
ಸುದ್ದಿಗಳು
ಈ ಚಿತ್ರವನ್ನು ನೋಡಿ ಒಂದು ವಾರ ನಿದ್ದೆ ಮಾಡಿರಲಿಲ್ಲ: ಅಲ್ಲು ಅರ್ಜುನ್
ಹೈದರಾಬಾದ್, ಜು.30: ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಒಂದು ವಾರ ಸರಿಯಾಗಿ ನಿದ್ದೆ ಮಾಡಿರಲಿಲ್ವಂತೆ. ಇದಕ್ಕೆ ಕಾರಣ ಯಾರು ಎಂದು ಕೇಳಿದಾಗ ತೆಲುಗು ಚಿತ್ರರಂಗದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿರುವ ವಿಜಯ್ ದೇವರಕೊಂಡ ಅವರ ಹೆಸರನ್ನು ಹೇಳಿದ್ದಾರಂತೆ.
ಗೀತ ಗೋವಿಂದಂ ಆಡಿಯೋ ರಿಲೀಸ್
ಕಳೆದ ಭಾನುವಾರ(ನಿನ್ನೆ) ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ನೂತನ ‘ಗೀತ ಗೋವಿಂದಂ’ ಚಿತ್ರದ ಧ್ವನಿ ಸುರುಳಿಯನ್ನು ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಅಲ್ಲು ಅರ್ಜುನ್ ಆಗಮಿಸಿದ್ದರು. ಚಿತ್ರದ ಆಡಿಯೋ ಸಿಡಿ ರಿಲೀಸ್ ಬಳಿಕ ಮಾತನಾಡಿದ ಅಲ್ಲು, ವಿಜಯ್ ನಟನೆ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಿದ್ದೆ ಕೆಡಿಸಿದ್ದ ಅರ್ಜುನ್ ರೆಡ್ಡಿ
‘ಅರ್ಜುನ್ ರೆಡ್ಡಿ’ ಚಿತ್ರ ಅಲ್ಲು ಅರ್ಜುನ್ ಅವರಿಗೆ ಒಂದು ವಾರದ ಕಾಲ ನಿದ್ದೆ ಮಾಡಿರಲಿಲ್ಲ. ಜೊತೆಗೆ ಅವರ ನಟನೆಗೆ ಫಿದಾ ಆಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಈ ಟಾಲಿವುಡ್ ನಲ್ಲಿ ವಿಜಯ್ ಅವರು ವಿಶೇಷವಾದ ಪ್ರತಿಭೆ ಎಂದು ಕೊಂಡಾಡಿದ್ದಾರೆ.
ಇನ್ನು ಗೀತ ಗೋವಿಂದಂ ಚಿತ್ರದ ಬಗ್ಗೆಯೂ ಮಾತನಾಡಿದ ಅವರು, ಈ ಚಿತ್ರದ ನಟನೆಗೆ ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸುವುದರ ಮೂಲಕ ಶುಭಾಶಯಗಳನ್ನು ಸಲ್ಲಿಸಿದ್ದಾರೆ.