ಸುದ್ದಿಗಳು

ಬೆಳ್ಳಂಬೆಳಗ್ಗೆ ನಿರಾಶರಾದ ಅಮಲಾ ಪೌಲ್ ಅಭಿಮಾನಿಗಳು!

ಅಮಲಾ ಪೌಲ್ ಅಭಿನಯದ ತಮಿಳಿನ ಅಡೈ ತೆಲುಗು ಅವತರಣಿಕೆ ‘ಅಮೆ’ ಇಂದು ಬಿಡುಗಡೆಯಾಗಿದೆ. ಆದರೆ ಬೆಳಗ್ಗೆ ಪ್ರದರ್ಶನ ಕಾಣಬೇಕಿದ್ದ ಶೋ ಕ್ಯಾನ್ಸಲ್ ಆಗಿದೆ. ಇದರಿಂದ ಆಕೆಯ ಅಭಿಮಾನಿಗಳು ನಿರಾಶರಾಗಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಹಬ್ಬಿರುವ ಸುದ್ದಿಯ ಪ್ರಕಾರ ಹಣಕಾಸಿನ ಸಮಸ್ಯೆಯಿಂದಾಗಿ ಬೆಳಗಿನ ಶೋ ಕ್ಯಾನ್ಸಲ್ ಆಗಿದೆ. ‘ಆಮೆ’ ಥ್ರಿಲ್ಲರ್ ಚಿತ್ರ ಅಡೈನ ತೆಲಗು ಅವತರಣಿಕೆ. ಚಿತ್ರ ತಯಾರಕರು ಇದನ್ನು ಆಂಧ್ರಪ್ರದೇಶ, ತೆಲಾಂಗಣದಲ್ಲಿ ಇಂದು ಶುಕ್ರವಾರ ಬಿಡುಗಡೆ ಮಾಡಲು ನಿರ್ಧರಿಸಿದ್ದರು. ಚಿತ್ರದ ಪ್ರಮೋದಲ್ಲಿ ಅಮಲಾ ಬೆತ್ತಲಾಗಿದ್ದ ಸುದ್ದಿ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿದ್ದು, ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿತ್ತು.

ಆದರೆ ಚಿತ್ರ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದ್ದ ಅಮಲಾ ಅಭಿಮಾನಿಗಳಿಗೆ ನಿರಾಶೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಆರ್ಥಿಕ ಸಮಸ್ಯೆಯಿಂದಾಗಿ ಚಿತ್ರದ ಬೆಳಗ್ಗೆ ಪ್ರದರ್ಶನ ಕಂಡಿಲ್ಲ ಎಂದು ಹೇಳಲಾಗುತ್ತಿದೆ. ಆಂಧ್ರ ಬಾಕ್ಸ್ ಆಫೀಸ್ ‘ಅಡೈ’, ‘ಆಮೆ’ ಹಣಕಾಸಿನ ಸಮಸ್ಯೆ ಇರುವ ಕಾರಣ ಇಂದು ಬೆಳಗ್ಗೆ ಬಿಡುಗಡೆಯಾಗುತ್ತಿಲ್ಲ ಎಂದು ಟ್ವೀಟ್ ಮಾಡಿದೆ.

ಇದರಿಂದ ನಿರಾಶರಾದ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ತಯಾರಕರ ಮೇಲಿನ ಕೋಪವನ್ನು ಹೀಗೆ ತೋರಿಸಿದ್ದಾರೆ..ನೀವೇ ನೋಡಿ….

ತೆಲುಗು ಬಿಗ್ ಬಾಸ್ 3ರಲ್ಲಿ ಭಾಗವಹಿಸುತ್ತಾರಾ ಈ ಕಾಂಟ್ರವರ್ಸಿ ಕ್ವೀನ್?

#balkaninews #amalapaul #morningshows #aame #cancelled

Tags