ಸುದ್ದಿಗಳು

ಯೂ ಟ್ಯೂಬ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ ‘ಅಮರ್’ ಸಿನಿಮಾ ಸಾಂಗ್

ಮರೆತೇ ಹೋಯಿತು ನನ್ನಯ ಹಾಜರಿ…

ಬೆಂಗಳೂರು.ಏ.14: ಭಿಷೇಕ್ ಅಂಬರೀಶ್ ಚಿತ್ರದ ‘ಅಮರ್’ ಚಿತ್ರದ ಮೊದಲ ಗೀತೆ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಸಂಗೀತ ಲೋಕದ ಹೊಸ ಪ್ರತಿಭೆ ಸಂಚಿತ್ ಹೆಗ್ಡೆ ಕಂಠದಿಂದ ಮೂಡಿ ಬಂದ “ಮರೆತು ಹೋಯಿತು ನನ್ನೆಯ ಹಾಜರಿ” ಇದೀಗ ಸಂಗೀತ ಪ್ರಿಯರ ಮನ ಸೆಳೆದು ಬಿಟ್ಟಿದೆ.

ಇದೀಗ ಯೂಟ್ಯೂಬ್ ತುಂಬಾ ಸಂಚಿತ್ ಹೆಗ್ಡೆಯ ಕಂಠದಿಂದ ಹೊರ ಹೊಮ್ಮಿದ ‘ಮರೆತೇ ಹೋಯಿತು ನನ್ನೆಯ ಹಾಜರಿ’ ಹಾಡಿನದ್ದೇ ಕಲರವ. ಈ ಹಾಡಿಗೆ ಈಗಾಗಲೇ ಒಂದು ಮಿಲಿಯನ್ ಹಿಟ್ಸ್ ದೊರೆತಿದ್ದು ಹಾಡು ಕೇಳಿದ ಪ್ರೇಕ್ಷಕರೆಲ್ಲಾ ಫಿದಾ ಆಗಿರುವುದಂತೂ ಸತ್ಯ.

ಗಾಯಕ ಸಂಚಿತ್ ಹೆಗ್ಡೆ ದನಿಯಲ್ಲಿ ಮೂಡಿ ಬಂದ ಎಲ್ಲಾ ಹಾಡುಗಳು ಹಿಟ್ ಆಗುತ್ತಿರುವುದು ನಮಗೆಲ್ಲಾ ತಿಳಿದೇ ಇದೆ. ಇದೀಗ ಆ ಸಾಲಿಗೆ ನೂತನವಾಗಿ ‘ಅಮರ್’ ಚಿತ್ರದ ಹಾಡುಗಳು ಸೇರ್ಪಡೆಯಾಗಿದೆ.

ಅರ್ಜುನ್ ಜನ್ಯ ಸಂಗೀತ ಹಾಗೂ ಕವಿರಾಜ್ ಅವರ ಪದಗಳು ಈ ಹಾಡಿನಲ್ಲಿವೆ. ಈ ಚಿತ್ರದಲ್ಲಿ ಅಭಿಷೇಕ್ ಮತ್ತು ತಾನ್ಯ ಹೂಪ್ ಜೋಡಿ ಸುಂದರವಾಗಿ ಕಾಣಿಸಿಕೊಳ್ಳಲಿದ್ದಾರೆ. ನಾಗಶೇಖರ್ ನಿರ್ದೇಶನದ ಈ ಸಿನಿಮಾವನ್ನು ಅಂಬಿ ಗೆಳೆಯ ಸಂದೇಶ್ ನಾಗರಾಜ್ ನಿರ್ಮಾಣ ಮಾಡಲಿದ್ದಾರೆ. ಸಿನಿಮಾ ಅಂಬರೀಶ್ ಅವರ ಹುಟ್ಟುಹಬ್ಬದ ವಿಶೇಷವಾಗಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ಜಾಹಿರಾತಿನಲ್ಲಿ ವಿರಾಟ್ ಕೊಹ್ಲಿ ಜೊತೆ ಕಾಣಿಸಿಕೊಳ್ಳಲಿರುವ ಸಾರಾ!!

#amar, #filmsong, #hit, #balkaninews abhishekambareesh, #kannadasuddigalu, #tanyahope

Tags