ಸುದ್ದಿಗಳು

‘ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರದ ಆಡಿಯೋ ಬಿಡುಗಡೆ ಮುಂದಕ್ಕೆ.. !!!

ಎಲ್ಲವೂ ಅಂದು ಕೊಂಡಂತಾಗಿದ್ದರೆ ನಿನ್ನೆ ‘ಅಂಬಿ..’ ಚಿತ್ರದ ಧ್ವನಿಸುರುಳಿ ಕಾರ್ಯಕ್ರಮ ನಿನ್ನೆ ನಡೆಯಬೇಕಾಗಿತ್ತು. ಆದರೆ ಕೆಲವು ಅನಿವಾರ್ಯ ಕಾರಣಗಳಿಂದ ಮತ್ತೆ ಮುಂದಕ್ಕೆ ಹೋಗಿದೆ.

ಬೆಂಗಳೂರು, ಆ.11: ‘ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರದ ಹಾಡುಗಳ ಬಿಡುಗಡೆ ನಿನ್ನೆ ಆಗಬೇಕಿತ್ತು. ಕಳೆದ ವಾರ ನಡೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಆಗಸ್ಟ್ 10ಕ್ಕೆ ಹಾಡುಗಳು ಬಿಡುಗಡೆಯಾಗಲಿವೆ ಎಂದು ಚಿತ್ರತಂಡ ಹೇಳಿತ್ತು.ಇದೀಗ ಈ ಸಮಾರಂಭ ಮುಂದಕ್ಕೆ ಹೋಗಿದೆ. ಆದರೆ ಹಾಡುಗಳು ಯಾವತ್ತು ಬಿಡುಗಡೆಯಾಗುತ್ತಿದೆ ಎಂಬ ಪ್ರಶ್ನೆಗೆ ನಿಖರವಾದ ಉತ್ತರವಿಲ್ಲ.

ಸ್ಟಾರ್ ಗಳ ಸಮಾಗಮ

ಚಿತ್ರದ ಧ್ವನಿ ಸುರುಳಿ ಬಿಡುಗಡೆ ಸಮಾರಂಭಕ್ಕೆ ದರ್ಶನ್ ಬರಲಿದ್ದಾರೆ ಎಂದು ಸುದ್ದಿಯಾಗಿದೆ. ಈ ಮೂಲಕ ಕುಚ್ಚಿಕೂ ಗೆಳೆಯರಾದ ಸುದೀಪ್ ಮತ್ತು ದರ್ಶನ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದು, ಈ ಮೂಲಕ ಮತ್ತೆ ಒಂದಾಗಲಿದ್ದಾರೆ ಎಂಬ ಸುದ್ದಿಯಿತ್ತು. ಅದರೊಂದಿಗೆ ಕನ್ನಡದ ಎಲ್ಲಾ ದೊಡ್ಡ ಸ್ಟಾರ್ ಗಳೊಂದಿಗೆ ಇತರ ಭಾಷೆಗಳ ಸ್ಟಾರ್ ಗಳು ಕೂಡಾ ಬರಲಿದ್ದಾರೆ ಎಂದು ಕೂಡಾ ಹೇಳಲಾಗಿತ್ತು. ಆದರೆ ಇವರೆಲ್ಲರೂ ಚಿತ್ರಗಳ ಚಿತ್ರೀಕರಣದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರಿಂದ ಈ ಸಮಾರಂಭ ಮುಂದಕ್ಕೆ ಹೋಗಿದೆ. ಎಲ್ಲರೂ ಬರುವುದನ್ನು ಖಚಿತಗೊಳಿಸಿಕೊಂಡ ಮೇಲೆ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ.

ಅಗಸ್ಟ್ 15 ರ ಒಳಗೆ ಕಾರ್ಯಕ್ರಮ

“ಚಿತ್ರದ ಆಡಿಯೋ ಬಿಡುಗಡೆ ಇದೇ ತಿಂಗಳ 15ರ ಒಳಗೆ ಆಗುತ್ತದೆ. ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಹಾಡುಗಳು ಬಿಡುಗಡೆಯಾಗಲಿವೆ. ಈ ಕಾರ್ಯಕ್ರಮಕ್ಕೆ ಕನ್ನಡದ ಎಲ್ಲ ನಟರಿಗೆ ಆಹ್ವಾನ ಮಾಡಲಿದ್ದೇವೆ. ಅಂಬರೀಶ್ ಸರ್ ಕಾರ್ಯಕ್ರಮ ಅಂದರೆ ಎಲ್ಲರೂ ಬರುವ ಸಾಧ್ಯತೆ ಇದೆ. ಜೊತೆಗೆ ಸೌತ್ ಚಿತ್ರರಂಗದ ಕೆಲವು ನಟರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಹೀಗಾಗಿ ಸ್ವಲ್ಪ ತಡ ಆಗುತ್ತಿದೆ” ಎಂದು ಚಿತ್ರತಂಡದವರು ಹೇಳಿದ್ದಾರೆ.

ರಿಮೇಕ್ ಚಿತ್ರ

ಜ್ಯಾಕ್ ಮಂಜು ನಿರ್ಮಿಸಿರುವ ಈ ಚಿತ್ರವು ತಮಿಳಿನ ‘ಪವರ್ ಪಾಂಡಿ’ ರಿಮೇಕ್ ಆಗಿದ್ದು, ಚಿತ್ರದಲ್ಲಿ ಅಂಬರೀಶ್, ಸುದೀಪ್, ಶೃತಿ ಹರಿಹರನ್, ಸುಹಾಸಿನಿ ಮುಂತಾದವರು ನಟಿಸಿದ್ದಾರೆ. ಚಿತ್ರವನ್ನು ಗುರುದತ್ ಗಾಣಿಗ ನಿರ್ದೇಶನ ಮಾಡಿದ್ದು, ಅರ್ಜುನ್ ಜನ್ಯ ಸಂಗೀತ, ಜೆಬಿನ್ ಜಾಕೋಬ್ ಛಾಯಾಗ್ರಹಣವಿದೆ.

 

@ sunil Javali

Tags