ಸುದ್ದಿಗಳು

ಅಂಬರೀಶ್ ಹುಟ್ಟುಹಬ್ಬಕ್ಕೆ ಒಲವಿನ ಉಡುಗೊರೆಯಾಗಿ ಮೇ 31 ಕ್ಕೆ ಅಮರ್..!!!

ಬಾರೀ ಕುತೂಹಲ ಮೂಡಿಸಿರುವ ಸಿನಿಮಾ

ಬೆಂಗಳೂರು.ಏ.20: ಸ್ಯಾಂಡಲ್ ವುಡ್ ನಲ್ಲಿ ಬಾರೀ ಕುತೂಹಲ ಮೂಡಿಸಿರುವ ಸಿನಿಮಾಗಳಲ್ಲಿ ‘ಅಮರ್’ ಸಿನಿಮಾ ಕೂಡಾ ಒಂದು. ಈಗಾಗಲೇ ಚಿತ್ರದ ಟೀಸರ್, ಟ್ರೈಲರ್ ಮತ್ತು ಹಾಡುಗಳು ಸೂಪರ್ ಹಿಟ್ ಆಗಿದ್ದು, ಚಿತ್ರದ ಬಗ್ಗೆ ಬಾರೀ ನಿರೀಕ್ಷೆಗಳು ಮೂಡಿವೆ.

ಇನ್ನು ಈ ಚಿತ್ರವು ರೊಮ್ಯಾಂಟಿಕ್ ಲವ್ ಸ್ಟೋರಿಯಾಗಿದ್ದರೂ ಸಾಕಷ್ಟು ಆ್ಯಕ್ಷನ್ ಸೀನ್ ಗಳು ಕೂಡಾ ಇರಲಿದ್ದು, ಚಿತ್ರವನ್ನು ವಿದೇಶಗಳಲ್ಲೂ ಶೂಟ್ ಮಾಡಲಾಗಿದೆ. ಇನ್ನು ಚಿತ್ರವನ್ನು ನೋಡಿರುವ ಸೆನ್ಸಾರ್ ಮಂಡಳಿಯು ಯು/ಎ ಪ್ರಮಾಣ ಪತ್ರ ನೀಡಿದೆ.

Image result for kannada Amar movie

ವಿಶೇಷವೆಂದರೆ, ಈ ಚಿತ್ರವು ರೆಬೆಲ್ ಸ್ಟಾರ್ ಅಂಬರೀಶ್ ಬರ್ತಡೆಯ ಉಡುಗೊರೆಯಾಗಿ ಅಂದರೆ, ಮೇ . 31 ರಂದು ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ಇನ್ನು ಚಿತ್ರದಲ್ಲಿ ದರ್ಶನ್, ರಚಿತಾ ರಾಮ್ ಹಾಗೂ ನಿರೂಪ್ ಬಂಡಾರಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Related image

ವಿಶೇಷವೆಂದರೆ, ಮೊನ್ನೆಯಷ್ಟೇ ನಡೆದ ಲೋಕಸಭಾ ಚುನಾವಣೆ ನಡೆದಿದ್ದು, ಈ ಚಿತ್ರವು ತೆರೆಗೆ ಬಂದಾಗ ಮತ ಎಣಿಕೆ ಪ್ರಕ್ರಿಯೆ ಮುಗಿದು ಅದರ ಫಲಿತಾಂಶವೂ ಪ್ರಕಟವಾಗಿರುತ್ತದೆ. ಹೀಗಾಗಿ ಅಭಿಮಾನಿಗಳಿಗೆ ಈ ಚಿತ್ರವು ‘ಒಲವಿನ ಉಡುಗೊರೆ’ಯೆಂದೇ ಹೇಳಬಹುದು.

ಈ ಚಿತ್ರವನ್ನು ‘ಅರಮನೆ’ , ‘ಸಂಜು ವೆಡ್ಸ್ ಗೀತಾ’, ‘ಮೈನಾ’ ಖ್ಯಾತಿಯ ನಾಗಶೇಖರ್ ನಿರ್ದೇಶಿಸಿದ್ದಾರೆ. ಅಭಿಷೇಕ್‌ ಗೆ ನಾಯಕಿಯಾಗಿ ತಾನ್ಯಾ ಹೋಪ್ ನಟಿಸಿದ್ದಾರೆ. ಅವರು ಈಗಾಗಲೇ ದರ್ಶನ್ ನಾಯಕತ್ವದ ‘ಯಜಮಾನ’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಪತ್ನಿ ಸಾಹಿತ್ಯ ಸೀಮಂತ ಕಾರ್ಯಕ್ರಮದ ಸಂತಸದಲ್ಲಿ ಲೂಸ್ ಮಾದ ಯೋಗಿ

#Amar, #film,#released, #balkaninews #filmnews, #kannadasuddigalu, #abhishek, #sumalatha

Tags