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅದರಲ್ಲೂ ಚಿತ್ರ ನೋಡಿದವರು ರಾಮ್ ಪೋಥಿನೇನಿ ಹಾಗೂ ನಭಾ ನಟೇಶ್ ಕೆಮಿಸ್ಟ್ರಿ ಸೂಪರ್ಬ್ ಎಂದು ಹೇಳುತ್ತಿದ್ದಾರೆ. ರೊಮ್ಯಾಂಟಿಕ್ ಸಾಂಗ್ ಇರಬಹುದು, ಸನ್ನಿವೇಶಗಳು ಎಲ್ಲದರಲ್ಲೂ ಇವರಿಬ್ಬರ ಅಭಿನಯ ಕಂಡು ಬೆರಗಾಗಿದ್ದಾರೆ.

ಇಬ್ಬರ ಪಾತ್ರಗಳಿಗೂ ನ್ಯಾಯ ಒದಗಿಸುವಲ್ಲಿ ನಿರ್ದೇಶಕ ಪೂರಿ ಜಗನ್ನಾಥ್ ಯಶಸ್ವಿಯಾಗಿದ್ದು, ಇತ್ತ ಸಿನಿಪ್ರಿಯರು ಚಿತ್ರ ನೋಡಿ ಬೋಲ್ಡ್ ಆಗಿದ್ದಾರೆ. ಇನ್ನು ನಭಾ ‘ನನ್ನು ದೋಚು ಕುಂದುವಟೆ’ ಚಿತ್ರದಲ್ಲಿ ಬಬ್ಲಿ ಪಾತ್ರದಲ್ಲಿ ನಟಿಸಿ, ಟ್ರಡಿಶನಲ್ ಆಗಿ ಕಾಣಿಸಿಕೊಂಡು ಎಲ್ಲರ ಗಮನಸೆಳೆದಿದ್ದರು. ಆದರೆ ಈ ಚಿತ್ರದಲ್ಲಿ ಅವರು ಹಿಂದೆಂದೂ ನೋಡದ ಪಾತ್ರದಲ್ಲಿ ಮಿಂಚಿದ್ದಾರೆ.

ಹಾಗೆ ನೋಡಿದರೆ ಯಾವ ನಟಿಯೂ ತಮ್ಮ ಎರಡನೇ ಚಿತ್ರದಲ್ಲಿಯೇ ಈ ರೀತಿ ಕಾಣಿಸಿಕೊಂಡೇ ಇಲ್ಲ ಎನ್ನುತ್ತಾರೆ ಸಿನಿ ತಜ್ಞರು. ಅಂದಹಾಗೆ ‘ಇಸ್ಮಾರ್ಟ್ ಶಂಕರ್’ ಚಿತ್ರದ ಮೊದಲ ದಿನದ ಕಲೆಕ್ಷನ್ 7.83 ಕೋಟಿ ರೂ.ಎಂದು ಹೇಳಲಾಗುತ್ತಿದೆ. ಅಲ್ಲಿಗೆ ಚಿತ್ರದ ಅರ್ಧದ ಬಜೆಟ್ ಸಂಪೂರ್ಣವಾಗಿ ವಾಪಸ್ಸಾಗಿದೆ ಎಂದು ಹೇಳುತ್ತಿದ್ದಾರೆ ಬಲ್ಲವರು.

ಕದ್ದು ಮುಚ್ಚಿ ಮದುವೆಯಾದ್ರಾ? ‘ಅಗ್ನಿಸಾಕ್ಷಿ’ ಸೀರಿಯಲ್ ಬೆಡಗಿ!!?!!

#balkaninews #ismart shankar #nabha natesh # rampothineni

Tags