ಸುದ್ದಿಗಳು

ಸೆನ್ಸಾರ್ ನಲ್ಲಿ ಪಾಸಾದ ‘ಅಮರ್’: ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ

ಕುತೂಹಲ ಮೂಡಿಸಿರುವ ಸಿನಿಮಾ

ಬೆಂಗಳೂರು.ಏ.16: ರೆಬೆಲ್ ಸ್ಟಾರ್ ಅಂಬರೀಶ್ ರ ಪುತ್ರ ಅಭಿಷೇಕ್ ಅಂಬರೀಶ್ ನಟಿಸಿರುವ ಚೊಚ್ಚಲ ಸಿನಿಮಾ ‘ಅಮರ್’. ಸದ್ಯ ಈ ಚಿತ್ರವನ್ನು ನೋಡಿರುವ ಸೆನ್ಸಾರ್ ಮಂಡಳಿಯವರು ಚಿತ್ರವನ್ನು ನೋಡಿ ಸಂತಸ ವ್ಯಕ್ತಪಡಿಸಿ, ಯಾವುದೇ ಕಟ್ಸ್ ಹಾಗೂ ಮ್ಯೂಟ್ ಇಲ್ಲದೇ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಲಾಗಿದೆ.

ಅಮರ್.. ಇದೊಂದು ರೋಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾವಾಗಿದ್ದು, ಅಭಿಷೇಕ್ ಗೆ ಜೋಡಿಯಾಗಿ ತಾನ್ಯಾ ಹೋಪ್ ಕಾಣಿಸಿಕೊಂಡಿದ್ದಾರೆ. ಇನ್ನು ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್, ಟ್ರೈಲರ್, ಮತ್ತು ಮೊದಲ ಹಾಡು… ಎಲ್ಲರ ಮನಸ್ಸನ್ನು ಸೆಳೆದಿದೆ.

Image result for kannada amar movie

Image may contain: 3 people, people smiling, textಇನ್ನು ಮೊದಲ ಹಾಡು ಹಿಟ್ ಆಗುತ್ತಿದ್ದಂತೆ ಎರಡನೇ ಹಾಡನ್ನು ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದ್ದು, ಏಪ್ರಿಲ್ 20 ಕ್ಕೆ ಚಿತ್ರದ ಎರಡನೇ ಹಾಡು ರಿಲೀಸ್ ಆಗುತ್ತದೆ. ಚಿತ್ರಕ್ಕೆ ಅರ್ಜಿನ್ ಜನ್ಯ ಸಂಗೀತ ನೀಡಿದ್ದಾರೆ.

ಅಂದ ಹಾಗೆ ಯು/ಎ ಪ್ರಮಾಣ ಪತ್ರ ಪಡೆದ ಈ ಚಿತ್ರವು ಮೇ ತಿಂಗಳಲ್ಲಿ ರಿಲೀಸ್ ಆಗುತ್ತಿದೆ. ಈ ಮೊದಲೇ ಹೇಳಿದ ಹಾಗೆ ಅಂಬರೀಶ್ ಹುಟ್ಟುಹಬ್ಬದ ದಿನ ಮಗನ ಮೊದಲ ಸಿನಿಮಾ ರಿಲೀಸ್ ಆಗುವ ಸಾದ್ಯತೆ ಇದೆ ಎಂದು ಹೇಳಲಾಗುತ್ತಿದ್ದು, ಸದ್ಯ ಈ ಬಗ್ಗೆ ಚಿತ್ರತಂಡದವರು ರಲ್ಲಿಯೂ ಹೇಳಿಕೊಂಡಿಲ್ಲ.

ನಾಗಶೇಖರ್ ನಿರ್ದೇಶನದ ಈ ಚಿತ್ರವನ್ನು ಸಂದೇಶ್ ನಾಗರಾಜ್ ನಿರ್ಮಾಣ ಮಾಡುತ್ತಿದ್ದು, ಸತ್ಯ ಹೆಗಡೆ ಛಾಯಾಗ್ರಹಣವಿದೆ. ಚಿತ್ರದ ವಿಶೇಷವೆಂದರೆ ಸುಧಾರಾಣಿ, ನಿರೂಪ್ ಭಂಡಾರಿ, ರಚಿತಾ ರಾಮ್, ದರ್ಶನ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಮಂಡ್ಯ ಲೋಕಸಭಾ ಪಕ್ಷೇತರ ಅಭ್ಯರ್ಥಿ ಸುಮಲತ ಬಗ್ಗೆ ನಟ ಉಪೇಂದ್ರ ಹೇಳಿಕೆ…!!!

#amar, #film, #censar, #balkaninews #ambarish, #abhishek, #filmnews, #kannadasuddigalu

Tags