ಸುದ್ದಿಗಳು

ಅಮೂಲ್ಯ ಬರ್ತಡೇಗೆ ದರ್ಶನ್ ದಂಪತಿಗಳ ಹೊಸ ಚಿತ್ರ ಗಿಫ್ಟ್!?!

ಈ ವರ್ಷ ದರ್ಶನ್ ರೊಂದಿಗೆ 'ಅಮೂಲ್ಯ' ಸಿನಿಮಾ?

ಬೆಂಗಳೂರು, ಸೆ.14: ಇಂದು ಗೋಲ್ಡನ್ ಕ್ವೀನ್ ಅಮೂಲ್ಯರ ಬರ್ತಡೇ. ಇಂದು ತಮ್ಮ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡಿರುವ ‘ಐಸೂ’ ಗೆ ವಿಶೇಷವಾಗಿ ದರ್ಶನ್ ದಂಪತಿಗಳು ಭಾಗಿಯಾಗಿ ಶುಭಾಶಯ ಕೋರಿದ್ದಾರೆ.

ಮದುವೆಯ ಬಳಿಕ ಎರಡನೇ ಬರ್ತಡೇ

ನಟಿ ಅಮೂಲ್ಯರವರು ತಮ್ಮ ಪತಿ ಜಗದೀಶ್ ರೊಂದಿಗೆ , ಈ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇನ್ನು ಮದುವೆಯ ಬಳಿಕ ಆಚರಿಸಿಕೊಳ್ಳುತ್ತಿರುವ ಎರಡನೇ ಹುಟ್ಟುಹಬ್ಬ ಇದಾಗಿದೆ. ಮತ್ತು ಈ ಬಾರಿಯ ಬರ್ತಡೇ ಸೆಲೆಬ್ರೇಷನ್ ಗೆ ದರ್ಶನ್ ದಂಪತಿಗಳು ಆಗಮಿಸಿದ್ದಾರೆ.

ದರ್ಶನ್ ರೊಂದಿಗೆ ‘ಐಸೂ’ ಸಿನಿಮಾ

ಈ ಹಿಂದೆ ಬಾಲ ಕಲಾವಿದೆಯಾಗಿ ದರ್ಶನ್ ರೊಂದಿಗೆ ‘ಲಾಲಿ ಹಾಡು’ ಚಿತ್ರದಲ್ಲಿ ಅಮೂಲ್ಯ ಕಾಣಿಸಿಕೊಂಡಿದ್ದರು. ಆದರೆ ಈ ಬಾರಿ ಡಿ-ಬಾಸ್ ರೊಂದಿಗೆ ಸಿನಿಮಾ ಮಾಡುವುದು ಪಕ್ಕಾ ಆಗಿದೆಯಂತೆ. ಈಗಾಗಲೇ ಕಥೆಯನ್ನು ಕೇಳಿ ಒಪ್ಪಿಗೆ ಕೊಟ್ಟಿದ್ದಾರೆ. ಇದರ ಬಗ್ಗೆ ಅತೀ ಶೀಘ್ರದಲ್ಲಿ ಮಾಹಿತಿಗಳು ಹೊರ ಬೀಳಲಿವೆ.

ಹೊಲಿಗೆ ಯಂತ್ರ

ತಮ್ಮ ಹುಟ್ಟುಹಬ್ಬದ ಪ್ರಯುಕ್ತ ನಟಿ ಅಮೂಲ್ಯ ಬಡ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನ ನೀಡಿದ್ದಾರೆ. ಹಾಗೂ ಹಾರೈಸಲು ಬಂದಂತ ಅಭಿಮಾನಿಗಳಿಗೆ ಹೂಗಿಡ ಗಳನ್ನು ನೀಡಿದ್ದಾರೆ. ಇದರೊಂದಿಗೆ ದರ್ಶನ್ ದಂಪತಿಗಳೊಂದಿಗೆ ಸೆಲ್ಪೀಗಳನ್ನು ತೆಗೆಸಿಕೊಂಡಿದ್ದಾರೆ.

 

 

Tags