ಸುದ್ದಿಗಳು

ಮಗು ಆಗಮನದ ಸಮಯದಲ್ಲಿ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ ನಟಿ!

ಬ್ರಿಟಿಷ್ ಬ್ಯೂಟಿ ಆಮಿ ಜಾಕ್ಸನ್ ತಾಯ್ತನದ ಖುಷಿಯನ್ನು ಹೆಮ್ಮೆಯಿಂದ ಅನುಭವಿಸುತ್ತಿದ್ದು, ಗರ್ಭಿಣಿ ಎಂದು ಖಚಿತವಾದಾಗಿನಿಂದಲೂ ಆಮಿ ಬೇಬಿ ಬಂಪ್ ಫೋಟೋಗಳನ್ನು ತಪ್ಪದೇ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡುತ್ತಿದ್ದಾರೆ. ಸದ್ಯ ಆಮಿಗೆ 7 ತಿಂಗಳು ತುಂಬಿದ್ದು, ಬಹುಕಾಲದ ಗೆಳೆಯ ಜಾರ್ಜ್ ಪನಾಯೋಟೌ ಜೊತೆ ಖುಷಿಯಿಂದ ಕಾಲ ಕಳೆಯುತ್ತಿದ್ದಾರೆ.

ಈಗ ಹೊಸ ವಿಷಯವೆಂದರೆ ಆಮಿ ತಮ್ಮ ಸ್ನೇಹವನ್ನು ಮತ್ತೊಂದು ಮಜಲಿನತ್ತ ಕೊಂಡೊಯ್ಯಲು ಯೋಜಿಸುತ್ತಿದ್ದಾರೆ. ಹೌದು, ಆಮಿ, ಜಾರ್ಜ್ ಪನಾಯೋಟೌ ಜೊತೆ ಸಪ್ತಪದಿ ತುಳಿಯಲು ನಿರ್ಧರಿಸಿದ್ದಾರೆ.

Amy Jackson Seven-Month Pregnancy, Ready for Marriage

ಇಟಲಿಯಲ್ಲಿ ವಿವಾಹವಾಗಲು ಬಯಸಿರುವ ಆಮಿ ಜಾಕ್ಸನ್, ತಾವು ಮದುವೆ ಮಾಡಿಕೊಂಡ ನಂತರ ಮಗುವನ್ನು ಬರ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಈ ವಿಷಯವನ್ನು ಸ್ವತಃ ಆಮಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇದುವರೆಗೂ ಮುಕ್ತವಾಗಿ ಎಲ್ಲವನ್ನು ಹಂಚಿಕೊಂಡು ಬರುತ್ತಿರುವ ಆಮಿಯ ಈ ನಿರ್ಧಾರಕ್ಕೆ ಪ್ರತಿಯೊಬ್ಬರು ವಿಶ್ ಮಾಡಿದ್ದು, ಮಗುವನ್ನು ಈ ರೀತಿ ಸ್ವಾಗತಿಸುತ್ತಿರುವುದು ನಿಜಕ್ಕೂ ಸ್ಪೆಷಲ್ ಎಂದು ಶ್ಲಾಘಿಸುತ್ತಿದ್ದಾರೆ.

ವಿಡಿಯೋ ವೈರಲ್: ಗೆಳತಿಯ ಮುಂದೆಯೇ ಮುತ್ತಿಕ್ಕಿದ ಯಶಿಕಾಳ ಗೆಳೆಯ!

#balkaninews #amyjackson #georgepanayiotou #wedding

Tags