ಸುದ್ದಿಗಳು

ಅಮರ್ ಮೇಕಿಂಗ್ ಸ್ಟಿಲ್ಸ್ ಹೇಗಿವೆ ಗೊತ್ತಾ..?

ಬೆಂಗಳೂರು,ಮೇ.15: ಅಭಿಷೇಕ್ ಅಂಬರೀಶ್ ನಟನೆಯ ಅಮರ್ ಸಿನಿಮಾದ ಕೆಲವೊಂದು ಮೇಕಿಂಗ್ ಸ್ಟಿಲ್ಸ್ ಬಿಡುಗಡೆಯಾಗಿವೆ.

ಅಮರ್ ಸಿನಿಮಾ ಈಗಾಗಲೇ ಸಖತ್ ಸೌಂಡ್ ಮಾಡುತ್ತಿರುವ ಸಿನಿಮಾ ಇದಾಗಿದೆ. ಈಗಾಗಲೇ ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಈ ಚಿತ್ರದ ಟ್ರೇಲರ್ ಟೀಸರ್ ಫೋಟೋ ಹಾಗೂ ಹಾಡುಗಳು ಭಾರೀ ಸದ್ದು ಮಾಡಿವೆ. ಇದೀಗ ಈ ಸಿನಿಮಾದ ಕೆಲವೊಂದು ಮೇಕಿಂಗ್ ಸ್ಟಿಲ್‌ಗಳು ಬಿಡುಗಡೆಯಾಗಿದ್ದು ಸಖತ್ ಸೌಂಡ್ ಮಾಡ್ತಾ ಇದೆ.

ಅಮರ್ ಸಿನಿಮಾ ಫೋಟೋ ವೈರಲ್

ಹೌದು, ಅಭಿಷೇಕ್ ಅಂಬರೀಶ್ ಅವರ ಚೊಚ್ಚಲ ಸಿನಿಮಾ ಅಮರ್ ಈಗಾಗಲೇ ಬಿಡುಗಡೆಗೆ ರೆಡಿಯಾಗಿದೆ. ಇದೀಗ ಈ ಸಿನಿಮಾದ ಕೆಲವೊಂದು ಫೋಟೋಗಳು ಸದ್ದು ಮಾಡುತ್ತಿವೆ. ಅಭಿ ಹಾಗೂ ತಾನ್ಯಾ ಹೋಪ್ ಅವರ ಫೋಟೋಗಳು ಇವಾಗಿವೆ. ನ್ಯಾಚುರಲ್ ಆಗಿ ಮೂಡಿ ಬಂದಿರುವ ಫೋಟೋಗಳು ಅಭಿಮಾನಿಗಳಿಗೆ ಇಷ್ಟ ಆಗಿವೆ.

ನಾಗಶೇಖರ್ ಆಕ್ಷನ್ ಕಟ್ ಹೇಳಿರುವ ಸಿನಿಮಾ

ಇನ್ನು ಈ ಸಿನಿಮಾಗೆ  ನಾಗಶೇಖರ್ ಆಕ್ಷನ್ ಕಟ್ ಹೇಳಿದ್ದಾರೆ. ಈ ಹಿಂದೆ ಮೈನಾ, ಸಂಜು ವೆಡ್ಸ್ ಗೀತ ಸಿನಿಮಾಗಳನ್ನು ನಿರ್ದೇಶಿಸಿದ್ದ ನಿರ್ದೇಶಕ ನಾಗಶೇಖರ್, ಅಭಿಷೇಕ್ ನಟನೆಯ ಚಿತ್ರಕ್ಕೂ ನಿರ್ದೇಶನ ಮಾಡಿದ್ದಾರೆ. ಇನ್ನು ಅಂಬಿ ಪುತ್ರನ ಮೊದಲ ಚಿತ್ರವನ್ನು ಸಂದೇಶ್ ನಾಗರಾಜ್ ನಿರ್ಮಾಣ ಮಾಡ್ತಿದ್ದು, ಮೈನಾ ಹಾಗೂ ಸಂಜು ವೆಡ್ಸ್ ಗೀತ ಚಿತ್ರಗಳಲ್ಲಿ ವರ್ಕ್ ಮಾಡಿದ್ದ ತಂತ್ರಜ್ಞರೇ ಈ ಸಿನಿಮಾದಲ್ಲೂ ಕೆಲಸ ಮಾಡ್ತಿದ್ದಾರೆ. ಸದ್ಯ ಬಾರೀ ನಿರೀಕ್ಷೆ ಹುಟ್ಟುಹಾಕಿರುವ ಈ ಸಿನಿಮಾ ಸದ್ಯ ತೆರೆಗೆ ಬಂದ ನಂತರ ಏನೆಲ್ಲಾ ಕಮಾಲ್ ಮಾಡಲಿದೆ ಅಂತಾ ಕಾದು ನೋಡಬೇಕು.

‘ಸಾಹೋ’ ಹಿಂದಿಗೂ ತಮ್ಮ ಧ್ವನಿಯಲ್ಲೇ ಡಬ್ ಮಾಡಲಿರುವ ಪ್ರಭಾಸ್!

#amar #amarkanandamovie #amar2019

Tags

Related Articles