ಸುದ್ದಿಗಳು

ಅಂಬಿ ಅದೃಷ್ಟದ ಮನೆಗೆ ಸುಮಲತಾ..?

ಬೆಂಗಳೂರು,ಮಾ.4: ಸದ್ಯ ಸುಮಲತ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಈ ಬೆನ್ನಲ್ಲೇ ಇದೀಗ ಸುಮಲತ ಅಂಬಿಯ ಅದೃಷ್ಯದ ಮನೆಗೆ ಹೋಗುತ್ತಿದ್ದಾರಂತೆ.

ಅಂಬಿ ಸಿನಿಮಾ ರಂಗದ ಜೊತೆಗೆ ರಾಜಕೀತದಲ್ಲೂ ಕೂಡ ಹೆಸರು ಮಾಡಿದವರು, ಶಾಸಕ ಸಚಿವರಾಗಿ ಜನ ಸೇವೆಯಲ್ಲೂ ಇದ್ದರು. ಮಂಡ್ಯದಿಂದಲೇ ಗೆದ್ದು ಮಂಡ್ಯದ ಜನತೆಗೆ ಊರುಗೋಲಾಗಿದ್ದರು. ಅಂಬಿ ರಾಜಕೀಯಕ್ಕೆ ಬಂದ ನಂತರ ಬಾಡಿಗೆ ಮನೆಯೊಂದರಲ್ಲಿ ಇದ್ದರು. ಮಂಡ್ಯದ ಚಾಮುಂಡೇಶ್ವರಿ ನಗರದಲ್ಲಿ ಮನೆಯೊಂದನ್ನು ಬಾಡಿಗೆ ಪಡೆದಿದ್ದರಂತೆ. ನಂತರ ಅಂಬಿಗೆ ಈ ಮನೆಗೆ ಬಂದಾದ ಮೇಲೆ ಅದೃಷ್ಟಯ ಖುಲಾಯಿಸಿತು ಎನ್ನುವ ಮಾತಿದೆ.

ಯಾವ ಪಕ್ಷದಿಂದ ನಿಲ್ಲುತ್ತಾರೆ ಸುಲಮತ

ಇದೀಗ ಅಂಬಿಯ ಪತ್ನಿ ನಟಿ ಸುಮಲತ ಕೂಡ ಲೋಕಸಭೆ ಚುನಾವಣೆಗೆ ನಿಲ್ಲುತ್ತಿದ್ದಾರೆ ಎನ್ನುವ ಮಾತುಗಳು ಓಡಾಡುತ್ತಿದೆ. ಆದರೆ ಯಾವ ಪಕ್ಷ ಅನ್ನೋದು ಅಂತಿಮವಾಗಿಲ್ಲ. ಸುಮಲತ ಕಾಂಗ್ರೆಸ್ ನಿಂದಲೇ ನಿಲ್ಲೋದು ಅಂದರೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡುತ್ತಾ ಅನ್ನೋದು ಮುಖ್ಯವಾಗಿದೆ. ಇದೀಗ ಈ ಬೆನ್ನಲ್ಲೇ ಮಂಡ್ಯದಲ್ಲಿ ಬಾಡಿಗೆ ಮನೆ ಮಾಡಲು ಸುಮಲತಾ ನಿರ್ಧಾರ ಮಾಡಿದ್ದಾರೆ.

ಆದಷ್ಟು ಬೇಗ ಮನೆಗೆ ಶಿಫ್ಟ್..?

ಅದರಂತೆ ಅಂಬಿಯ ಅದೃಷ್ಟದ ಮನೆಗೆ ಸುಮಲತ ಹೋಗುತ್ತಾರೆ ಎನ್ನಲಾಗುತ್ತಿದೆ. ಈಗಾಗಲೇ ಮನೆಯ ಮಾಲೀಕರ ಜೊತೆ ಮಾತು ಕೂಡ ಆಡಿದ್ದಾರಂತೆ. ಮಾಲೀಕರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಸುಮಲತ ಆ ಮನೆಗೆ ಶಿಫ್ಟ್ ಆಗುತ್ತಾರೆ ಎನ್ನಲಾಗಿದೆ. ಸದ್ಯ ಮಂಡ್ಯದಿಂದಲೇ ಸ್ಪರ್ಧಿಸೋದು ಖಚಿತವಾದ ನಂತರ ಈ ನಟಿ ಆ ಮನೆಗೆ ಹೋಗುತ್ತಿದ್ದಾರೆ.

ರಣ್ ಬೀರ್ ಜೊತೆಗೆ ದೀಪಿಕಾ ತೆರೆ ಹಂಚಿಕೊಂಡರೆ, ರಣ್ ವೀರ್ ಪ್ರತಿಕ್ರಿಯೆ ಏನು ಗೊತ್ತೆ…?

Tags