ಸುದ್ದಿಗಳು

‘ಅಮರ್’ ಸಿನಿಮಾದಲ್ಲಿ ನಟ ದರ್ಶನ್…

ಬೆಂಗಳೂರು,ಜ.8: ಅಂಬರೀಶ್ ಮಗನ ಮೊದಲ ಸಿನಿಮಾ ‘ಅಮರ್’ ಈಗಾಗಲೇ ಸೆಟ್ಟೇರಿದೆ. ಚಿತ್ರೀಕರಣ ಕೂಡ ಭರದಿಂದ ಸಾಗಿದೆ. ಇದೀಗ ಈ ಸಿನಿಮಾ ತಂಡದಿಂದ ದರ್ಶನ್ ಅಭಿಮಾನಿಗಳಿಗೊಂದು ಸಿಹಿ ಸುದ್ದಿ ಇದೆ.

‘ಅಮರ್’ ಚಿತ್ರದ ಚಿತ್ರೀಕರಣ

ಅಂಬರೀಶ್ ಅವರ ಏಕೈಕ ಪುತ್ರ ಅಭಿಷೇಕ್ ಇದೀಗ ಸಿನಿಮಾ ರಂಗದಲ್ಲಿ ಸ್ಥಾನ ಊರಲು ರೆಡಿಯಾಗಿದ್ದಾರೆ. ಈಗಾಗಲೇ ಈ ನಟನ ಸಿನಿಮಾ ಅಮರ್ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಅಂಬಿ ತೀರಿಕೊಂಡ ನಂತರ ಸಿನಿಮಾ ಚಿತ್ರೀಕರಣ ಸ್ಥಗಿತಗೊಂಡಿತ್ತು. ಆದರೆ ಇದೀಗ ಮತ್ತೆ ಸಿನಿಮಾ ಚಿತ್ರೀಕರಣ ಪ್ರಾರಂಭಗೊಂಡಿದೆ. ಈ ಬೆನ್ನಲ್ಲೇ ಈ ಸಿನಿಮಾ ತಂಡದಿಂದ ಇದೀಗ ಹೊಸ ವಿಚಾರವೊಂದು ಹೊರ ಬಿದ್ದಿದೆ. ಇದು ದರ್ಶನ್ ಅಭಿಮಾನಿಗಳಿಗೆ ಖುಷಿಯ ವಿಚಾರ ಅಂದರೆ ತಪ್ಪಾಗಲಾರದು.

Image may contain: 3 people, people sitting

ಅಭಿಷೇಕ್ ಮೊದಲ ಸಿನಿಮಾ

ಹೌದು, ಅಭಿಷೇಕ್ ಅಭಿನಯದ ಅಮರ್ ಸಿನಿಮಾಗೆ ಮೈನಾ, ಸಂಜು ವೆಡ್ಸ್ ಗೀತ ಸಿನಿಮಾಗಳನ್ನ ನಿರ್ದೇಶಿಸಿದ್ದ ನಿರ್ದೇಶಕ ನಾಗಶೇಖರ್ ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರ ಸದ್ಯ ಅಭಿಷೇಕ್ ನಟನೆಯ ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದಾರೆ. ಅಂಬಿ ಪುತ್ರನ ಮೊದಲ ಚಿತ್ರವನ್ನ ಸಂದೇಶ್ ನಾಗರಾಜ್ ನಿರ್ಮಾಣ ಮಾಡ್ತಿದ್ದಾರೆ.. ಮೈನಾ ಹಾಗೂ ಸಂಜು ವೆಡ್ಸ್ ಗೀತ ಚಿತ್ರಗಳಲ್ಲಿ ವರ್ಕ್ ಮಾಡಿದ್ದ ತಂತ್ರಜ್ಞರೇ ಈ ಸಿನಿಮಾದಲ್ಲೂ ಕೆಲಸ ಮಾಡ್ತಿದ್ದಾರೆ. ಇದೀಗ ಈ ಸಿನಿಮಾ ಶೂಟಿಂಗ್ ಕೂಡ ಭರದಿಂದ ಸಾಗುತ್ತಿದ್ದು ಈ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ಕೂಡ ನಟಿಸುತ್ತಿದ್ದಾರೆ.

ದರ್ಶನ್ ಪಾತ್ರ ಸಸ್ಪೆನ್ಸ್

ಎಸ್ ಈ ಸಿನಿಮಾದಲ್ಲಿ ನಟ ದರ್ಶನ್ ನಟಿಸುತ್ತಿದ್ದಾರೆ. ಸದಾ ಅಂಬಿ ದತ್ತು ಮಗನಂತಿದ್ದ ದರ್ಶನ್ ಇದೀಗ ತಮ್ಮನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹೀಗೆ ಎಲ್ಲದರಲ್ಲೂ ದರ್ಶನ್ ಅಂಬಿ ಕುಟುಂಬದ ಜೊತೆ ಭಾಗಿಯಾಗಯತ್ತಿದ್ದರು. ಇದೀಗ ಅಮರ್ ಸಿನಿಮಾದಲ್ಲೂ ಕೂಡ ನಟಿಸಲಿದ್ದಾರಂತೆ. ಇದಕ್ಕೆ ಪೂರಕ ಎಂಬಂತೆ ಅಮರ್ ಚಿತ್ರೀಕರಣ ಸ್ಥಳದಲ್ಲಿ ದರ್ಶನ್ ಕಾಣಿಸಿರುವುದು. ಅಷ್ಟೆ ಅಲ್ಲ ಅಭಿ ಈ ದರ್ಶನ್ ಜೊತೆ ಇರುವ ವಿಡಿಯೋಗಳನ್ನು ಮಾಡಿರುವುದು. ಇದೀಗ ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ದರ್ಶನ್ ಪಾತ್ರ ಏನು ಎಂಬುದು ಮಾತ್ರ ಇನ್ನು ತಿಳಿದಿಲ್ಲ.

 

Tags

Related Articles