ಸುದ್ದಿಗಳು

‘ಅಮರ್’ಗಾಗಿ ಸ್ವಿಡ್ಜರ್ ಲ್ಯಾಂಡಿನ ಮೈಕೊರೆವ ಚಳಿಯಲ್ಲಿ ತಾನ್ಯಾ,ಅಭಿಷೇಕ್ ..!

ಭರದಿಂದ ಸಾಗುತ್ತಿರುವ ಚಿತ್ರದ ಚಿತ್ರೀಕರಣ

ಬೆಂಗಳೂರು,ನ,13:ಸ್ವಿಡ್ಜರ್ ಲ್ಯಾಂಡಿನಲ್ಲಿ “ಅಮರ್” ಚಿತ್ರತಂಡ ಎರಡನೇ ಭಾಗದ ಚಿತ್ರೀಕರಣದಲ್ಲಿ ಬ್ಯೂಸಿಯಾಗಿದೆ. ಅಲ್ಲಿ ಚಿತ್ರತಂಡಕ್ಕೆ ಚಳಿಯಿಂದ ಕೂಡಿದ ಶೀತಲ ವಾತಾವರಣದ ಅನುಭವವಾಗಿದೆಯಂತೆ. ಹೌದು, ನಟ ಅಭಿಷೇಕ್ ಅಂಬರೀಶ್ ಹಾಗೂ ತಾನ್ಯಾ ಹೋಪ್ ಅಲ್ಲಿನ ಐದು ಡಿಗ್ರಿ ತಾಪಮಾನವಿರುವ ಶೀತಲ ವಾತಾವರಣದಲ್ಲೇ ಹಾಡು ಹಾಗೂ ಕೆಲ ದೃಶ್ಯಗಳ ಚಿತ್ರೀಕರಣದಲ್ಲಿ ಪಾಲ್ಗೋ0ಡಿದ್ದಾರೆ.ಉಸಿರಾಟಕ್ಕೆ ಕಷ್ಟ ಪಟ್ಟ ತಾನ್ಯ …!

ಸದ್ಯ ತಾನ್ಯಾ ಧರಿಸಿದ ಉಡುಪಿನ ಕಾರಣ ಇಂತಹ ವಾತಾವರಣದಲ್ಲಿ ಶೂಟಿಂಗ್ ನಲ್ಲಿ ಭಾಗವಹಿಸುವುದು ತುಂಬಾ ಕಷ್ಟವಾಗಿದ್ದು,ಶೀತಲ ವಾತಾವರಣದಿಂದ ಉಸಿರಾಡುವುದಕ್ಕೆ ಸಹ ಕಷ್ಟವಾಗಿದೆಯಂತೆ.

ಡಿಸೆಂಬರ್ 15ಕ್ಕೆ ಚಿತ್ರದ ಶೂಟಿಂಗ್ ಮುಕ್ತಾಯ …!

ಚಿತ್ರದಲ್ಲಿ ದೇವರಾಜ್, ಚಿಕ್ಕಣ್ಣ, ಸಾಧು ಕೋಕಿಲಾ ಸೇರಿದಂತೆ ಬಹುದೊಡ್ಡ ತಾರಾಬಳಗವಿದ್ದು, ನಾಗಶೇಖರ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯ ಈ ಚಿತ್ರದ ಚಿತ್ರೀಕರಣ ಆಲ್ಫ್ ಪರ್ವತ ಶ್ರೇಣಿಗಳಲ್ಲಿ ನವೆಂಬರ್ 18ರವರೆಗೆ ನಡೆಯಲಿದೆ. ಇದಾದ ಬಳಿಕ ಬೆಂಗಳೂರಿಗೆ ಹಿಂತಿರುಗಲಿರುವ ಚಿತ್ರತಂಡ ಡಿಸೆಂಬರ್ 15ಕ್ಕೆ ಚಿತ್ರೀಕರಣ ಪೂರ್ಣಗೊಳಿಸುವ ಯೋಜನೆ ಹಾಕಿಕೊಂಡಿದೆಯಂತೆ.

ಚಿತ್ರಕ್ಕೆ ಸತ್ಯ ಹೆಗಡೆ ಛಾಯಾಗ್ರಹಣ ವಿದ್ದು, ಅರ್ಜುನ್ ಜನ್ಯ ಸಂಗೀತ ಈ ಚಿತ್ರಕ್ಕಿದೆ. ಸುಧಾರಾಣಿ, ನಿರೂಪ್ ಭಂಡಾರಿ, ರಚಿತಾ ರಾಮ್ ಸಹ ಚಿತ್ರದಲ್ಲಿಕಾಣಿಸಿಕೊಳ್ಳಲಿದ್ದಾರೆ.

Tags

Related Articles