ಸುದ್ದಿಗಳು

ಪುಲ್ವಾಮ ವೀರರ ಕುಟುಂಬಕ್ಕೆ ಧನ ಸಹಾಯ ಮಾಡಿದ ಬಿಗ್ ಬಿ

ಬಾಲಿವುಡ್ ಲೆಜೆಂಡ್ ಆ್ಯಕ್ಟರ್ ಅಮಿತಾಬ್ ಬಚ್ಚನ್ ಬಹಳಷ್ಟು ಬಾರಿ ಎಲೆ ಮರದ ಕಾಯಿ ರೀತಿಯಲ್ಲಿ ಸಹಾಯ ಮಾಡುತ್ತಲೇ ಇದ್ದಾರೆ. ಈಗಾಗಲೇ ಬಹಳಷ್ಟು ಮಂದಿಯ ಕಷ್ಟಕ್ಕೆ ನೆರವಾಗಿರುವ ಅಮಿತಾಬ್ ಬಚ್ಚನ್ ಹಲವಾರು ಮಂದಿಯ ಪಾಲಿನ ದೇವರು ಅಂದರೆ ತಪ್ಪಾಗಲ್ಲ. ಯಾಕೆಂದರೆ ಸಹಾಯ ಪಡೆದ ಜನ ಅವರನ್ನು ನೋಡುತ್ತಿರುವುದು ದೇವರ ಸ್ಥಾನದಲ್ಲಿಯೇ. ಇದೀಗ ಈ ನಟ ಮತ್ತೊಂದು ಸಾಮಾಜಿಕ ಕೆಲಸ ಮಾಡುವ ಮೂಲಕ ಜನಮನ ಗೆದ್ದಿದ್ದಾರೆ.

ತಲಾ ಐದು ಲಕ್ಷ ನೀಡಿದ ಬಿಗ್ ಬಿ

ಹೌದು, ಅಮಿತಾಬ್ ಬಚ್ಚನ್ ಈಗಾಗಲೇ ಬಹಳಷ್ಟು ಮಂದಿ ರೈತರ ಸಾಲಗೆ ಸ್ವತಃ ತಾವೇ ದುಡ್ಡು ಕೊಡುವ ಮೂಲಕ ಸುದ್ದಿಯಾಗಿದ್ದರು. ಇದೀಗ ಮತ್ತೊಮ್ಮೆ ಈ ನಟ ಯೋಧರ ಕುಟುಂಬಕ್ಕೆ ಸಹಾಯ ಮಾಡಿದ್ದಾರೆ. ಪುಲ್ವಾಮ ದಾಳಿಯಲ್ಲಿ ವೀರ ಮರಣ ಹೊಂದಿದ ಸಿಆರ್‌ ಪಿಎಫ್ ಯೋಧರ ಕುಟುಂಬಕ್ಕೆ ಇದೀಗ ತಲಾ ಐದು ಲಕ್ಷ ಹಣ ನೀಡುವ ಮೂಲಕ ಮತ್ತೊಮ್ಮೆ ಯೋದರ ಮೇಲಿನ ಕಾಳಜಿಯನ್ನು ಮೆರೆದಿದ್ದಾರೆ.

49 ಕುಟುಂಬಗಳಿಗೆ ಧನ ಸಹಾಯ

ಭಯೋತ್ಪಾದಕ ದಾಳಿಯಲ್ಲಿ ಮರಣ ಹೊಂದಿದ್ದ 49 ಮಂದಿಯ ಕುಟುಂಬಕ್ಕೆ ಧನ ಸಹಾಯ ಮಾಡಿದ್ದಾರೆ. ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಅಮಿತಾಬ್ ಹಾಗೂ ಅಮಿತಾಬ್ ಪುತ್ರ, ಅಭಿಷೇಕ್ ಬಚ್ಚನ್ ಅವರ ಚೆಕ್ ನೀಡುವ ಮೂಲಕ ಸಹಾಯ ಮಾಡಿದರು. ಇನ್ನೂ ಈ ವಿಚಾರವನ್ನು ಅಮಿತಾಬ್ ತಮ್ಮ ಬ್ಲಾಗ್ ನಲ್ಲಿ ಹಂಚಿಕೊಂಡಿದ್ದಾರೆ.  ಈ ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ಕೆಲವು ಅಧಿಕಾರಿಗಳು, ಆರ್ಮಿ ಆಫೀಸರ್ಸ್ ಕೂಡ ಭಾಗಿಯಾಗಿದ್ದರು.

Image result for pulwama attack

ಈ ಹಾಸ್ಯ ನಟನ ಸಂಭಾವನೆ ಕೇಳಿ ಬಿಗ್ ಬಾಸ್ ಟೀಂಗೆ ಶಾಕ್!!

#balkaninews #bollywood #amitabhbachchan #amitabhbachchanmovies #pulwamaattack

 

Tags