ಸುದ್ದಿಗಳು

ಪತಿಗೆ ಸ್ವೀಟ್ ಶಾಕ್ ನೀಡಿದ್ರು ಸ್ನೇಹಾ ರೆಡ್ಡಿ

ಹೈದ್ರಾಬಾದ್, ಫೆ.12:

ಇತ್ತೀಚೆಗೆ ನಟ ಸ್ಟೈಲೀಶ್ ಸ್ಟಾರ್ ಅಲ್ಲೂ ಅರ್ಜುನ್ ತಮ್ಮ ಮಗಳೊಂದಿಗೆ ಮಾತನಾಡುವ ವಿಡಿಯೋವೊಂದು ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಅಲ್ಲೂ ಅರ್ಜುನ್ ತನ್ನ ಮಗಳಿಗೆ ನಾನು ನೋಡಿದ ಹುಡುಗನನ್ನು ನೀನು ಮದುವೆಯಾಗುತ್ತೀಯಾ ಎಂದು ಪ್ರಶ್ನಿಸಿದರೆ. ಆಕೆ ನೆಗೆಟೀವ್ ಉತ್ತರ ನೀಡಿ ನಗುತ್ತಿದ್ದಳು. ತಂದೆ ನೋಡಿದ ಹುಡುಗನನ್ನೇ ನಾನು ಮದುವೆಯಾಗುತ್ತೇನೆ ಎಂದು ಎಷ್ಟು ಸಲ ಹೇಳಿಸಲು ಪ್ರಯತ್ನಿಸಿದರೂ ಆಕೆ ಮಾತ್ರ ಕ್ಯೂಟ್ ಕ್ಯೂಟ್ ಆಗಿ ತಂದೆ ನೋಡಿದ ಹುಡುಗನ್ನು ಮದುವೆಯಾಗುವುದಿಲ್ಲ ಎನ್ನುತ್ತಿದ್ದಳು.

ಮಗಳ ಮಾತಿಗೆ ನಗುತ್ತಲೇ ಆಕೆಯನ್ನು ಮುದ್ದಾಡುತ್ತಿದ್ದ ಅಲ್ಲೂ ಕೂಡ ಎಂಜಾಯ್ ಮಾಡುತ್ತಿದ್ದ ವಿಡಿಯೋ ವೈರಲ್ ಆಗಿ ಸಾಕಷ್ಟು ಪರ ವಿರೋಧಗಳು ವ್ಯಕ್ತವಾದವು. ಮನೋಶಾಸ್ತ್ರಜ್ಞರಂತೂ ಅಲ್ಲೂ ಅರ್ಜುನ್ ಅವರನ್ನು ತರಾಟೆಗೆ ತೆಗೆದುಕೊಂಡು, ಈ ರೀತಿಯಾಗಿ ಮಕ್ಕಳ ಮೇಲೆ ಒತ್ತಡ ಹೇರಬಾರದು ಎಂದೆಲ್ಲಾ ಹೇಳಲಾರಂಭಿಸಿದರು. ಎಳೆ ಮನಸ್ಸಿನ ಮೇಲೆ ತಂದೆಯ ಮಾತುಗಳು ಪ್ರಭಾವ ಬೀರುತ್ತದೆ . ಹೀಗಾಗಿ ದೊಡ್ಡವರು ಈ ಬಗ್ಗೆ ಗಮನ ಹರಿಸಬೇಕು ಎಂದೆಲ್ಲಾ ಬುದ್ದಿ ಹೇಳಿದರು.

ಈ ವಿಡಿಯೋ ಬಗ್ಗೆಸ್ನೇಹಾ ಏನು ಕಮೆಂಟ್ ಮಾಡಿದ್ರು ಗೊತ್ತೆ..?

ಮಗಳೊಂದಿಗೆ ಕಳೆದ ಸೂಪರ್ ಕ್ಷಣಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಅಲ್ಲೂ ಅರ್ಜುನ್ ವಿಡಿಯೋಗೆ ಸಾಕಷ್ಟು ಲೈಕ್ಸ್ ಹಾಗೂ ಕಮೆಂಟ್ ಗಳ ಬಂದಿದ್ದವು. ಅದರಲ್ಲಿ ಹೆಚ್ಚು ಗಮನ ಸೆಳೆದಿರುವುದು , “Abba Chaa… Nuvvu chesukunnava mee naanna cheppina ammayini?” ಎಂಬ ಕಮೆಂಟ್.

ಹೌದು, ನೀವು ಮದುವೆಯಾಗುತ್ತಿರಾ ನಿಮ್ಮ ಅಪ್ಪ ತೋರಿಸುವ ಹುಡುಗಿಯನ್ನ ಎಂದು ಕಮೆಂಟ್ ಮಾಡಿರುವುದು ಬೇರೆ ಯಾರೂ ಅಲ್ಲ ಅಲ್ಲೂ ಅರ್ಜುನ್ ಅವರ ಪತ್ನಿ ಸ್ನೇಹಾರೆಡ್ಡಿ. ಈ ಕಮೆಂಟ್ ಗೆ ಮರುಉತ್ತರಿಸಿರುವ ಅರ್ಜುನ್ ನೀವು ನಿಮ್ಮ ಅಪ್ಪ ತೋರಿಸುವ ಹುಡುಗನನ್ನು ಮದುವೆಯಾಗುತ್ತಿರಾ ಎನ್ನುತ್ತಾ ಕಾಲೆಳೆದರು.ಅಂದಹಾಗೆ ಸ್ನೇಹ ರೆಡ್ಡಿಯವರನ್ನು ಕಾಮನ್ ಫ್ರೆಂಡ್ ಒಬ್ಬರ ಮೂಲಕ ಭೇಟಿ ಮಾಡಿದ ಅಲ್ಲೂ ಅವರನ್ನು ಪ್ರೀತಿಸಲಾರಂಭಿಸಿದರು. ಈ ಪ್ರೀತಿಗೆ ಪೋಷಕರು ಗ್ರೀನ್ ಸಿಗ್ನಲ್ ನೀಡಿದ್ದರಿಂದ, ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಸಂಕ್ರಾಂತಿಗಾಗಿ ಪಾಲಾಕೊಲ್ಲು ಜನರಿಗೆ ದೊಡ್ಡ ಉಡುಗೊರೆ ನೀಡಿದ ಸ್ಟೈಲಿಶ್ ಸ್ಟಾರ್

#alluarjun #alluarjunmovies #snehareddy #snehareddyinstagram #alluarjunandsnehareddy #balkaninews

Tags