ಸುದ್ದಿಗಳು

ರೆಬೆಲ್ ಸ್ಟಾರ್ ಕೆನ್ನೆಗೆ ಮುತ್ತಿಟ್ಟ ಹರ್ಷಿಕಾ ಪೂಣಚ್ಚ

‘ದಿ ವಿಲನ್’ ಆಡಿಯೋ ಬಿಡುಗಡೆಗೆ ಸುದೀಪ್ ಗೈರು!!

ದುಬೈನಲ್ಲಿ ನಡೆದ ದಿ ವಿಲನ್ಸಿನಿಮಾದ ಕಲರ್ಫುಲ್ಸ್ಟಾರ್ನೈಟ್ನಲ್ಲಿ ರೆಬೆಲ್ಸ್ಟಾರ್​​​​​​ ಕೆನ್ನೆಗೆ ವೇದಿಕೆ ಮೇಲೆ ನಟಿ ಹರ್ಷಿಕಾ ಪೂಣಚ್ಚ ಮುತ್ತು ಕೊಟ್ಟಿದ್ದಾರೆ..

ದುಬೈ,ಆ.26: ನಟ ಶಿವರಾಜ್ ಕುಮಾರ್ ಹಾಗೂ ಸುದೀಪ್ ನಟನೆಯ ಬಹುನಿರೀಕ್ಷಿತ  ‘ದಿ ವಿಲನ್’ ಸಿನಿಮಾದ ಅದ್ದೂರಿ ಆಡಿಯೋ ಕಾರ್ಯಕ್ರಮ ದುಬೈ ನಲ್ಲಿ ನಡೆದಿದೆ. ಕಳೆದ ಶುಕ್ರವಾರ ಸಿನಿಮಾದ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿತ್ತು. ದುಬೈನಲ್ಲಿ ನಡೆದ ದಿ ವಿಲನ್​ ಸಿನಿಮಾದ ಕಲರ್ ​ಫುಲ್​ ಸ್ಟಾರ್ ​ನೈಟ್​ ನಲ್ಲಿ ರೆಬೆಲ್​ ಸ್ಟಾರ್​​​​​​ ಕೆನ್ನೆಗೆ ವೇದಿಕೆ ಮೇಲೆ ನಟಿ ಹರ್ಷಿಕಾ ಪೂಣಚ್ಚ ಮುತ್ತು ಕೊಟ್ಟಿದ್ದಾರೆ.  ಅಷ್ಟೇ ಅಲ್ಲದೆ ವೇದಿಕೆ ಮೇಲೆ ಅಂಬರೀಷ್​ ಜೊತೆ ಹೆಜ್ಜೆ ಹಾಕಿರೋ ಹರ್ಷಿಕಾ ಪೂಣಚ್ಚ ಅಂಬರೀಷ್​ ಕೆನ್ನೆಗೆ ಆತ್ಮೀಯವಾಗಿ ಮುತ್ತು ಕೊಟ್ಟು, ಆಲಂಗಿಸಿಕೊಂಡಿದ್ದಾರೆ. ಈ ಸ್ಟಾರ್​ ನೈಟ್​ ಕಾರ್ಯಕ್ರಮದಲ್ಲಿ ದಿ ವಿಲನ್​ ಸಿನಿಮಾ ಟೀಮ್​ ಜೊತೆಗೆ ಹರ್ಷಿಕಾ ಪೂಣಚ್ಚ, ಕಾರುಣ್ಯ ರಾಮ್​, ಸೋನು ಗೌಡ, ಕೃಷಿ ತಾಪಂಡ ಸೇರಿದಂತೆ ಹಲವಾರು ಸ್ಯಾಂಡಲ್​​ ವುಡ್​ ನಟಿಯರು ಹೆಜ್ಜೆ ಹಾಕಿದ್ದಾರೆ. ಇವರೆಲ್ಲರ ಜೊತೆ ರೆಬೆಲ್​ ಸ್ಟಾರ್​ ಕೂಡ​ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ.

ಸುದೀಪ್ ಬರಲಿಲ್ಲ ಯಾಕೆ?

ಸುದೀಪ್ ಗೈರು!!

ಅಂದಹಾಗೆ, ಈ ಕಾರ್ಯಕ್ರಮ ಅನೇಕ ವಿಶೇಷತೆಗಳನ್ನು ಹೊಂದಿತ್ತು. ನಟ ಸುದೀಪ್ ಅವರನ್ನು ಹೊರತು ಪಡಿಸಿ ಇಡೀ ಚಿತ್ರತಂಡ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು. ನಟ ಶಿವರಾಜ್ ಕುಮಾರ್, ನಟಿ ಆಮಿ ಜಾಕ್ಸನ್, ನಿರ್ದೇಶಕ ಪ್ರೇಮ್, ನಿರ್ಮಾಪಕ ಸಿ ಆರ್ ಮನೋಹರ್ ಹಾಗೂ ಅರ್ಜುನ್ ಜನ್ಯ ಕಾರ್ಯಕ್ರಮದಲ್ಲಿ ಹಾಜರಿದ್ದರು.

Tags