ಸುದ್ದಿಗಳು

ಅಂಬಿ ಹುಟ್ಟುಹಬ್ಬದ ದಿನದಂದು ಅಭಿಮಾನಿಗಳಿಗೆ ತ್ರಿಬಲ್ ಧಮಾಕಾ!!

ಬೆಂಗಳೂರು,ಏ.24: ರೆಬಲ್ ಸ್ಟಾರ್ ಅಂಬರೀಶ್ ಗೆ ಕನ್ನಡದಲ್ಲಿ ಸಾವಿರಾರು ಅಭಿಮಾನಿಗಳಿದ್ದಾರೆ ಅದರ ಬಗ್ಗೆ ಎರಡು ಮಾತಿಲ್ಲ. ಅವರ ಚಿತ್ರಗಳಿಗೆ ಕಾದು ಕೂರುತಿದ್ದ ಜನರಿಂದ ಹಿಡಿದು ಈಗಲೂ ಕಿರುತೆರೆ ಮೇಲೆ ಬರುವ ಅವರ ಚಿತ್ರಗಳನ್ನ ತಪ್ಪದೇ ವೀಕ್ಷಿಸುವ ಕಟ್ಟಾ ಅಭಿಮಾನಿಗಳು ಅಂಬಿಗಿದ್ದಾರೆ. ಇನ್ನೂ ಅಂಬಿಗೆ ತನ್ನ ಮಗ ದೊಡ್ಡ ಸ್ಟಾರ್ ಆಗೋದನ್ನು ನೋಡ್ಬೇಕು ಅನ್ನೋ ಆಸೆಯಿತ್ತು, ಆದ್ರೆ ಅದನ್ನು ಕಣ್ತುಂಬಿಕೊಳ್ಳವ ಮೊದಲೇ ನಮ್ಮಿಂದ ದೂರಾದ್ರು ಕನ್ವರ್ ಲಾಲ್. ಆದ್ರೆ ಅಂಬಿ ಮಗ ಅಭಿ ಮಾತ್ರ ಅಪ್ಪನ ನನಸು ಮಾಡಲು ದೃಡ ನಿರ್ಧಾರದಿಂದ ಮುನ್ನುಗ್ಗಿದ್ರು.

Image result for amar movie kannada

ಯು/ ಸರ್ಟಿಫಿಕೇಟ್
ಈಗಾಗ್ಲೇ ಅಮರ್ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಾಗಿದೆ. ಮುಂದಿನ ತಿಂಗಳು 29ರಂದು ಅಂಬಿ ಬರ್ತ್ಡೇ ಇದೆ. ಹೀಗಾಗಿ ಅಭಿಷೇಕ್ ಅಭಿನಯದ ಸೂಪರ್ ಹಿಟ್ ಚಿತ್ರ ‘ಅಮರ್’ ಅಂಬಿ ಹುಟ್ಟುಹಬ್ಬದ ಟೈಮಿಗೆ ರಿಲೀಸ್ ಆಗ್ತಿದೆ. ಇನ್ನೊಂದ್ ಖುಷಿ ವಿಷ್ಯ ಅಂದ್ರೆ ಅಂಬಿ ಡಬ್ಬಲ್ ಆ್ಯಕ್ಟಿಂಗ್ ಮೂಲಕ ಮಿಂಚಿದ್ದ ಅಂತ ಚಿತ್ರ ಕೂಡ ‘ಅಮರ್’ ರಿಲೀಸ್ ದಿನವೇ ರೀ ರಿಲೀಸ್ ಆಗ್ತಿದೆ. ಹೀಗಾಗಿ ಅಂಬಿ ಅಭಿಮಾನಿಗಳಿಗೆ ಇದೊಂದು ಹಬ್ಬ ಅಂದ್ರೆ ತಪ್ಪಾಗಲ್ಲ. ಇನ್ನೂ ಒಂದೆಡೆ ಅಮರ್ ಹಾಗೂ ಅಂತ ಫಿಲ್ಮ್ ರಿಲೀಸ್ ಆದ್ರೆ ಮತ್ತೊಂದೆಡೆ ಅಂಬಿ ಮಾಮನ ಹುಟ್ಟುಹಬ್ಬ ಹೀಗಾಗಿ ಅಭಿಮಾನಿಗಳ ಪಾಲಿಗೆ ಇದು ತ್ರಿಬಲ್ ಧಮಾಕಾವೇ ಸರಿ…

ಕಿರುತೆರೆಯ ಚಾಕಲೇಟ್ ಹುಡುಗ ಚಂದನ್ ಕುಮಾರ್ !!

#ambareesh #sandalwood #abhishek

Tags