ಸುದ್ದಿಗಳು

ಅಂಬಿ ಅಪ್ಪಾಜಿಯನ್ನು ಕಳೆದುಕೊಂಡಿರುವದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ!!

ದಚ್ಚು ಕೂಡಲೇ ಬೆಂಗಳೂರಿಗೆ ವಾಪಸ್ಸ್

ಬೆಂಗಳೂರು,ನ.25: ಹಿರಿಯ ನಟ ರೆಬಲ್ ಸ್ಟಾರ್ ಅಂಬರೀಶ್ ನಿನ್ನೆಯಷ್ಟೇ ನಿಧನ ಹೊಂದಿದ್ದಾರೆ.. ಇನ್ನು ಇದೇ ವೇಳೆಯಲ್ಲಿ ತಮ್ಮ ಮೆಚ್ಚಿನ ನಟನನ್ನು ಕಳೆದುಕೊಂಡ ಹಿನ್ನಲೆಯಲ್ಲಿ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿದೆ.. ಈಗ ಹಲವಾರು ಸ್ಟಾರ್ ನಟರು ಕಂಬನಿ ಮಿಡಿದಿದ್ದು ದರ್ಶನ್ ತೂಗುದೀಪ್ ಕೂಡ ದುಃಖವನ್ನು ವ್ಯಕ್ತ ಪಡಿಸಿದ್ದಾರೆ..

Image result for darshan

 

ದರ್ಶನ್ ಹಾಗೂ ಅಂಬಿ

ದರ್ಶನ್ ಹಾಗೂ ಅಂಬಿ ಒಟ್ಟಿಗೆ ತೆರೆ ಮೇಲೆ ನಟಿಸಿದ್ದಾರೆ. ‘ಅಂಬರೀಶ್’, ‘ಬುಲ್ ಬುಲ್’ , ‘ದೇವರ ಮಗ’ ಚಿತ್ರದಲ್ಲಿ ನಟಿಸಿದ್ದು ಇವರಿಬ್ಬರ ಬಾಂಧವ್ಯ ಗಟ್ಟಿಯಾಗಿದೆ..  ದರ್ಶನ್ ‘ಯಜಮಾನ’ ಚಿತ್ರದ ಶೂಟಿಂಗ್ ಪ್ರಯುಕ್ತ  ಸ್ವೀಡನ್ ಗೆ ಹೋಗಿದ್ದು, ಅಂಬಿಯ ನಿಧನದ ಸುದ್ದಿಯನ್ನು ಕೇಳಿ ಶಾಕ್ ಆದ ದಚ್ಚು ಕೂಡಲೇ ಬೆಂಗಳೂರಿಗೆ ವಾಪಸ್ಸಾಗುವುದಾಗಿ ಹೇಳಿದ್ದಾರೆ..

ದರ್ಶನ್ ಟ್ವೀಟ್

ಅಂಬಿ ಅಪ್ಪಾಜಿಯನ್ನು ಕಳೆದುಕೊಂಡಿರುವದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ.ಸ್ವೀಡನ್ ಅಲ್ಲಿ ನಡೆಯುತ್ತಿದ್ದ ಯಜಮಾನ ಶೂಟಿಂಗ್ ರದ್ದುಗೊಳಿಸಿ ಇಡೀ ತಂಡ ಆದಷ್ಟೂ ಬೇಗ ಬೆಂಗಳೂರಿಗೆ ವಾಪಸಾಗುತ್ತಿದ್ದೇವೆ.

Tags