ಬಾಲ್ಕನಿಯಿಂದಸುದ್ದಿಗಳು

ಎಪ್ಪತ್ತರ ಹರೆಯಕ್ಕೆ ಕಾಲಿಟ್ಟ ಎವರ್ ಗ್ರೀನ್ ಸ್ಟಾರ್

ಹಿರಿಯ ನಟ ಅನಂತ್ ನಾಗ್ ಇಂದು (ಸೆ.4) 70ನೇ ವಸಂತಕ್ಕೆ ಪಾದಾರ್ಪಣ

70 ನೇ ವಯಸ್ಸಿನಲ್ಲಿಯೂ ಬಹು ಬೇಡಿಕೆಯನ್ನು ಉಳಿಸಿಕೊಂಡಿರುವ ಅನಂತ್ ನಾಗ್ ರವರು ಈಗಲೂ ಅನೇಕ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ಬೆಂಗಳೂರು, ಸ,04: ಅನಂತನಾಗ್ ಅನಂತ ಸಾಧ್ಯತೆಗಳ ಮೇರು ಕಲಾವಿದ. 1973ರ ವರ್ಷದ ‘ಸಂಕಲ್ಪ’ ಚಿತ್ರದಿಂದ 2018ರ ವರ್ಷದಲ್ಲಿ ಇತ್ತೀಚಿನ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ ಚಿತ್ರದವರೆಗೂ ಅವರು ಮೆರೆಯುತ್ತಾ ಬಂದಿರುವ ಶ್ರೇಷ್ಠತೆ ಅಸಾಧಾರಣವಾದದ್ದು. ಈ ಚಿತ್ರವು ದೊಡ್ಡ ಯಶಸ್ಸು ಗಳಿಸುವ ಮೂಲಕ ಅವರ ಜನ್ಮದಿನದ ಸಂಭ್ರಮವನ್ನು ಹೆಚ್ಚಿಸಿದೆ.

ಈಗಲೂ ಬಹು ಬೇಡಿಕೆಯ ಕಲಾವಿದ

ವಯಸ್ಸು 60 ದಾಟಿದ ನಂತರ ಅನೇಕ ಕಲಾವಿದರು ಮೂಲೆಗುಂಪಾದ ಉದಾಹರಣೆಗಳಿವೆ. ಆದರೆ, ಇಂಥ ಇಳಿ ವಯಸ್ಸಿನಲ್ಲೂ ಅನಂತ್ನಾಗ್ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲ, ವಯಸ್ಸು ದೇಹಕ್ಕೆ ಮಾತ್ರ. ಒಳಗಿರುವ ಕಲಾವಿದನಿಗಲ್ಲ ಎಂಬುದನ್ನು ಪ್ರತಿ ಸಿನಿಮಾದ ಮೂಲಕ ಅವರು ಸಾಬೀತು ಪಡಿಸುತ್ತಿದ್ದಾರೆ.

ಅನಂತನಾಗ್ ಅವರು ಜನಿಸಿದ್ದು ಸೆಪ್ಟೆಂಬರ್ 4, 1948ರಲ್ಲಿ. ಅಮ್ಮ ಆನಂದಿ, ತಂದೆ ಸದಾನಂದ ನಾಗರಕಟ್ಟೆ. ಪ್ರಾರಂಭಿಕ ಓದು ದಕ್ಷಿಣ ಕನ್ನಡದ ಆನಂದ ಆಶ್ರಮದಲ್ಲಿ. ಆ ನಂತರದಲ್ಲಿ ಉತ್ತರ ಕನ್ನಡದ ಚಿತ್ರಾಪುರ ಮಠದಲ್ಲಿ ನೆರವೇರಿತು. ಹೆಚ್ಚಿನ ಓದಿಗೆ ಮುಂಬೈನಲ್ಲಿ ನೆಲೆಸಿದ್ದ ಅನಂತ್, ಮರಾಠಿ ರಂಗಭೂಮಿಯನ್ನು ಎಂಟು ವರ್ಷಗಳ ಕಾಲ ಬೆಳಗಿದರು.

