ಸುದ್ದಿಗಳು

ಮಹಿಳೆಯರ ಮೇಲೆ ದಬ್ಬಾಳಿಕೆ ಸರಿಯಲ್ಲ: ಅಮಿತಾಭ್ ಬಚ್ಚನ್

ಬಾಲಿವುಡ್ ಬಿಗ್ ಬಿ

ಮುಂಬೈ, ಅ.11: ತಮ್ಮ 76ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ಮಹಿಳೆಯರ ಪರ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದೇ ಮೊದಲ ಬಾರಿಗೆ ದೇಶಾದ್ಯಂತ ಸಂಚಲನ ಮೂಡಿಸುತ್ತಿರುವ #ಮಿಟೂ ಅಭಿಯಾನದ ಕುರಿತು ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಅಮಿತಾಭ್, ಯಾವುದೇ ರೀತಿಯಲ್ಲೂ ಮಹಿಳೆಯರನ್ನು ದುರಾಚಾರಕ್ಕೆ ಒಳಪಡಿಸಬಾರದು ಎಂದು ಹೇಳಿದ್ದಾರೆ.

ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ಸಮಸ್ಯೆ ವಿರುದ್ಧ ದೇಶದ ಎಲ್ಲಾ ದಿಕ್ಕುಗಳಿಗೂ ಹರಡಿರುವ #ಮಿಟೂ ಅಭಿಯಾನಕ್ಕೆ ಬಿಗ್ ಬಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಸಮಾಜದಲ್ಲಿ ಮಹಿಳೆಯರಿಗೆ ಯಾವ ರೀತಿಯಲ್ಲಿ ಕಹಿ ಅನುಭವವಾಗಬಾರದು. ಯಾವ ಹೆಣ್ಣು ಮಕ್ಕಳ ಮೇಲೂ ಅಹಿತಕರ ಘಟನೆ ನಡೆಯಬಾರದು ಎಂದು ಹೇಳಿದ್ದಾರೆ.

ಸ್ತ್ರೀಯರನ್ನು ಎಲ್ಲರೂ ಗೌರವದಿಂದ ಕಾಣಬೇಕು

ಮಹಿಳೆಯರ ಮೇಲೆ ದೌರ್ಜನ್ಯ ಸಮಾಜ ಮಾರಕ. ಸ್ತ್ರೀಯರನ್ನು ಎಲ್ಲರೂ ಗೌರವದಿಂದ ಕಾಣಬೇಕು. ಒಂದು ವೇಳೆ, ಮಹಿಳೆಯ ಮೇಲೆ ದಬ್ಬಾಳಿಕೆ ಕಂಡುಬಂದಲ್ಲಿ ಯಾವುದೇ ರೀತಿ ಯೋಚಿಸದೇ ಪೊಲೀಸ್ ಠಾಣೆಯಲ್ಲಿ ದೂರು ನೀಡುವಂತೆ ಅಮಿತಾಭ್ ಸಲಹೆ ನೀಡಿದ್ದಾರೆ.

ಸದ್ಯ ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರು ಪುರುಷರೊಂದಿಗೆ ಸರಿಸಮಾನವಾಗಿ ಕೆಲಸ ಮಾಡುತ್ತಿದ್ದಾರೆ. ಹೆಣ್ಣುಮಕ್ಕಳನ್ನು ಎಲ್ಲೂ ಕೀಳಾಗಿ ಕಾಣಬಾರದು. ಸ್ತ್ರೀಯರು ಪುರುಷರ ಶಕ್ತಿಯಾಗಿದ್ದಾರೆ. ಅವರುಗಳು ಇಡೀ ಕುಟುಂಬದ ಆಧಾರಸ್ಥಂಭಗಳು. ಅವರ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ಎಲ್ಲರೂ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ.

 

Tags