ಸುದ್ದಿಗಳು

ಕೈ ಮುರಿದರೂ ಸರಿ, ಸಂತ್ರಸ್ತರಿಗೆ ಸಹಾಯ ಹಸ್ತ ಮಾಡಲು ಮುಂದಾದ ಈ ನಟಿ!!

ತಿರುವನಂತಪುರ,ಆ.18: ನಟಿ ಅಮಲಾ ಪೌಲ್ ಅವರು ತಮಿಳಿನಲ್ಲಿ ಮೂಡಿ ಬರಲಿರುವ `ಅಧೋ ಅಂಧ ಪರವೈ ಪೊಲಾ’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಫ್ ಅಂಡ್ ಟಫ್ ಹುಡುಗಿಯಾಗಿ ಅಮಲಾ ಪೌಲ್ ಕಾಣಿಸಿಕೊಳ್ಳಲಿದ್ದಾರೆ. ಶನಿವಾರ ರಾತ್ರಿ ಈ ಸಿನಿಮಾದಲ್ಲಿ ನಟಿ ಅಮಲಾ ಪೌಲ್ ಅವರ ಸ್ಟಂಟ್ ಸನ್ನಿವೇಶಗಳನ್ನು ಚಿತ್ರೀಕರಣ ಮಾಡಲಾಗುತ್ತಿತ್ತು. ಈ ವೇಳೆ ಸ್ಟಂಟ್ ಮಾಡುವ ಸಂದರ್ಭದಲ್ಲಿ ನಟಿ ಅಮಲಾ ಬಲಗೈಗೆ ಏಟು ಮಾಡಿಕೊಂಡಿದ್ದರು . ಇಷ್ಟೆಲ್ಲಾ ಆದರೂ ಅಮಲಾ ಸುಮ್ಮನೆ ಕೂತಿಲ್ಲ!! ಹೌದು ಮನೆಯೊಂದಿಗೆ ಬಂಧುಗಳನ್ನು ಕಳೆದುಕೊಂಡು ಮಳೆಗೆ ಸಂತ್ರಸ್ತರು ಪಡುತ್ತಿರುವ  ಕಷ್ಟ ಅಷ್ಟಿಷ್ಟಲ್ಲ. ಕೇರಳ ಮತ್ತು ಕೊಡಗಿಗೆ ಎಷ್ಟು ನೆರವು ನೀಡಿದರೂ ಸಾಲದು. ಈ ಸಂದರ್ಭದಲ್ಲಿ ‘ಹೆಬ್ಬುಲಿ’ ನಟಿ ಅಮಲಾ ಪೌಲ್ ಕೈ ಮುರಿದಿದ್ದರೂ, ಕೇರಳ ಮಳೆ ಸಂತ್ರಸ್ತರಿಗೆ ನೆರವಾಗಲು ಮುಂದಾಗಿದ್ದಾರೆ.

ಅಮಲಾ ಸಹಾಯ ಹಸ್ತ..

ಕುಂಭದ್ರೋಣ ಮಳೆಗೆ ಕೇರಳದ ಹಲವಾರು ಜಿಲ್ಲೆಗಳಲ್ಲಿ ಪ್ರವಾಹ ಸೃಷ್ಟಿಯಾಗಿದೆ. ಲಕ್ಷಾಂತರ ಮಂದಿ ಮಳೆಯಲ್ಲಿ ಸಿಕ್ಕಿಹಾಕಿಕೊಂಡಿದ್ದು, ನೀರು-ಆಹಾರವಿಲ್ಲದೇ ಪರದಾಡುತ್ತಿದ್ದಾರೆ. ಇವರಿಗೆ ನೆರವಾಗಲು ದಕ್ಷಿಣ ಭಾರತೀಯ ಸಿನಿಮಾ ತಾರೆಯರಾದ ಸೂರ್ಯ, ಅಲ್ಲು ಅರವಿಂದ್, ಕಾರ್ತಿ, ವಿಜಯ್ ಸೇತುಪತಿ, ಧನುಷ್, ಶಿವಕಾರ್ತಿಕೆಯನ್, ನಯನತಾರಾ, ಪ್ರಭಾಸ್ ಹೀಗೆ ಹಲವಾರು ನಟನಟಿಯರು ಉದಾರವಾಗಿ ದೇಣಿಗೆ ನೀಡಿದ್ದಾರೆ.ನಟಿ ಅಮಲಾ ಪೌಲ್ ಅವರಂತೂ ಕೈ ಮುರಿದಿದ್ದರೂ, ಮಳೆ ಪೀಡಿತ ಪ್ರದೇಶಗಳಲ್ಲಿಯೇ ಕುಟುಂಬದ ಇತರೆ ಸದಸ್ಯರೊಂದಿಗೆ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ನೀಡುತ್ತಿದ್ದಾರೆ.

ತಮ್ಮ ದೈಹಿಕ ನೋವಿನಲ್ಲಿಯೂ ತನ್ನ ರಾಜ್ಯದ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿರುವ ನಟಿಯ ಕಾರ್ಯಕ್ಕೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ.

Tags