ಸುದ್ದಿಗಳು

ಕಿರುತೆರೆ ಲೋಕದ ಗುಂಗುರು ಕೂದಲಿನ ಚೆಲುವೆ ಅಮೃತಾ ರಾಮಮೂರ್ತಿ

ಬೆಂಗಳೂರು, ಏ.23:

ಗುಂಗುರು ಕೂದಲಿನ ಕುಂದಾಪುರದ ಚೆಲುವೆ ಕಿರುತೆರೆ ವೀಕ್ಷಕರಿಗೆ ಹೊಸಬರೇನಲ್ಲ. ತನ್ನ ಮನೋಜ್ಞ ಅಭಿನಯದಿಂದ ವೀಕ್ಷಕರ ಮನ ಸೆಳೆದಿರುವ ಈ ಚೆಲುವೆಯ ಹೆಸರು ಅಮೃತಾ ರಾಮಮೂರ್ತಿ.

ತನ್ನ ಒಂಭತ್ತನೇ ವಯಸ್ಸಿನಲ್ಲಿ ಕಾಲಿಗೆ ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿದ ಅಮೃತಾಗೆ ಬಾಲ್ಯದಿಂದಲೂ ನಟನೆಯ ಬಗ್ಗೆ ವಿಶೇಷ ಒಲವು. ಗಂಟೆಗಟ್ಟಲೇ ಕನ್ನಡಿಯ ಮುಂದೆ ನಿಂತು ನಾನಾ ರೀತಿ ನಟಿಸುತ್ತದ್ದ ಅಮೃತಾ ಭರತನಾಟ್ಯ ಕಲಾವಿದೆ. ಜೊತೆಗೆ ಉತ್ತಮ ಸಂಗೀತಗಾರ್ತಿಯೂ ಕೂಡ. ಸುಪ್ರಿಯಾ ಕಮಂಡೂರು ಮತ್ತು ಸೀತಾ ಗುರುಪ್ರಸಾದ್ ಅವರ ನೃತ್ಯ ಗರಡಿಯಲ್ಲಿ ಪಳಗಿರುವ ಅಮೃತಾ ಹಲವಾರು ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿರುತ್ತಾರೆ. ಸಂಗೀತದ ಕಡೆಗೂ ಒಲವು ಹೊಂದಿದ್ದ ಅವರು ಆರತಿ ರವಿಕುಮಾರ್ ಮತ್ತು ಕುಮುದಾ ಶ್ರೀನಿವಾಸನ್ ಬಳಿ ಸಂಗೀತ ಅಭ್ಯಸಿಸಿದ್ದಾರೆ.

Image may contain: 1 person, closeup

ಪಾಶ್ಚಾತ್ಯ, ಕಂಟೆಪರರಿ, ಹಿಪ್ ಹಾಪ್ ಹೀಗೆ ಅನೇಕ ನೃತ್ಯ ಪ್ರಕಾರಗಳನ್ನು ಕಲಿತಿರುವ ಅಮೃತಾ ಪಾದಕರ್ಮ ಎಂಬ ಡಾನ್ಸ್ ತಂಡದ ಮೂಲಕ ನೂರಕ್ಕೂ ಹೆಚ್ಚು ವೇದಿಕೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿರುತ್ತಾರೆ. ನಟಿಯಾಗಬೇಕು ಎಂಬ ಮಹದಾಸೆ ಹೊಂದಿದ್ದ ಅಮೃತಾ ರಂಗಭೂಮಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ರಾಜಮಾರ್ಗ ಎಂಬ ನಾಟಕ ಕೇಂದ್ರದಲ್ಲಿ ಪಳಗಿದ ಅವರು ನಟನೆಯ ರೀತಿ ನೀತಿಗಳನ್ನು ತಿಳಿದುಕೊಂಡರು. ಮುಂದೆ ಹೊನ್ನಾ ಹೈಟ್ ಪ್ರೋಡಕ್ಷನ್ ನ ಎರಡು ಕಿರುಚಿತ್ರಗಳಲ್ಲಿ ಅಮೃತಾ ರಾಮಮೂರ್ತಿ ಅಭಿನಯಿಸಿದ್ದರೂ ಅವರಿಗೆ ಹೆಸರು ತಂದುಕೊಟ್ಟದ್ದು ಗೋಲ್ಡನ್ ಪ್ರೋಡಕ್ಷನ್ ನಡಿಯಲ್ಲಿ ಬಿಡುಗಡೆಯಾದ ನವಿಲುಗರಿ ಎಂಬ ಕಿರುಚಿತ್ರ. ಈಗಲೂ ಕೆಲವರು ಅವರನ್ನು ಹಾಗೆ ಗುರುತಿಸುತ್ತಿರುವುದು ಅವರಿಗೆ ಸಂತಸದ ಸಂಗತಿ.

