ಸುದ್ದಿಗಳು

ಸದ್ದಿಲ್ಲದೇ ಮುಹೂರ್ತ ಆಚರಿಸಿಕೊಂಡ ‘ಅಲ್ಲೆ ಡ್ರಾ ಅಲ್ಲೇ ಬಹುಮಾನ’

ಪೋಸ್ಟರ್ ಮೂಲಕವೇ ಸದ್ದು ಮಾಡುತ್ತಿರುವ ಸಿನಿಮಾ

ಬೆಂಗಳೂರು.ಮಾ.23: ಜನನಿ ಫಿಲ್ಮ್ಸ್ ಲಾಂಛನದಡಿ ನಿರ್ಮಾಪಕ ಬಿ.ಜೆ ಪ್ರಶಾಂತ್ ನಿರ್ಮಾಣ ಮಾಡುತ್ತಿರುವ ‘ಅಲ್ಲೆ ಡ್ರಾ ಅಲ್ಲೇ ಬಹುಮಾನ’ ಚಿತ್ರಕ್ಕೆ ಸದ್ದಿಲ್ಲದೇ ಇತ್ತೀಚೆಗಷ್ಟೇ ಮುಹೂರ್ತವಾಗಿದೆ. ಈ ಚಿತ್ರದ ಮೂಲಕ ರತ್ನ ತೀರ್ಥ ನಿರ್ದೇಶಕರಾಗುತ್ತಿದ್ದು, ಅವರೇ ಕಥೆ, ಚಿತ್ರಕಥೆ ಬರೆದಿದ್ದಾರೆ.

 

ಸದ್ಯ ಚಿತ್ರೀಕರಣ ಆರಂಭಿಸಿರುವ ಚಿತ್ರತಂಡದವರು 10 ದಿನಗಳ ಕಾಲ ಬೆಂಗಳೂರಿನ ಸುತ್ತಮುತ್ತ ಶೂಟಿಂಗ್ ಮಾಡಲಿದ್ದಾರೆ. ಚಿತ್ರಕ್ಕೆ ಪ್ರಶಾಂತ್ ವೈ ಎನ್, ಅಭಿನಂದನ್ ದೇಶಪ್ರಿಯ ಸಂಭಾಷಣೆ, ಸತೀಶ್ ರಾಜೇಂದ್ರನ್ ಛಾಯಾಗ್ರಹಣ, ನಾಗ್ ಭೂಷಣ್ ಸಾಹಿತ್ಯ, ವಿನಯ್ ರಾಜ್ ಸಂಗೀತ ಚಿತ್ರಕ್ಕಿದೆ.

 

ಇನ್ನು ‘ಟಗರು’ ಚಿತ್ರದಲ್ಲಿ ಕಾನ್ಸ್ ಟೇಬಲ್ ಸರೋಜಾ ಪಾತ್ರದಲ್ಲಿ ನಟಿಸಿ ಕನ್ನಡಿಗರ ಮನ ಗೆದ್ದಿದ್ದ ತ್ರಿವೇಣಿ ರಾವ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಇನ್ನು ನಿರ್ದೇಶಕ ರತ್ನತೀರ್ಥ ರಂಗಭೂಮಿಯಲ್ಲಿ ಪಳಗಿ ಧಾರಾವಾಹಿಗಳಲ್ಲಿ ಸಹಾಯಕ ನಿರ್ದೇಶಕನಾಗಿ ನಂತರ ಕಿರುಚಿತ್ರಗಳನ್ನು ನಿರ್ದೇಶನ ಮಾಡಿ, ಈಗ ಈ ಸಿನಿಮಾ ಮಾಡುತ್ತಿದ್ದಾರೆ.

ಇನ್ನು ಚಿತ್ರಕ್ಕೆ ತ್ರಿವೇಣಿ ಕೃಷ್ಣ ಮತ್ತು ಶೌರ್ಯ ನಾಯಕ-ನಾಯಕಿಯರಾಗಿ ಬಣ್ಣ ಹಚ್ಚಿದ್ದು, ಉಳಿದಂತೆ ಶಂಕರ್ ಅಶ್ವಥ್, ನಿಖಿಲ್ ಗೌಡ, ಸುಮಂತ್, ಭಾರತಿ ಸೇರಿದಂತೆ ಅನೇಕರು ಚಿತ್ರದಲ್ಲಿದ್ದಾರೆ.

ಕುಂದಾಪುರದ ಕುವರಿ ಇದೀಗ “ಕಿನ್ನರಿ” ಯ ಮಣಿ

#alledrrowallebahumana #balkaninews #muhurtha, #filmnews, #kannadasuddigalu

Tags