ಲುಕ್ಸ್ಸುದ್ದಿಗಳು

ಟ್ರೋಲ್ ಗೆ ಒಳಗಾದ ಹೆಬ್ಬುಲಿ ಚಿತ್ರದ ನಾಯಕಿ ಅಮಲಾ ಪೌಲ್

ಬೆಂಗಳೂರು.ಮೇ.17: ಕಿಚ್ಚ ಸುದೀಪ್ ಅಭಿನಯದ ‘ಹೆಬ್ಬುಲಿ’ ಸಿನಿಮಾದ ಮೂಲಕ ಚಂದನವನಕ್ಕೆ ಪರಿಚಿತರಾದ ದಕ್ಷಿಣ ಭಾರತದ ನಟಿ ಅಮಲಾ ಪೌಲ್ ಇದೀಗ ಟ್ರೋಲ್ ಗೆ ಒಳಗಾಗಿದ್ದಾರೆ. ಅದಕ್ಕೆ ಮುಖ್ಯ ಕಾರಣ ತಾನು ಧರಿಸಿದ್ದ ಬಟ್ಟೆ! ತಾವು ಧರಿಸಿದ ಉಡುಪಿನ ಕಾರಣದಿಂದಲೇ ಇಂದು ಅಮಲಾ ಪೌಲ್ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗೆ ಒಳಗಾಗಿದ್ದಾರೆ.

ವಾರದ ಹಿಂದೆ ಹಳದಿ ಬಣ್ಣದ ಟಾಪ್ ಮತ್ತು ಗ್ರೇ ಬಣ್ಣದ ಸ್ಕರ್ಟ್ ಧರಿಸಿರುವ ತನ್ನ ಫೋಟೋವೊಂದನ್ನು ಅಮಲಾ ಪೌಲ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಜೊತೆಗೆ ” ನಾನು ಏನು ಬೇಕಾದರೂ ಆಗಬಲ್ಲೆ. ಇಂದು ನಾನು ಹ್ಯಾಪಿ ಮ್ಯಾಂಗೊ ಆಗಿದ್ದೇನೆ” ಎಂದು ಬರೆದುಕೊಂಡಿದ್ದರು. ಈ ರೀತಿ ಬರೆಯುವ ಮೂಲಕ ಹಳದಿ ಬಣ್ಣದ ಮೇಲಿರುವ ತಮ್ಮ ಒಲವನ್ನು ಅಮಲಾ ತೋರಿಸಿಕೊಂಡಿದ್ದರು.

ಇದೀಗ ಆ ಫೋಟೋಕ್ಕೆ ಸಾವಿರಾರು ಕಮೆಂಟ್ ಗಳು ಬರುತ್ತಿವೆ. ಅಮಲಾ ಪೌಲ್ ಈ ಫೋಟೊ ಹಾಕಿ ಒಂದು ವಾರ ಆಗಿದ್ದರೂ ಕಮೆಂಟ್ ಗಳ ಸುರಿಮಳೆ ಕಡಿಮೆಯಾಗಲಿಲ್ಲ. ಕೆಲವರು ಫೋಟೋ ಚೆನ್ನಾಗಿದೆ ಎಂದು ಕಮೆಂಟ್ ಹಾಕಿದ್ದರೆ ಇನ್ನು ಕೆಲವರು ಮಾವಿನಹಣ್ಣುಗಳು ಚೆನ್ನಾಗಿವೆ, ಹಾಟ್ ಮ್ಯಾಂಗೊ, ಜ್ಯೂಸಿ ಮುಂತಾದ ಕಮೆಂಟ್ ಗಳನ್ನು ಹಾಕಿದ್ದಾರೆ.

ಹಾರರ್‌ ಚಿತ್ರದಲ್ಲಿ ಕಾಲಿವುಡ್ ಬೆಡಗಿ ಹನ್ಸಿಕಾ

#amalapula, #mango, #statement, #balkaninews #filmnews, #kannadasuddigalu

Tags