ಸುದ್ದಿಗಳು

‘ಅಂಬಾನಿ ಪುತ್ರ’- ಇದು ಸಂಪೂರ್ಣ ಹೊಸಬರ ಚಿತ್ರ

ಸ್ಯಾಂಡಲ್ ವುಡ್ ಗೆ ದಿನದಿಂದ ದಿನಕ್ಕೆ ಹೊಸಬರು ಹೊಸ ಹೊಸ ಕನಸು, ಯೋಜನೆ, ಯೋಚನೆಗಳೊಂದಿಗೆ ಬರುತ್ತಲೇ ಇದ್ದಾರೆ. ಹಾಗೆಯೇ ಇಲ್ಲೊಂದು ಹೊಸಬರ ತಂಡದವರು ‘ಅಂಬಾನಿ ಪುತ್ರ’ ಚಿತ್ರದ ಮೂಲಕ ಬಂದಿದ್ದಾರೆ.

ಹೌದು, ‘ಅಂಬಾನಿ ಪುತ್ರ’ ಹೆಸರಿನ ಚಿತ್ರವೊಂದರ ಪೋಸ್ಟರ್ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. ವಿಶೇಷವೆಂದರೆ, ಅಂಬಾನಿ ಎಂಬ ಹೆಸರು ಕೇಳದವರೇ ಇಲ್ಲ ಎನ್ನಬಹುದು.

ಹೌದು, ಅಂಬಾನಿ ಶ್ರೀಮಂತ ಉದ್ಯಮಿ. ಜಗತ್ತಿಗೂ ಚಿರಪರಿಚಿತರಾಗಿರುವ ಈ ಅಂಬಾನಿ ಹೆಸರನ್ನು ಬಳಸಿಕೊಂಡ ಈ ಚಿತ್ರಕ್ಕೆ ‘ಓದಿರೋದು ಕಾಮ ಸೂತ್ರ’ ಎಂಬ ಟ್ಯಾಗ್ ಲೈನ್ ಇದೆ. ಹಾಗಂತ, ಇದು ಶ್ರೀಮಂತ ಉದ್ಯಮಿ ಅಂಬಾನಿ ಅವರಿಗಾಗಲಿ, ಅವರ ಪುತ್ರನಿಗಾಗಲಿ ಸಂಬಂಧಿಸಿದ ಚಿತ್ರವಂತೂ ಅಲ್ಲ.

‘ಇದೊಂದು ನೈಜಘಟನೆ ಆಧರಿಸಿ ಮಾಡಿರುವ ಚಿತ್ರವಾಗಿದ್ದು, ಇಲ್ಲೊಂದು ಲವ್ ಸ್ಟೋರಿ ಹಾಗೂ ಸೆಂಟಿಮೆಂಟ್, ಎಮೋಷನ್ಸ್, ಹಾಸ್ಯ ಕೂಡ ಇದೆ. ಈಗ ಚಿತ್ರದ ಪ್ರಥಮ ಪ್ರತಿ ಕೂಡ ಸಿದ್ಧವಾಗಿದೆ’ ಎಂದು ನಿರ್ದೇಶಕ ದೊರೈರಾಜ್ ಹೇಳಿದ್ದಾರೆ. ಈ ಚಿತ್ರವನ್ನು ವಿ.ಎಸ್.ಪಿ.ಎಸ್. ಮೂವೀಸ್ ಬ್ಯಾನರ್ ನಲ್ಲಿ ಕೆ.ಎನ್. ವೆಂಕಟೇಶ್ ನಿರ್ಮಾಣ ಮಾಡಿದ್ದು, ಚಿತ್ರದಲ್ಲಿ ಚಿತ್ರದಲ್ಲಿ ಸುಪ್ರೀಮ್, ಆಶಾ, ಕಾವ್ಯಾ, ಮಿಮಿಕ್ರಿ ಗೋಪಿ, ಮಂಜೇಗೌಡ್ರು, ಚಂದ್ರಿಕಾ, ಸುಮಿತ್ರಾ ವೆಂಕಟೇಶ್, ಪ್ರೀತಂ, ರೋಹಿತ್, ಆದಿತ್ಯ, ಮಾ.ಸುಹಾಸ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಚಿತ್ರಕ್ಕೆ ಅಭಿಷೇಕ್ ಜಿ.ರಾಜ್ ಸಂಗೀತ ನೀಡಿದ್ದಾರೆ.

ಸಿನಿಮಾ ರೂಪ ಪಡೆಯುತ್ತಿರುವ ರವಿ ಬೆಳೆಗೆರೆ ವಿರಚಿತ ‘ಒಮರ್ಟಾ’ ಕಾದಂಬರಿ

#ambaniputra, #new, #commers, #movie,  #balkaninews #filmnews, #kannasuddigalu

Tags