ಸುದ್ದಿಗಳು

ಭತ್ತದ ಪೈರಿನಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅಭಿಮಾನ..!!!

ಅಭಿನಂದನೆ ತಿಳಿಸಿದ ಸುದೀಪ್ ಹಾಗೂ ಸುಮಲತಾ ಅಂಬರೀಶ್

ಮಂಡ್ಯ.ಫೆ.10

ಗದ್ದೆಯ ನಡುವೆ ಹೃದಯಾಕಾರದಲ್ಲಿ ‘ಮತ್ತೆ ಹುಟ್ಟಿ ಬಾ ಅಂಬರೀಷ್ ಅಣ್ಣ’ ಎಂದು ಬರೆದು ಬಿತ್ತನೆ ಬೀಜ ಬಿತ್ತಿದ್ದಾರೆ. ಈಗ ಪೈರು ಮೇಲಕ್ಕೆ ಬೆಳೆದು ಬಂದಿದ್ದು ಅಂಬರೀಷ್ ಮೇಲಿನ ಅಭಿಮಾನಕ್ಕೆ ಸಾಕ್ಷಿಯಾಗಿದೆ.

ಮತ್ತೆ ಹುಟ್ಟಿ ಬಾ ಅಣ್ಣ

ನಟ ಕಮ್ ರಾಜಕಾರಣಿ ಅಂಬರೀಶ್ ನಮ್ಮನ್ನೆಲ್ಲಾ ದೈಹಿಕವಾಗಿ ಅಗಲಿದ್ದರೂ ಸಹ ಮಾನಸಿಕವಾಗಿ ಅಗಲಿಲ್ಲ. ಅವರ ಅಭಿಮಾನಿಗಳು ಅವರನ್ನು ಸದಾ ಕಾಲ ನೆನಪಿಸಿಕೊಳ್ಳುತ್ತಿರುತ್ತಾರೆ.

ಈಗ ಮಂಡ್ಯ ಜಿಲ್ಲೆಯ ಮೊತ್ತಹಳ್ಳಿ ಗ್ರಾಮದ ಎಂ.ಪಿ. ಹರ್ಷಿತ್, ರಾಜು ಕಾಳಪ್ಪ, ಎಂ. ಜೆ. ದಿಲೀಪ್ ಕುಮಾರ್ ಸಹೋದರರು ತಮ್ಮ ಗದ್ದೆಯಲ್ಲಿ ಭತ್ತದ ಬಿತ್ತನೆ ಬೀಜ ಬಿತ್ತುವ ಮೂಲಕವೇ ಅಂಬರೀಷ್ ಮೇಲಿನ ಅಭಿಮಾನ ಮೆರೆದಿದ್ದಾರೆ.

ಇವರು ಅಂಬರೀಷ್ ಪುಣ್ಯತಿಥಿಯ ದಿನ ಕೇಶಮುಂಡನ ಮಾಡಿಸಿಕೊಂಡು ಶ್ರದ್ದಾಂಜಲಿ ಸಲ್ಲಿಸಿದ್ದರು. ಹಾಗೆಯೇ ಇವರೀಗ ವಿಶಿಷ್ಠ ರೀತಿಯಲ್ಲಿ ಅಂದರೆ, ಭತ್ತದ ಪೈರಿನಲ್ಲಿ ‘ಮತ್ತೆ ಹುಟ್ಟಿ ಬಾ ಅಂಬರೀಷ್ ಅಣ್ಣ’ ಎಂದು ಎದ್ದು ಕಾಣುವ ಹಾಗೆ ಬಿತ್ತನೇ ಬೀಜ ಬಿತ್ತಿ ಬೆಳೆಸಿದ್ದಾರೆ.

ನಿಮಗೆಲ್ಲಾ ಅಭಿನಂದನೆಗಳು

ಸದ್ಯ ಭತ್ತದ ಪೈರಿನಲ್ಲಿ ಮೂಡಿರುವ ಅಂಬರೀಷ್ ಅಭಿಮಾನದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಬಗ್ಗೆ ಅಂಬರೀಷ್ ಪತ್ನಿ ಸುಮಲತಾ ಹಾಗೂ ಕಿಚ್ಚ ಸುದೀಪ್ ತಮ್ಮ ಟ್ವೀಟರ್ ಖಾತೆಗಳಲ್ಲಿ ಈ ಚಿತ್ರಗಳನ್ನು ಪ್ರಕಟಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದೇ ಶಾಶ್ವತ ಪ್ರೇಮ, ಅಭಿಮಾನ ತೋರಿಸಲು ಎಂತಹ ಸುಂದರ ಅಭಿವ್ಯಕ್ತಿ, ಮನಸ್ಸು ತುಂಬಿ ಬಂದಿದೆ ಹಾಗೂ ಯಾರು ಹೃದಯದಲ್ಲಿ ಜೀವಿಸುತ್ತಾರೋ ಅವರಿಗೆ ಎಂದಿಗೂ ಸಾವಿಲ್ಲ” ಎಂದು ಸುಮಲತಾ ಹಾಗೂ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ.

ಟ್ರೋಲಿಗರಿಂದ ಮೆಚ್ಚುಗೆ ಪಡೆದ ಸನ್ನಿ ಫೋಟೋ!!

#ambarish, #balkaninews formers, #filmnews, #kannadasuddigalu, #sudeep, #sumalatha

Tags