ಸುದ್ದಿಗಳು

ಅಮೀರ್ ಖಾನ್ ಈ ಫೇಕ್ ಚಿತ್ರದ ಟ್ರೇಲರ್ ಗೆ ಸಿಕ್ಕಿತು 6 ಮಿಲಿಯನ್ ವೀಕ್ಷಣೆ!!

ಮುಂಬೈ,ಆ.06: ಬಾಲಿವುಡ್ ನ ‘ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಮತ್ತು ಬಿಗ್ ಬಿ ಅಮಿತಾಭ್ ಬಚ್ಚನ್ ಅಭಿನಯದ ‘ಥಗ್ಸ್ ಆಫ್ ಹಿಂದುಸ್ತಾನ್’ ಚಿತ್ರದಲ್ಲಿ ನಟಿಸುತ್ತಾರೆ ಎಂದು ಈ ಹಿಂದೆ ಹೇಳಿದ್ದೆವು. ಈ ಚಿತ್ರ ಟ್ರೇಲರ್ ಇನ್ನೂ ಬಿಡುಗಡೆಯಾಗಿಲ್ಲ. ಆದರೆ ಚಿತ್ರದ ಬಗ್ಗೆ ಈಗಾಗಲೇ ಅಭಿಮಾನಿಗಳಿಗೆ ತುಂಬಾನೆ ಕುತೂಹಲ ಹುಟ್ಟಿದೆ. ಅದು ಎಷ್ಟರ ಮಟ್ಟಿಗೆ ಅಂದರೆ ಚಿತ್ರದ ಬಗ್ಗೆ ಅಭಿಮಾನಿಗಳೇ ಟ್ರೇಲರ್ ನ್ನ ಮಾಡಿ ಯೂಟ್ಯೂಬ್ ನಲ್ಲಿ  ಹರಿ ಬಿಟ್ಟಿದ್ದಾರೆ.

ಫ್ಯಾನ್ಸ್ ಮೇಡ್ ಟ್ರೇಲರ್

ಫ್ಯಾನ್ಸ್ ಮೇಡ್ ಟ್ರೇಲರ್ ನನ್ನು ನೋಡಿದ ಅಭಿಮಾನಿಗಳು  ಇದುವೇ ಚಿತ್ರದ ಅಸಲಿ ಟ್ರೇಲರ್ ಅಂತ ಭಾವಿಸಿದ ಅಭಿಮಾನಿಗಳು ಆ ಟ್ರೇಲರ್ ನ ಹೆಚ್ಚಿನ ಸಂಖ್ಯೆಯಲ್ಲಿ ನೋಡಿ ಯಶಸ್ವಿಗೊಳಿಸಿದ್ದಾರೆ. ಥಗ್ಸ್ ಆಫ್ ಹಿಂದೂಸ್ತಾನ್ ನ ಫ್ಯಾನ್ ಮೇಡ್ ಟ್ರೇಲರ್ ಒಂದಕ್ಕೆ ಆರು ಮಿಲಿಯನ್ ವೀಕ್ಷಣೆ ಸಿಕ್ಕಿರೋದು ನೋಡಿದರೆ ಇನ್ನು ಚಿತ್ರದ ನಿಜವಾದ ಟ್ರೇಲರ್ ಬಿಡುಗಡೆಯಾದರೆ ಎಷ್ಟು ವೀಕ್ಷಣೆ ಆಗಬಹುದು ಎಂದು ಇಲ್ಲೇ ನಾವು ಊಹಿಸಬಹುದು.

ಆರು ಮಿಲಿಯನ್ ವೀಕ್ಷಣೆ

2ನಿಮಿಷ 57 ಸೆಕೆಂಡ್ ಗಳ ವಿಡಿಯೋ ಈಗ ಆರು ಮಿಲಿಯನ್ ಜನರಿಂದ ವೀಕ್ಚಿಸಲ್ಪಟ್ಟಿದೆ. ಎರಡು ವಾರಗಳ ಹಿಂದೆ ಈ ಟ್ರೇಲರ್ ಬಿಡುಗಡೆಯಾಗಿದ್ದು, ಕಾಮೆಂಟ್ ಬಾಕ್ಸ್ ನಲ್ಲಿ ಅಭಿಮಾನಿಗಳು ಇದು ಫೇಕ್ ಅಂತ ಕಾಮೆಂಟ್ ಮಾಡಲು ಶುರು ಮಾಡಿದ್ದಾರೆ. ಯಾಕಂದರೆ ಹಲವು ಹಾಲಿವುಡ್ ಸಿನಿಮಾಗಳ ದೃಶ್ಯಗಳು ಈ ಟ್ರೇಲರ್ ನಲ್ಲಿವೆ. ಇನ್ನೂ ಕೂಡ ಚಿತ್ರದ ಫಸ್ಟ್ ಲುಕ್ ಟೀಸರ್ ಅಥವಾ ಟ್ರೇಲರ್ ಯಾವುದು ಬಿಡುಗಡೆಯಾಗಿಲ್ಲ. ಹಾಗಿದ್ದರೂ ಅಭಿಮಾನಿಗಳು ಫ್ಯಾನ್ಸ್ ಮೇಡ್ ಟ್ರೇಲರ್ ನ್ನೇ ನಂಬಿದ್ದು ಈಗ ಇದಕ್ಕೆ ಭರ್ಜರಿ ರೆಸ್ಪಾನ್ಸ್ ನೀಡಿದ್ದಾರೆ. ಇನ್ನು ನವೆಂಬರ್ ನಲ್ಲಿ ಚಿತ್ರ ತಂಡ ಟ್ರೇಲರ್ ಬಿಡುಗಡೆ ಮಾಡಲಿದೆ ಅಂತ ಹೇಳಲಾಗುತ್ತಿದೆ .

 

Tags