ಚಿತ್ರ ವಿಮರ್ಶೆಗಳುಬಾಲ್ಕನಿಯಿಂದಸುದ್ದಿಗಳು

ತಾಯಿ, ಮಗ, ಹೆಂಡತಿ ಹಾಗೂ ಮಗಳ.. ಸಂಬಂಧಗಳ ಸುತ್ತ ಸುತ್ತುವ ಮನೋಜ್ಞ ಚಿತ್ರಣ

ಮನ ಆವರಿಸುವ ಸಿನಿಮಾ ‘ಅಮ್ಮನ ಮನೆ’

ಬೆಂಗಳೂರು.ಮಾ.09: ಸುಮಾರು 14 ವರ್ಷಗಳ ನಂತರ ನಟ ರಾಘವೇಂದ್ರ ರಾಜ್ ಕುಮಾರ್ ಕಮ್ ಬ್ಯಾಕ್ ಮಾಡಿರುವ ‘ಅಮ್ಮನ ಮನೆ’ ಸಿನಿಮಾ ತೆರೆ ಕಂಡು ಎಲ್ಲರಿಗೂ ಇಷ್ಟವಾಗುತ್ತಿದೆ. ಚಿತ್ರದಲ್ಲಿ ತಾಯಿ, ಮಗ, ಹೆಂಡತಿ.. ಸಂಬಂಧಗಳ ಸುತ್ತ ಸುತ್ತುವ ಮನೋಜ್ಞ ಚಿತ್ರಣವನ್ನು ತೋರಿಸಲಾಗಿದೆ.

ಕಥಾಹಂದರ

ಎ.ಟಿ.ಎಮ್ ನಲ್ಲಿ ಹಣವಿಲ್ಲ ಎಂದು ಬ್ಯಾಂಕಿನ ವಿರುದ್ದ ಕೇಸ್ ಹಾಕುವ ನಾಯಕ ರಾಜೀವ ಎಂಬ ಮೇಷ್ಟ್ರು, ಹಾಗೂ ಅದರಿಂದಾಗುವ ಹದಗೆಡುವ ಸಂಬಂಧಗಳು, ಅಮ್ಮ, ಮಗ, ಹೆಂಡತಿ, ಹಾಗೂ ಮಗಳ ನಡುವಿನ ಭಾವನಾತ್ಮಕ ಬಾಂಧವ್ಯದ ಬೆಸುಗೆ, ಬದಲಾದ ಕಾಲಘಟ್ಟದ ಸಂಘರ್ಷ.. ಇದೆಲ್ಲಾ ಸೇರಿದರೆ ‘ಅಮ್ಮನ ಮನೆ’ ಸಿನಿಮಾ.

ಮಗ ಅಂಗವೈಪಲ್ಯ, ಕೆಲಸಕ್ಕೆ ಬಾರದವನು ಎಂದು ಅಪ್ಪ ಮನೆ ಬಿಟ್ಟು ಹೋಗುತ್ತಾರೆ. ಆ ನಂತರ ರಾಜೀವ (ರಾಘವೇಂದ್ರ ರಾಜ್ ಕುಮಾರ್) ಅಮ್ಮನ ಆಸರೆಯಲ್ಲಿಯೇ ಬೆಳೆಯುತ್ತಾನೆ. ಕಷ್ಟದ ನಡುವೆಯೂ ತಾಯಿ ರಾಜೀವನನ್ನು ಶಿಕ್ಷಕನನ್ನಾಗಿ ಮಾಡುತ್ತಾಳೆ. ತನ್ನ ಕೈ ಕಾಲಿನ ಬಲಹೀನತೆಯ ಕಷ್ಟದ ನಡುವೆಯೂ ರಾಜೀವ ಶಿಕ್ಷಕ ವೃತ್ತಿ ಪ್ರಾರಂಭಿಸುತ್ತಾನೆ.

ಹೀಗೆ, ನೋವಿನಲ್ಲಿಯೂ ಸಹ ರಾಜೀವ ಗಂಭೀರವಾಗಿಯೂ ಸಹ ಎಲ್ಲರ ಗಮನ ಸೆಳೆಯುತ್ತಾನೆ. ಇನ್ನು ಇಡೀ ಚಿತ್ರದ ಕಥೆ ಸಾಗುವುದೇ ರಾಜೀವ ಮತ್ತು ಆತನ ತಾಯಿಯ ಪಾತ್ರದ ಮೂಲಕ. ಇನ್ನು ರಾಘವೇಂದ್ರ ರಾಜ್ ಕುಮಾರ್ ಅವರ ನಟನೆ ಮತ್ತು ಉತ್ಸಾಹ ಮತ್ತು ಪಾತ್ರದ ಪೋಷಣೆ ಪ್ರೇಕ್ಷಕರನ್ನು ಮುದಗೊಳಿಸುತ್ತದೆ.

ಮನ ಸೆಳೆಯುವ ಅಭಿನಯ

ಚಿತ್ರದಲ್ಲಿ ನಟಿಸಿರುವ ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ, ಸುಚೇಂದ್ರ ಪ್ರಸಾದ್, ರೋಹಿಣಿ, ಶೀತಲ್, ನಿಖಿಲ್ ಮಂಜು, ವೆಂಕಟ್ ರಾವ್, ಮಾನಸಿ, ವೆಂಕಟ್ ರಾವ್, ಎಂ.ಡಿ ಕೌಶಿಕ್ ಸೇರಿದಂತೆ ಹಲವರ ಅಭಿನಯ ಮನ ಸೆಳೆಯುತ್ತದೆ. ಮಹಿಳಾ ದಿನಾಚರಣೆಯ ಪ್ರಯುಕ್ತ ತೆರೆ ಕಂಡಿರುವ ‘ಅಮ್ಮನ ಮನೆ’ ಮನರಂಜನೆಯೊಂದಿಗೆ ಉತ್ತಮ ಸಂದೇಶ ನೀಡುತ್ತದೆ.

ನೀನು ನನ್ನ ಸಹೋದರನಿದ್ದಂತೆ, ನಾನು ನಿನ್ನನ್ನು ಪ್ರೀತಿಸಲು ಹೇಗೆ ಸಾಧ್ಯ: ಕರೀನಾ ಕಪೂರ್…!!!

#ammanamane, #review, #balkaninews #raghavendrarajkumar, #filmnews, #kannadasuddigalu

Tags