ಸುದ್ದಿಗಳು

“ಅಮ್ಮನ ಮನೆ” ಟೀಸರ್ ರಿಲೀಸ್ !!!

ಬೆಂಗಳೂರು,ಜ.13: ಹಲವಾರು ವರ್ಷಗಳ ನಂತರ ರಾಘವೇಂದ್ರ ರಾಜ್ ಕುಮಾರ್ ಚಿತ್ರರಂಗದತ್ತ ಮುಖ ಮಾಡಿದ್ದಾರೆ.. ರಾಘವೇಂದ್ರ ರಾಜ್ ಕುಮಾರ್ ಅಭಿನಯಿಸುತ್ತಿರುವ ‘ಅಮ್ಮನ ಮನೆ’ ಸಿನಿಮಾ ಬಿಡುಗಡೆಗೆ ಸಿದ್ದವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಟೀಸರ್ ಅನ್ನು ಚಿತ್ರತಂಡ ರಿಲೀಸ್ ಮಾಡಿತ್ತು.


ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ “ಅಮ್ಮನ ಮನೆ ” ಚಿತ್ರದ ಟೀಸರ್ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಇವರ ಸಹೋದರ ಪುನೀತ್ ರಾಜ್ ಕುಮಾರ್ ಟೀಸರ್ ಬಿಡುಗಡೆ ಮಾಡಿದ್ದಾರೆ.

ಎರಡನೇ ಟೀಸರ್​​​​ ಬಿಡುಗಡೆ

ಎರಡನೇ ಟೀಸರ್​​​​ ಬಿಡುಗಡೆಗೆ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ಕಾರ್ಯಕ್ರಮಕ್ಕೆ ಬರಬೇಕಿತ್ತು.. ಆದರೆ ಕಾರಣಾಂತರದಿಂದ ಬರಲಿಲ್ಲವಾದ್ದರಿಂದ ವಿಡಿಯೋ ಮೂಲಕ ‘ಅಮ್ಮನ ಮನೆ’ ಚಿತ್ರದ ಟೀಸರನ್ನು ಲಾಂಚ್ ಮಾಡಿ ರಾಘಣ್ಣನಿಗೆ ಶುಭ ಹಾರೈಸಿದರು . ಇನ್ನು ಮೂರನೇಯ ಟೀಸರನ್ನು ಸಹೋದರಿ ನಾಗಮ್ಮ ಹಾಗೂ ಯುವ ರಾಜ್​ಕುಮಾರ್ ಅವರ ಭಾವಿ ಪತ್ನಿ ಶ್ರೀದೇವಿ ಲಾಂಚ್ ಮಾಡಿದರು. ನಿಖಿಲ್ ಮಂಜುಅಮ್ಮನ ಮನೆಚಿತ್ರವನ್ನು ನಿರ್ದೇಶನ

ಹಜ್’, ‘ರಿಸರ್ವೇಶನ್’, ‘ಗೆರೆಗಳು’ ಸೇರಿದಂತೆ ಮುಂತಾದ ಗಂಭೀರ ಕಥಾವಸ್ತುವಿನ ಚಿತ್ರಗಳ ಮೂಲಕ ಗುರುತಿಸಿಕೊಂಡಿರುವ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ನಿಖಿಲ್ ಮಂಜು ‘ಅಮ್ಮನ ಮನೆ’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

#sandalwood #nikhilmanjoo #ammanamanekannadamovie #balkaninews

Tags