ಸುದ್ದಿಗಳು

ನಿರ್ಮಾಪಕ ಅಲ್ಲು ಅರವಿಂದ್ ಗೆ ಶಾಕ್ ಕೊಟ್ಟ ಶ್ರದ್ಧಾ ಕಪೂರ್

ಮೆಗಾ ನಿರ್ಮಾಪಕ ಅಲ್ಲು ಅರವಿಂದ್ ಮುಂಬರುವ  ಸಿನಿಮಾ ರಾಮಾಯಣದ ಸಹ-ನಿರ್ಮಾಣಕ್ಕೆ ಸಜ್ಜಾಗಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ಸುದ್ದಿ. ಸೀತಾ ಪಾತ್ರದಲ್ಲಿ ನಟಿಸಲು ಶ್ರದ್ಧಾ ಕಪೂರ್ ಗೆ ಆಫರ್ ನೀಡಿದ್ರಂತೆ. ಆದರೆ ನಟಿಯ ಭಾರಿ ಬೇಡಿಕೆ ಅವರಿಗೆ ಶಾಕ್ ನೀಡಿದೆ.

ಬೆಳ್ಳಿ ಪರದೆಯಲ್ಲಿ ಸೀತಾ ಪಾತ್ರವನ್ನು ನಿರ್ವಹಿಸಲು ಶ್ರದ್ಧಾ ಕಪೂರ್ 12 ಕೋಟಿ ಸಂಭಾವನೆ ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶ್ರದ್ಧಾ ಕಪೂರ್  ಶಾಕಿಂಗ್ ಸುದ್ದಿ ಕೊಟ್ಟ ನಂತರ, ಈಗ ಅಲ್ಲು ಅರವಿಂದ್ ರಾಮಾಯಣಕ್ಕಾಗಿ ಇನ್ನೊಬ್ಬ ನಟಿಯ ಹುಡುಕಾಟವನ್ನು ಪ್ರಾರಂಭಿಸಿದ್ದಾರೆ.

Image result for shraddha kapoor

ಶ್ರದ್ಧಾ ಕಪೂರ್ ಇತ್ತೀಚೆಗೆ ಬಿಡುಗಡೆಯಾದ ಆಕ್ಷನ್ ಥ್ರಿಲ್ಲರ್  ಚಿತ್ರ ಸಾಹೋ ಮೂಲಕ ಟಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ರು. ಇದರಲ್ಲಿ ಶ್ರದ್ಧಾ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಅವರೊಂದಿಗೆ ಸ್ಕ್ರೀನ್ ಸ್ಪೇಸ್ ಹಂಚಿಕೊಂಡಿದ್ದಾರೆ. ಹಿಂದಿ  ಸಿನಿಮಾರಂಗದಲ್ಲಿ ಹೆಚ್ಚು ಬೇಡಿಕೆಯಿರುವ ತಾರೆ ಶ್ರದ್ಧಾ.

ಪ್ರಸ್ತುತ ಶ್ರದ್ಧಾ ಕಪೂರ್ -ಸ್ಟ್ರೀಟ್ ಡ್ಯಾನ್ಸರ್ 3 ಡಿ ಮತ್ತು ಬಾಘಿ 3 ಗಳಲ್ಲಿ  ನಟಿಸಲಿದ್ದಾರೆ

ಸುಂದರ ಕಾಂತಿಯುತ ತ್ವಚೆ ಪಡೆಯಲು ಸರಳ ಟಿಪ್ಸ್

#shraddhakapoor #bollywood #alluaravind

Tags