ಸುವರ್ಣವಾಹಿನಿಯ ಸರಸ್ವತಿ – ಲಕ್ಷ್ಮೀ ಪ್ರಿಯೆ ಎಂಬ ಧಾರಾವಾಹಿಯ ಮೂಲಕ ಕಿರುತೆರೆ ಪಾದಾರ್ಪಣೆ ಮಾಡಿದ ಅಮೃತಾ ಮುಂದೆ ಮೇಘ ಮಯೂರಿ ಧಾರಾವಾಹಿಯ ಮಯೂರಿ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾರೆ. ಬಳಿಕ ಮಿಸ್ಟರ್ ಆಂಡ್ ಮಿಸಸ್ ರಂಗೇಗೌಡ ಧಾರಾವಾಹಿಯಲ್ಲಿನ ಐಶ್ವರ್ಯ ಆಗಿ ಅಭಿನಯಿಸಿರುವ ಅವರು ಸದ್ಯಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕುಲವಧು ಧಾರಾವಾಹಿಯ ವಚನಾ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಅಷ್ಟೇ ಅಲ್ಲದೇ ತೆಲುಗಿನ ಪುಟ್ಟಿಂತಿ ಪಟ್ಟುಚಿರ ಎಂಬ ಧಾರಾವಾಹಿಯಲ್ಲಿ ಅಭಿನಯಿಸುವ ಮೂಲಕ ಪರಭಾಷೆಯಲ್ಲೂ ತಮ್ಮ ಛಾಪನ್ನು ಮೂಡಿಸಿದ್ದಾರೆ. ಅಮೃತಾ ಅಭಿನಯದ ಮತ್ತೊಂದು ತೆಲುಗು ಧಾರಾವಾಹಿ ಕುಟುಂಬ ಗೌರವಂ ಧಾರಾವಾಹಿಯಲ್ಲೂ ಬಣ್ಣ ಹಚ್ಚಿದ್ದಾರೆ.

ನಟನೆ ಅಂದರೆ ನಾವು ನಟಿಸುವ ಪಾತ್ರಕ್ಕೆ ಜೀವ ತುಂಬಬೇಕು, ಆ ಮೂಲಕ ಪರಕಾಯ ಪ್ರವೇಶಿಸಬೇಕು. ನಾವು ಮಾಡಿದ ಪಾತ್ರವನ್ನು ಜನ ನೋಡಿದಾಗ ಇದು ತನ್ನದೇ ಪಾತ್ರ ಎಂದು ಅವರಿಗೆ ಅನ್ನಿಸುವಷ್ಟರ ಮಟ್ಟಿಗೆ ಜನರ ಮನಸ್ಸಿಗೆ ಹತ್ತಿರವಾಗಬೇಕು. ಕೊಟ್ಟ ಸಂಭಾಷಣೆಯನ್ನು ಸುಮ್ಮನೆ ಹೇಳುವುದು ನಟನೆಯಲ್ಲ, ಆ ಪಾತ್ರದ ಭಾವನೆಗಳನ್ನು ನಮ್ಮಲ್ಲಿ ಮೂಡಿಸಿಕೊಂಡು ನಟಿಸುವುದೇ ನಿಜವಾದ ನಟನೆ’ ಎನ್ನುವ ಅಮೃತಾH/43 ಪಲ್ಲವಿ ಟಾಕೀಸ್‌’, ‘ಸೈಕೋ ಶಂಕರ್’, ‘ತುರ್ತು ನಿರ್ಗಮನ’ ಚಿತ್ರದ ಮೂಲಕ ಬೆಳ್ಳಿತೆರೆಯಲ್ಲೂ ಕಾಣಿಸಿಕೊಂಡಿದ್ದಾರೆ. ಇದೀಗ ಗೋಲ್ಡನ್ ಸ್ಟಾರ್ ಅಭಿನಯದ 99 ಚಿತ್ರದಲ್ಲೂ ಸಣ್ಣ ಪಾತ್ರದಲ್ಲಿ ಅಭಿನಯಿಸಿರುವ ಗುಂಗುರು ಕೂದಲಿನ ಚೆಲುವೆ ಸದ್ಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಮಿಸ್ಟರ್ ಆ್ಯಂಡ್ ಮಿಸೆಸ್ ರಂಗೇಗೌಡ ಧಾರಾವಾಹಿಯಲ್ಲಿ ಅಮೃತಾ ಅವರಿಗೆ ಜೋಡಿಯಾಗಿ ಕಾಣಿಸಿಕೊಂಡ ರಘು ಅವರ ಜೊತೆಗೆ ಸಪ್ತಪದಿ ತುಳಿಯಲಿದ್ದಾರೆ ಅಮೃತಾ.

ರೀಲ್ ಲೈಫ್ ನಲ್ಲಿ ಗಂಡನ ಪಾತ್ರಧಾರಿಯಾಗಿ ಕಾಣಿಸಿಕೊಂಡಿರುವ ರಂಗೇಗೌಡರೇ ಅಮೃತಾ ಜೀವನದ ರಿಯಲ್ ಲೈಫ್ ನಲ್ಲಿಯೂ ಜೊತೆಯಾಗಲಿದ್ದಾರೆ. ಇವರ ಮುಂದಿನ ಜೀವನ ಸುಖಕರವಾಗಿರಲೆಂದು ಬಾಲ್ಕನಿ ನ್ಯೂಸ್ ಶುಭಹಾರೈಸುತ್ತದೆ.

– ಅನಿತಾ ಬನಾರಿ

Image result for amrutha ramamurthy

#amrutharamamurthy #amrutharamamurthymovies #amrutharamamurthyserials #amrutharamamurthyinstagram #amrutharamamurthyandraghu

Tags