ಸುದ್ದಿಗಳು

ಅಮಿತಾಭ್ ಬಚ್ಚನ್ ಗೆ 76ನೇ ಹುಟ್ಟುಹಬ್ಬ

ಹುಟ್ಟುಹಬ್ಬದ ಸಂಭ್ರಮದಲ್ಲಿ ಬಿಗ್ ಬಿ

ಮುಂಬೈ, ಅ.11: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅವರಿಗೆ ಇಂದು(ಅ.11) ಜನ್ಮದಿನ. ದೇಶ-ವಿದೇಶಗಳಿಂದ ಅಭಿಮಾನಿಗಳು, ಬಂಧುಮಿತ್ರರು ಆ್ಯಂಗ್ರಿ ಎಂಗ್ ಟೈಗರ್ ಅಮಿತಾಬ್ ಗೆ ಹುಟ್ಟುಹಬ್ಬದ ಶುಭಾಷಯಗಳನ್ನು ಕೋರಿದ್ದಾರೆ. ಗಣ್ಯರು, ರಾಜಕಾರಣಿಗಳು, ಸೆಲೆಬ್ರಿಟಿಗಳು ಸೇರಿದಂತೆ ಫ್ಯಾನ್ಸ್ ಗಳು ಬಿಗ್ ಬಿ ಬರ್ತಡೇಗೆ ವಿಷ್ ಮಾಡಿದ್ದಾರೆ. ಅಮಿತಾಬ್ ಅವರು 76ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಬೇಸರದ ಸಂಗತಿಯೆಂದರೆ, ಬಿಗ್ ಬಿ ತಮ್ಮ ಜನ್ಮ ದಿನ ಆಚರಿಸಿಕೊಳ್ಳುತ್ತಿಲ್ಲ. ಏಕೆಂದರೆ ಬಚ್ಚನ್ ಮಗಳು ಶ್ವೇತಾ ನಂದ ಅವರ ಮಾವ ರಾಜನ್ ನಂದ ಅವರು ಇತ್ತೀಚೆಗಷ್ಟೇ ನಿಧನ ಹೊಂದಿದ್ದರು. ಈ ಕಾರಣಕ್ಕೆ ಅಮಿತಾಭ್ ಜನ್ಮ ದಿನ ಆಚರಿಸಿಕೊಳ್ಳುತ್ತಿಲ್ಲ ಎಂದು ಕುಟುಂಬದ ಮೂಲಗಳು ತಿಳಿಸಿವೆ.ಸದಾ ಹಸನ್ಮುಖರಾಗಿರುವ ನಟ

ಸದ್ಯ ‘ಬ್ರಹ್ಮಾಸ್ತ್ರ’, ‘ಸೈರಾ ನರಸಿಂಹ ರೆಡ್ಡಿ’, ‘ಬದ್ಲಾ’ ಸಿನಿಮಾ ಶೂಟಿಂಗ್‍ ನಲ್ಲಿ ಬಚ್ಚನ್ ಬಿಸಿಯಾಗಿದ್ದಾರೆ. ಇದರ ಜೊತೆಗೆ ಕಿರುತೆರೆಯ ಕೌನ್ ಬನೇಗಾ ಕರೋಡ್‍ ಪತಿ ಸೀಸನ್  10ರಲ್ಲಿ ನಿರೂಪಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ ಬಚ್ಚನ್. ಕಿರುತೆರೆ ಪರದೆ ಮೇಲೆ ಸ್ಪರ್ಧಾಳುಗಳಿಗೆ ಪ್ರಶ್ನೆಗಳೊಂದಿಗೆ ಹಾಸ್ಯಚಟಾಕಿ ಹಾರಿಸುವ ಮೂಲಕ ಹಸನ್ಮುಖರಾಗಿ, ಇತರರಿಗೂ ಸಂತಸ ನೀಡುತ್ತಾರೆ ಅಮಿತಾಬ್. ಆದರೆ ಜನ್ಮ ದಿನಾಚರಣೆ ಸಂಭ್ರಮದಲ್ಲಿರುವ ಅಮಿತಾಭ್ ಅವರಿಗೆ ಭಾವುಕರಾಗುವಂತಹ ಸನ್ನಿವೇಶ ಎದುರಾಗುವಂತೆ ಮಾಡಿದ್ದಾರೆ ಕಾರ್ಯಕ್ರಮದ ಆಯೋಜಕರು. ತಾಯಿಯ ಮಾತುಗಳಿಂದ ಭಾವುಕರಾದ ಬಿಗ್ ಬಿ

ಕೌನ್ ಬನೇಗಾ ಕರೋಡ್‍ಪತಿ ಕಾರ್ಯಕ್ರಮ ಆಯೋಜಕರು ಬಿಗ್ ಬಿಗೆ ಸಪ್ರ್ರೈಜ್ ಗಿಫ್ಟ್‍ವೊಂದನ್ನು ನೀಡಿದ್ದಾರೆ. 2007ರಲ್ಲಿ ನಿಧನರಾದ ಬಿಗ್ ಬಿ ಅವರ ತಾಯಿ ತೇಜಿ ಬಚ್ಚನ್ ಅವರು ಹಾಡಿರುವ ಆಡಿಯೋ ತುಣುಕನ್ನು ಕಾರ್ಯಕ್ರಮದ ನಡುವೆಯೇ ಪ್ರಸಾರ ಮಾಡುವ ಮೂಲಕ ಅಮಿತಾಬ್ ಕಣ್ಣುಗಳು ಒದ್ದೆಯಾಗುವಂತೆ ಮಾಡಿದ್ದಾರೆ. ತೇಜಿ ಬಚ್ಚನ್ ಮಾತನಾಡಿರುವ ಮತ್ತೊಂದು ಆಡಿಯೋವನ್ನು ಪ್ಲೇ ಮಾಡಲಾಯಿತು. ನಾನು ಅಮಿತಾಬ್ ಬಚ್ಚನ್ ತಾಯಿ ಅಂತಾ ಕರೆಸಿಕೊಳ್ಳಲು ನನಗೆ ಬಹಳ ಹೆಮ್ಮೆಯಾಗುತ್ತದೆ’ ಅಂತಾ ತೇಜಿ ಬಚ್ಚನ್ ಹೇಳಿರುವುದು ಅಮಿತಾಭ್ ಅವರನ್ನು ಭಾವುಕರನ್ನಾಗಿ ಮಾಡಿದೆ.

Tags