ಸುದ್ದಿಗಳು

ಸುಮ್ಮನೆ ಕಾಡುವ ‘ಅಮರ್’ ಚಿತ್ರದ ಎರಡನೇ ಹಾಡು

ಮೇ 31 ರಂದು ತೆರೆ ಕಾಣಲಿರುವ ಸಿನಿಮಾ

ಬೆಂಗಳೂರು.ಏ.20: ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ನಟನೆಯ ‘ಅಮರ್’ ಚಿತ್ರದ ಎರಡನೇ ಹಾಡು ಬಿಡುಗಡೆಯಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ‘ಸುಮ್ಮನೇ ಹೀಗೆ ನನ್ನನ್ನೇ’ ಎಂದು ಶುರುವಾಗುವ ಈ ಲಿರಿಕಲ್ ವಿಡಿಯೋ ಹಾಡು ಸಹ ಮೋಡಿ ಮಾಡುತ್ತದೆ.

ಮೊದಲ ಹಾಡಿನಿಂದಲೇ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಮೂಡಿದ್ದವು. ಅದೀಗ ಎರಡನೇ ಹಾಡಿನಿಂದಲೂ ಹೆಚ್ಚಾಗಿದೆ. ಈ ಲಿರಿಕಲ್ ವಿಡಿಯೋದಲ್ಲಿ ಚಿತ್ರದ ಮೇಕಿಂಗ್ ತೋರಿಸಿದ್ದು, ಹಚ್ಚ ಹಸಿರು, ಹರಿಯುವ ನೀರು, ಮಂಜಿನ ನಡುವೆ ನಾಯಕ-ನಾಯಕಿ, ಹಾಗೆಯೇ ಅದ್ಭುತವಾದ ಲೊಕೇಶನ್ ಗಳು ಕಣ್ಣಿಗೆ ಹಬ್ಬ ನೀಡುವಂತಿದೆ.

ಅದೇ ರೀತಿ ಕವಿರಾಜ್ ರಚಿಸಿರುವ ಹಾಡಿನ ಸಾಲುಗಳು ಮನ ಸೆಳೆಯವಂತಿದ್ದು, ಹಾಡಿಗೆ ಸೋನು ನಿಗಮ್ ಹಾಗೂ ಶ್ರೇಯಾ ಘೋಶಾಲ್ ಧ್ವನಿಯಾಗಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಈ ಹಾಡನ್ನು ಆನಂದ್ ಆಡಿಯೋ ಸಂಸ್ಥೆ ರಿಲೀಸ್ ಮಾಡಿದೆ. ಈ ಮೂಲಕ ಚಿತ್ರವು ಬಿಡುಗಡೆಗೂ ಮುನ್ನವೇ ಮ್ಯೂಸಿಕಲ್ ಹಿಟ್ ಆಗುವ ಎಲ್ಲಾ ಸೂಚನೆಗಳು ಸಿಕ್ಕಿವೆ.

ಈ ಚಿತ್ರವನ್ನು ನಾಗಶೇಖರ್ ನಿರ್ದೇಶನ ಮಾಡಿದ್ದು, ನಾಯಕ ಅಭಿಷೇಕ್ ರಿಗೆ ತಾನ್ಯ ಹೂಪ್ ನಾಯಕಿಯಾಗಿದ್ದು, ಈ ಜೋಡಿಯನ್ನು ತೆರೆಯ ಮೇಲೆ ನೋಡುವುದಕ್ಕೆ ಅಭಿಮಾನಿಗಳು ಕಾಯುತ್ತಿದ್ದು, ಬರುವ ತಿಂಗಳ 31 ರಂದು ರಿಲೀಸ್ ಆಗಲಿದೆ.

‘ಯರ್ರಾಬಿರ್ರಿ’ ಚಿತ್ರಕ್ಕೆ ನಾಯಕಿಯಾದ ಬಿಗ್ ಬಾಸ್ ಖ್ಯಾತಿಯ ಸೋನು ಪಾಟೀಲ್

#Amar, #movie, #secondsong, #balkaninews #abhishekambareesh, #filmnews, #kannadasuddigalu

Tags