ಪಂಚಭಾಷಾ ಕಲಾವಿದ

ಅವರು ಸಪ್ತಭಾಷಾ ತಾರೆ. ಕನ್ನಡ, ಹಿಂದಿ, ಮರಾಠಿ, ತಮಿಳು, ತೆಲುಗು, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅವರು ನೆನಪಿನಲ್ಲಿ ಉಳಿಯುವಂತಹ ಪಾತ್ರಗಳಲ್ಲಿ ನಟಿಸಿ ಎಲ್ಲೆಲ್ಲೂ ವಿಜ್ರಂಭಿಸಿದ್ದಾರೆ. ತುಂಬಿದ ಕೊಡ ತುಳುಕುವುದಿಲ್ಲ. ಅನಂತನಾಗ್ ಎಲ್ಲವನ್ನೂ ಸದ್ದುಗದ್ದಲವಿಲ್ಲದೆ ಮಾಡುತ್ತಾ ನಡೆಯುತ್ತಾರೆ.

ಸಿನಿಮಾಗಳು

ತಾವು ಅಷ್ಟೊಂದು ದೊಡ್ಡ ನಟರಾದರೂ ಅನಂತ್ ಇತರ ನಾಯಕರು ಪ್ರಧಾನವಾಗಿದ್ದ ಚಿತ್ರಗಳಲ್ಲಿನ ಬೆಂಬಲಿತ ಪಾತ್ರಗಳಲ್ಲಿ ನಟಿಸಲು ಎಂದೂ ಹಿಂಜರಿದವರಲ್ಲ.1975ರಲ್ಲಿ ಮೂಡಿಬಂದ ಜಿ.ವಿ. ಅಯ್ಯರ್ ಅವರ ‘ಹಂಸಗೀತೆ’ಯಿಂದ ಅನಂತನಾಗ್ ಕಲಾ ಸಾಂಸ್ಕೃತಿಕ ಲೋಕಗಳಲ್ಲಿ ಜನಪ್ರಿಯರಾದರು. ಮುಂದೆ 1977ರ ದೊರೈ ಭಗವಾನರ ‘ಬಯಲುದಾರಿ’ ಅವರನ್ನು ಕನ್ನಡದ ಮನೆಮನೆಯಲ್ಲೂ ಮನಮನಗಳಲ್ಲೂ ಪ್ರತಿಷ್ಟಾಪಿಸಿತು.

