ಸುದ್ದಿಗಳು

ಅಮೇರಿಕಾದಲ್ಲಿ ಉಪ್ಪಿ ದಂಪತಿ..

ಅಕ್ಕ ಸಮ್ಮೇಳನದಲ್ಲಿ ಗಣ್ಯರು..

ಆಗಸ್ಟ್ 31 ರಿಂದಅಕ್ಕ ಸಮ್ಮೇಳನ’ ಆರಂಭವಾಗಿದ್ದು ಸೆಪ್ಟೆಂಬರ್ 2 ಅಂದರೆ ಇಂದು ಸಮ್ಮೇಳನಕ್ಕೆ ತೆರೆ ಬೀಳಲಿದೆ.

ಟೆಕ್ಸಾಸ್ ,ಸೆ.02: ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪತ್ನಿ ಪ್ರಿಯಾಂಕ ಉಪೇಂದ್ರ ಸದ್ಯ ಚಿತ್ರರರಂಗದಿಂದ ಕೊಂಚ ಬ್ರೇಕ್ ತೆಗೆದುಕೊಂಡು ಅಮೆರಿಕದಲ್ಲಿದ್ದಾರೆ. ಅಕ್ಕ ಸಮ್ಮೇಳನದಲ್ಲಿ ಭಾಗವಹಿಸಲು ಹೋಗಿರುವ ಉಪೇಂದ್ರ ಬಿಡುವಿನ ವೇಳೆಯಲ್ಲಿ  ಏನು ಮಾಡಿದ್ದಾರೆ ಗೊತ್ತೇ?..ಮುಂದೆ ಓದಿ…

ಟೆಕ್ಸಾಸ್ ಡಲ್ಲಾಸ್’

ಉಪೇಂದ್ರ ಹಾಗೂ ಪ್ರಿಯಾಂಕಾಗೆ ಬಿಡುವು ಸಿಕ್ಕಿದ್ದೆ ತಡ, ಅಲ್ಲಿನ ಸುಂದರ ತಾಣಗಳಿಗೆ ಭೇಟಿ ನೀಡಿದ್ದಾರೆ. ಆಗಸ್ಟ್ 31 ರಿಂದ ‘ಅಕ್ಕ ಸಮ್ಮೇಳನ’ ಆರಂಭವಾಗಿದ್ದು ಸೆಪ್ಟೆಂಬರ್ 2 ಅಂದರೆ ಇಂದು ಸಮ್ಮೇಳನಕ್ಕೆ ತೆರೆ ಬೀಳಲಿದೆ. ‘ಟೆಕ್ಸಾಸ್​ನ ಡಲ್ಲಾಸ್ ನಗರದ ಶೆರಟನ್ ಕನ್ವೆನ್ಷನ್ ‘ಹಾಲ್​​ನಲ್ಲಿ ಜರುಗಿದ ಸಮ್ಮೇಳನದಲ್ಲಿ ಉಪೇಂದ್ರ , ಪುನೀತ್ ರಾಜ್​​ಕುಮಾರ್​, ಹಿರಿಯ ನಟ ಶ್ರೀನಾಥ್ ಸೇರಿ ಬಹಳಷ್ಟು ಗಣ್ಯರು ಭಾಗವಹಿಸಿದ್ದರು. ಬಿಡುವಿನ ವೇಳೆ ಸುತ್ತಮುತ್ತಲಿನ ಸುಂದರ ಪ್ರದೇಶಗಳಿಗೆ ಭೇಟಿ ನೀಡಿರುವ ಉಪ್ಪಿ ದಂಪತಿ ಅಲ್ಲಿ ಕ್ಲಿಕ್ ಮಾಡಿರುವ ಫೊಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ  ಹಂಚಿಕೊಂಡಿದ್ದಾರೆ.

Tags