ಸುದ್ದಿಗಳು

ವೈವಾಹಿಕ ಜೀವನಕ್ಕೆ ಕಾಲಿಟ್ಟ ಅನನ್ಯಾ ಕಾಸರವಳ್ಳಿ

ಸ್ಯಾಂಡಲ್ ವುಡ್ ನಲ್ಲಿ ಮದುವೆ ಮತ್ತು ನಿಶ್ವಿತಾರ್ಥದ ಕಾರ್ಯಕ್ರಮಗಳು

ಬೆಂಗಳೂರು.ಫೆ.23: ಚಂದನವನದಲ್ಲಿ ಕಳೆದೆರೆಡು ದಿನಗಳಿಂದ ಕಲಾವಿದರ ಮನೆಗಳಲ್ಲಿ ಶುಭ ಕಾರ್ಯಗಳು ನಡೆಯುತ್ತಿವೆ. ಕಿರುತೆರೆ ನಟಿ ನೇಹಾ ಪಾಟೀಲ್ ಮದುವೆ ದಿನವೇ ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಪುತ್ರಿ ಅನನ್ಯ ಕಾಸರವಳ್ಳಿ ಅವರ ವಿವಾಹವೂ ಜರುಗಿದೆ. ಹಾಗೆಯೇ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರಿ ಗೀತಾಂಜಲಿಯವರ ನಿಶ್ಚಿತಾರ್ಥವೂ ನಡೆದಿದೆ.

ಮದುವೆಯ ಕಾರ್ಯಕ್ರಮ

ಚಂದನವನದ ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಪುತ್ರಿ ಅನನ್ಯಾ ಕಾಸರವಳ್ಳಿಯವರು ಸಂತೋಷ್ ಅವರೊಂದಿಗೆ ನಿನ್ನೆ ಬೆಳಿಗ್ಗೆ ಬಾಳಬಂಧನಕ್ಕೆ ಒಳಗಾದರು. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ವಿವಾಹ ಸಮಾರಂಭಕ್ಕೆ ಹಲವು ಸೆಲೆಬ್ರಿಟಿಗಳು ಸಾಕ್ಷಿಯಾದರು.

ಅನನ್ಯಾರ ಬಗ್ಗೆ

ಇದೇ ತಿಂಗಳ 12 ರಂದು ಅನನ್ಯರವರ ನಿಶ್ಚಿತಾರ್ಥ ನಡೆದಿತ್ತು. ಅಂದ್ಹಾಗೆ ಅನನ್ಯ ವರಿಸಿರುವ ಸಂತೋಷ್ ಅವರು ಜೈನ್ ಯೂನಿವರ್ಸಿಟಿಯಲ್ಲಿ ರಿಜಿಸ್ಟಾರ್ ಆಗಿ ಕೆಲಸ ಮಾಡುತ್ತಿದ್ದಾರೆ.

ಇನ್ನು ಅನನ್ಯಾರವರು ಕನ್ನಡ ಚಿತ್ರರಂಗದಲ್ಲಿ ನಟಿ ಮತ್ತು ನಿರ್ದೇಶಕಿಯಾಗಿ ಸಕ್ರಿಯವಾಗಿದ್ದಾರೆ. ಇವರು ಪ್ರಸಿದ್ಧ ನಿರ್ದೇಶಕ ಗಿರೀಶ ಕಾಸರವಳ್ಳಿ ಮತ್ತು ವೈಶಾಲಿ ಕಾಸರವಳ್ಳಿಯವರ ಪುತ್ರಿ.

ತಂದೆ ರೀತಿಯೇ ಸಿನಿಮಾದಲ್ಲಿ ಆಸಕ್ತಿ ಹೊಂದಿರುವ ಅನನ್ಯಾ ‘ಹರಿಕಥಾ ಪ್ರಸಂಗ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಯಾಗಿಯೂ ಗುರುತಿಸಿಕೊಂಡಿದ್ದಾರೆ. ‘ಕಪ್ಪು ಕಲ್ಲಿನ ಸೈತಾನ’ ಎಂಬ ಡಾಕುಮೆಂಟರಿಯನ್ನು ಕೂಡ ಮಾಡಿದ್ದಾರೆ. ಇವರ ದಾಂಪತ್ಯ ಜೀವನ ಸುಖಮಯವಾಗಿರಲಿ ಎಂದು ಬಾಲ್ಕನಿ ನ್ಯೂಸ್ ಶುಭ ಹಾರೈಸುತ್ತದೆ.

ಬಿಡುಗಡೆಯಾಯ್ತು ‘ಲಂಡನ್ ನಲ್ಲಿ ಲಂಬೋದರ’ ನ ಮೊದಲ ಹಾಡು

#ananayakasaravalli, #balkaninews #maduve, #marrige, #kannadasuddigalu

Tags