ಇತರೇ ಸಿನಿಮಾಗಳು

‘ಹಂಸಗೀತೆ’, ‘ಕನ್ನೇಶ್ವರ ರಾಮ’, ‘ಬರ’, ‘ಅವಸ್ಥೆ’, ‘ಉದ್ಭವ’, ‘ಮಿಂಚಿನ ಓಟ’, ‘ಆಕ್ಸಿಡೆಂಟ್’, ‘ಬೆಳದಿಂಗಳ ಬಾಲೆ’, ‘ಮತದಾನ’, ‘ಮೌನಿ’, ‘ಅನುರೂಪ’, ‘ರಾಮಾಪುರದ ರಾವಣ’, ‘ಸಿಂಹಾಸನ’, ‘ಅನ್ವೇಷಣೆ’ ,’ ನಾನಿನ್ನ ಬಿಡಲಾರೆ’, ‘ಚಂದನದ ಗೊಂಬೆ’, ‘ಇಬ್ಬನಿ ಕರಗಿತು’, ಮುದುಡಿದ ತಾವರೆ ಅರಳಿತು’, ‘ಮಕ್ಕಳಿರಲವ್ವ ಮನೆತುಂಬ’, ‘ನೋಡಿ ಸ್ವಾಮಿ ನಾವಿರೋದು ಹೀಗೆ’, ‘ಧೈರ್ಯಲಕ್ಷ್ಮಿ’, ‘ಬಿಡುಗಡೆಯ ಬೇಡಿ’ ‘ಅನುಪಮ’, ‘ಮುಳ್ಳಿನಗುಲಾಬಿ’, ‘ಹೊಸ ನೀರು’ , ‘ದೇವರ ಕಣ್ಣು’, ‘ಜನ್ಮಜನ್ಮದ ಅನುಬಂಧ’, ‘ಬಾಡದ ಹೂವು’ ‘ಚಾಲೆಂಜ್ ಗೋಪಾಲಕೃಷ್ಣ’, ‘ಗೋಲ್ ಮಾಲ್ ರಾಧಾಕೃಷ್ಣ’, ‘ಸುಖ ಸಂಸಾರಕ್ಕೆ ಹನ್ನೆರಡು ಸೂತ್ರಗಳು’, ‘ಹೆಂಡ್ತೀಗ್ಹೇಳ್ಬೇಡಿ’, ‘ಗೌರಿ ಗಣೇಶ’, ‘ಗಣೇಶ ಸುಬ್ರಮಣ್ಯ’, ‘ಮನೇಲಿ ಇಲಿ ಬೀದೀಲಿ ಹುಲಿ’, ‘ಧೈರ್ಯಲಕ್ಷ್ಮಿ’, ‘ನಾರದ ವಿಜಯ’, ‘ಹಾಸ್ಯರತ್ನ ರಾಮಕೃಷ್ಣ’, ‘ಯಾರಿಗೂ ಹೇಳ್ಬೇಡಿ’, ‘ಗಾಯತ್ರಿ ಮದುವೆ’, ‘ಇನ್ನೊಂದು ಮದುವೆ’, ‘ಯಾರಿಗೆ ಸಾಲುತ್ತೆ ಸಂಬಳ’, ‘ಉಂಡು ಹೋದ ಕೊಂಡುಹೋದ’, ‘ಉದ್ಭವ’, ‘ಹೆಂಡ್ತಿ ಬೇಕು ಹೆಂಡ್ತಿ’, ‘ಸಮಯಕ್ಕೊಂದು ಸುಳ್ಳು’, ‘ನಾನೇನೂ ಮಾಡ್ಲಿಲ್ಲ’, ‘ಸಕ್ಕರೆ’ ‘ಮುಂಗಾರುಮಳೆ’, ‘ಗಾಳಿಪಟ’ ‘ನಿಷ್ಕರ್ಷ’, ‘ಮತ್ತೆ ಹಾಡಿತು ಕೋಗಿಲೆ’, ‘ಜೀವನದಿ’, ಹೀಗೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಕವಲು ದಾರಿ

‘ಕಾಸರಗೋಡು’ ಚಿತ್ರದಲ್ಲಿ ಅನಂತ ಪದ್ಮನಾಭ ಪಿ. ಹೆಸರಿನ ಪಾತ್ರದಲ್ಲಿ ಅನಂತ್ ನಾಗ್ ರವರು ನಟಿಸಿದ್ದು ನೋಡುಗರ ಮೆಚ್ಚುಗೆ ಗಿಟ್ಟಿಸಿದ್ದಾರೆ. ಬಣ್ಣದ ಬದುಕು ಆರಂಭಿಸಿ ಬರೋಬ್ಬರಿ 45 ವರ್ಷಗಳು ಕಳೆದಿವೆ. ಸದ್ಯ, ‘ಕವಲು ದಾರಿ’ ಸೇರಿ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ಅನಂತನಾಗ್ ಅವರೇ , ನಿಮಗೆ ನಮ್ಮ ಬಾಲ್ಕನಿ ನ್ಯೂಸ್ ಡಾಟ್ ಕಾಮ್ ನಿಂದ ಹುಟ್ಟು ಹಬ್ಬದ ಶುಭಹಾರೈಕೆಗಳು.

Tags