ಸುದ್ದಿಗಳು

ಗರ್ಭಾವಸ್ಥೆಯ ವೇಳೆ ಜಿಮ್ ನಲ್ಲಿ ವರ್ಕೌಟ್!! ಆಮಿಗೆ ನೆಟ್ಟಿಗರು ಗರಂ!!

ಮುಂಬೈ,ಏ.12: ಆಮಿ ಜಾಕ್ಸನ್ ಫಿಟ್ನೆಸ್ ಫ್ರೀಕ್ ಮತ್ತು ಜಿಮ್ ನಲ್ಲಿ ಹೆಚ್ಚು ಸಮಯ ಕಳೆಯುತ್ತಾಳೆಎಂದು ತಿಳಿದಿದೆ. ನಟಿ ಇತ್ತೀಚೆಗೆ  ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದಾಗ ಕನ್ನಡಿಯ ಮುಂದೆ  ಫೋಟೋ ಹೊಡೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಳು.. ಇದರಲ್ಲಿ ಅವಳ ಮಗುವಿನ ಬಂಪ್  ಕೂಡ ಕೂಡಾ ಕಾಣಿಸುತ್ತಿದೆ. ಕೆಲವೊಂದು ಅಭಿಮಾನಿಗಳು ಆಮಿ ಗರ್ಭಾವಸ್ಥೆಯಲ್ಲಿ ಕೂಡ ಫಿಟ್ನೆಸ್ ಕಾಪಾಡಿಕೊಳ್ಳುತ್ತಿದ್ದಾಳೆ ಎಂದು ಕಾಳಜಿಯನ್ನು ವ್ಯಕ್ತಪಡಿಸಿದರೆ, ಮತ್ತು ಗರ್ಭಾವಸ್ಥೆಯಲ್ಲಿ ಈ ರೀತಿ ಕೆಲಸ ಮಾಡಬಾರದು ಎಂದು ಟೀಕಿಸಿದ್ದಾರೆ. ಅದರ ಬದಲು ಕಾಳಜಿ ವಹಿಸಿಕೊ ಳ್ಳಲಿ ಎಂದು ಅಭಿಮಾನಿಗಳು ಕೇಳಿಕೊಂಡಿದ್ದಾರೆ. ಆಮಿ ಮತ್ತು ಅವಳ ಗೆಳೆಯ ಜಾರ್ಜ್ ಪಾನಾಯ್ಟೊವ್ ಈ ಅಕ್ಟೋಬರ್ ತಿಂಗಳಿನಲ್ಲಿ ಅವರ ಮೊದಲ ಮಗುವನ್ನು ನಿರೀಕ್ಷಿಸುತ್ತಿದ್ದಾರೆ. ಇತ್ತೀಚೆಗೆ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದರು..

Image result for Amy criticized for workout during pregnancy

ಜಗತ್ತಿನಲ್ಲಿಎಲ್ಲದಿಕ್ಕಿಂತ  ಹೆಚ್ಚು ಪ್ರೀತಿಸುತ್ತೇನೆ

ಆಮಿ ಸಾಮಾಜಿಕ ಮಾಧ್ಯಮದ ಫೋಟೊದೊಂದಿಗೆ ಇತ್ತೀಚೆಗೆ ತನ್ನ ಬೇಬಿ ಬಂಪ್ ನೊಂದಿಗೆ ತಾನು ಗರ್ಭಿಣಿ ಎಂದು ಪೋಸ್ಟ್ ಹಾಕಿಕೊಂಡಿದ್ದಳು..ಅವಳು “ನಾನು ಮೇಲ್ಛಾವಣಿಗಳಿಂದ ಕೂಗಲು ಕಾಯುತ್ತಿದ್ದೇನೆ ಮತ್ತು ಇಂದು, ತಾಯಿಯ ದಿನ (ಮಾರ್ಚ್ 31) ಆಗಿರುವುದರಿಂದ, ಅದು ಹೆಚ್ಚು ಪರಿಪೂರ್ಣ ಸಮಯವಾಗಿರಲು ಸಾಧ್ಯವಿಲ್ಲ … ನಾನು ಈಗಾಗಲೇ ನಿನ್ನನ್ನು ಈ ಜಗತ್ತಿನಲ್ಲಿಎಲ್ಲದಿಕ್ಕಿಂತ  ಹೆಚ್ಚು ಪ್ರೀತಿಸುತ್ತೇನೆ, ಶುದ್ಧವಾದ ಅತ್ಯಂತ ಪ್ರಾಮಾಣಿಕ ಪ್ರೀತಿ.. ನಿನ್ನನ್ನು ಭೇಟಿ ಮಾಡಲು ಇನ್ನು ನಾವು ಕಾಯಲು ಸಾಧ್ಯವಿಲ್ಲ ” ಎಂದು ಈ ಹಿಂದೆ ಇನ್ಸ್ಟಾಗ್ರಾಂನಲ್ಲಿ ಹಾಕಿದ್ದಳು..

ಆರೋಗ್ಯ ವೃದ್ಧಿಸುವ ಸೀತಾಫಲ

#amyjackson #sandalwood #hollywood #babybump

 

Tags

Related Articles