ಸುದ್ದಿಗಳು

‘ಯಜಮಾನ’ನಿಗೆ ದಾರಿ ಮಾಡಿ ಕೊಟ್ಟ ‘ಅಮ್ಮನ ಮನೆ’

ಬೆಂಗಳೂರು.ಫೆ.20

ಸುಮಾರು 14 ವರ್ಷಗಳ ನಂತರ ಚಿತ್ರರಂಗಕ್ಕೆ ರಾಘವೇಂದ್ರ ರಾಜ್ ಕುಮಾರ್ ‘ಅಮ್ಮನ ಮನೆ’ ಚಿತ್ರದ ಮೂಲಕ ವಾಪಾಸ್ಸಾಗಿದ್ದಾರೆ. ಈಗಾಗಲೇ ಚಿತ್ರದ ಬಗ್ಗೆ ಸಾಕಷ್ಟು ಹೈಪ್ ಕ್ರಿಯೇಟ್ ಆಗಿದ್ದು, ಚಿತ್ರದ ಟೀಸರ್ ಇದೇ ತಿಂಗಳ 24 ಕ್ಕೆ ಬಿಡುಗಡೆಯಾಗುತ್ತಿದೆ.

ಮಾರ್ಚ್ 8 ಕ್ಕೆ ರಿಲೀಸ್

ಈಗಾಗಲೇ ಸುದ್ದಿಯಾಗಿರುವಂತೆ ‘ಅಮ್ಮನ ಮನೆ’ ಚಿತ್ರವು ಮಾರ್ಚ್ 1 ರಂದು ಬಿಡುಗಡೆಯಾಗಬೇಕಿತ್ತು. ಆದರೆ ‘ಯಜಮಾನ’ ಸಹ ಮಾರ್ಚ್ ಒಂದರಂದು ಬರುತ್ತಿದೆ. ಆದರೆ ಇಬ್ಬರು ದಿಗ್ಗಜರ ಬಹುನಿರೀಕ್ಷಿತ ಚಿತ್ರಗಳು ಒಂದೇ ದಿನ ಬಿಡುಗಡೆಯಾದರೆ ಪ್ರೇಕ್ಷಕರಿಗೂ ಸಹ ಗೊಂದಲ ಉಂಟಾಗಬಹುದು. ಹಾಗೂ ಬಾಕ್ಸ್ ಆಫೀಸ್ ನಲ್ಲಿಯೂ ಸಹ ಕಲೆಕ್ಷನ್ ಮೇಲೆ ಕಡಿತ ಬೀಳಬಹುದು. ಹೀಗಾಗಿ ಚಿತ್ರವನ್ನು ಮಾರ್ಚ್ 8 ಕ್ಕೆ ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.

ಚಿತ್ರದ ಬಗ್ಗೆ

ನಿಖಿಲ್ ಮಂಜು ನಿರ್ದೇಶನವಿರುವ ಈ ಚಿತ್ರವು ಅಮ್ಮ-ಮಗನ ಸಂಬಂಧದ ಬಗ್ಗೆ ವಿವರಿಸಲಾಗುತ್ತಿದ್ದು, ಚಿತ್ರದಲ್ಲಿ ರಾಘಣ್ಣ, ಪೀಟಿ ಮಾಸ್ಟರ್ ಆಗಿ ಕಾಣಿಸಿಕೊಂಡಿದ್ದಾರೆ. ಸಣ್ಣಪುಟ್ಟ ದೈಹಿಕ ನ್ಯೂನತೆಗಳಿದ್ದ ಮಗುವನ್ನು ತಾಯಿ ಜಗತ್ತನ್ನೇ ಎದುರು ಹಾಕಿಕೊಂಡು ಒಬ್ಬಂಟಿಯಾಗಿ ಬೆಳೆಸಿರುತ್ತಾಳೆ. ಕೊನೆಗೆ ಆ ತಾಯಿ ಯಾವುದೋ ಕಾರಣಕ್ಕಾಗಿ ದುರ್ಬಲಳಾದಾಗ ಮಗ ಅವಳನ್ನು ಹೇಗೆ ನೋಡಿಕೊಳ್ಳುತ್ತಾನೆ ಎಂಬುದು ಚಿತ್ರದ ಕತೆಯಾಗಿದೆ.

ಇನ್ನು ಚಿತ್ರದ ಹೊಸ ಪೋಸ್ಟರ್ ಗಳು ಬಿಡುಗಡೆಯಾಗಿದ್ದು, ನೋಡುಗರಿಂದ ಗಮನ ಸೆಳೆಯುತ್ತಿವೆ. ಇಷ್ಟು ದಿನಗಳ ಕಾಲ ಆರೋಗ್ಯದ ಸಮಸ್ಯೆಯಿಂದಾಗಿ ಚಿತ್ರರಂಗದಲ್ಲಿ ತೊಡಗಿಕೊಳ್ಳದ ರಾಘಣ್ಣ ಈಗ ‘ಅಮ್ಮನ ಮನೆ’ಯ ಮೂಲಕ ವಾಪಾಸು ಬಂದಿದ್ದಾರೆ.

#ammanamane, #balkaninews #kannadasuddigalu, #raghavendrarajkumar, #filmnews, #yajamana, 3march8, #march1st, #teaser

Tags