ಸುದ್ದಿಗಳು

ಸದ್ದಿಲ್ಲದೇ 25 ದಿನಗಳನ್ನು ಪೂರೈಸಿದ ‘ಅಮೃತ ಘಳಿಗೆ’

ಪತಿ-ಪತ್ನಿಯ ಸಂಬಂಧದ ಸುಂದರ ಬಾಂಧವ್ಯದ ಸಿನಿಮಾ

ಬೆಂಗಳೂರು.ಜ.11: ಅಶೋಕ್ ಕೆ ಕಡಬ ನಿರ್ದೇಶನದ ‘ಅಮೃತ ಘಳಿಗೆ’ ಸಿನಿಮಾ ಸದ್ದಿಲ್ಲದೇ ನಾಲ್ಕನೆಯ ವಾರಕ್ಕೆ ಕಾಲಿಟ್ಟಿದೆ. ಕಳೆದ ತಿಂಗಳು ಡಿ.21 ರಂದು ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆ.ಜಿ.ಎಫ್’ ಚಿತ್ರದ ಜೊತೆಗೆ ರಿಲೀಸ್ ಆಗಿತ್ತು.

ನಾಲ್ಕನೆಯ ವಾರಕ್ಕೆ ಕಾಲಿಟ್ಟ ಸಿನಿಮಾಗಳು

ಸದ್ಯ ‘ಕೆ.ಜಿ.ಎಫ್’ ಹಾಗೂ ‘ಅಮೃತಘಳಿಗೆ’ ಸಿನಿಮಾಗಳು ನಾಲ್ಕನೆಯ ವಾರಕ್ಕೆ ಕಾಲಿಟ್ಟಿದ್ದು, ಇನ್ನೇನು ಎರಡೇ ದಿನಗಳಲ್ಲಿ ಯಶಸ್ವಿ 25 ದಿನಗಳನ್ನು ಪೂರೈಸಿ, 50 ನೇ ದಿನದತ್ತ ಕಾಲಿಡಲಿವೆ.

ಗಮನ ಸೆಳೆದ ಸಿನಿಮಾಗಳು

ಇವೆರಡು ಸಿನಿಮಾಗಳು ತೆರೆ ಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿವೆ. ಅಂದ ಹಾಗೆ ‘ಅಮೃತಘಳಿಗೆ’ ಒಂದು ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ನೀತು ಹಾಗೂ ರಾಜಶೇಖರ್ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಇನ್ನೂ ಈ ಚಿತ್ರದ ಹಾಡುಗಳು ಕೂಡ ಆಕರ್ಷಕವಾಗಿ ಮೂಡಿ ಬಂದಿದೆ..

ಚಿತ್ರದಲ್ಲಿ ನೀತು ಹಾಗೂ ರಾಜಶೇಖರ್ ಜೋಡಿಯ ಒಂದು ಸೊಗಸಾದ ಹಾಡಿದ್ದು.. ಪತಿ, ಪತ್ನಿಯ ಸಂಬಂಧದ ಒಂದು ಸುಂದರ ಬಾಂಧವ್ಯದ ಭಾವದ ಚಿತ್ರಣ ಇಲ್ಲಿದೆ.. ಸುಂದರ ಪ್ರಕೃತಿಯ ತಾಣಗಳಲ್ಲಿ ಹಾಡನ್ನು ಸೆರೆ ಹಿಡಿಯಲಾಗಿದೆ.. ಚಿತ್ರಕ್ಕೆ ಕಾರ್ತಿಕ್ ವೆಂಕಟೇಶ್ ಮೂರು ಹಾಡು ಒಂದು ಬೀಟ್ ಗೆ ಸಂಗೀತ ನೀಡಿದ್ದಾರೆ. ಅರುಣ್ ಕುಮಾರ್ ಛಾಯಾಗ್ರಹಣವಿದೆ. ರಾಜೇಶ್ ಬ್ರಹ್ಮಾವರ್ ನೃತ್ಯ ಸಂಯೋಜಿಸಿದ್ದಾರೆ.

#amruthgalige, #balakninews #rajshekhar, #filmnews. #kannadasuddigalu

Tags