ಸುದ್ದಿಗಳು

‘ಆನಂದ್’ ಚಿತ್ರದ ಚಿತ್ರೀಕರಣದಲ್ಲಿ ಮೋಜು ಮಸ್ತಿ ಮಾಡುತ್ತಿರುವ ನಾಯಕಿಯರು

ಬೆಂಗಳೂರು, ಅ.16:

ನಟ ಶಿವರಾಜ್ ಕುಮಾರ್ ‘ಆನಂದ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ನಾಯಕನಟರಾಗಿ ಪಾದಾರ್ಪಣೆ ಮಾಡಿದ್ದರು. 1986ರಲ್ಲಿ ತೆರೆ ಕಂಡಿದ್ದ ಈ ಚಿತ್ರ ಸೂಪರ್ ಹಿಟ್ ಆಗಿತ್ತು. ಇದೇ ಹೆಸರು ಇದೀಗ ಮರು ಬಳಕೆಯಾಗುತ್ತಿದೆ. ವಿಶೇಷವೆಂದರೆ ಇದೇ ಟೈಟಲ್ ನಲ್ಲಿ ಸ್ವತಃ ಶಿವಣ್ಣನೇ ನಟಿಸುತ್ತಿದ್ದಾರೆ.  ಈ ಚಿತ್ರದಲ್ಲಿ ಶಿವಣ್ಣನಿಗೆ ಜೋಡಿಯಾಗಿ ರಚಿತಾ ರಾಮ್ ಮತ್ತು ನಿಧಿ ಸುಬ್ಬಯ್ಯ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಶೂಟಿಂಗ್ ನಲ್ಲಿ  ನಾಯಕಿಯರಿಬ್ಬರು  ಮೋಜು ಮಸ್ತಿ ಮಾಡಿರುವ ಕೆಲವು ಪೋಟೋಗಳು ವೈರಲ್ ಆಗಿವೆ.

ರಚಿತಾ ರಾಮ್ ಮತ್ತು ನಿಧಿ ಸುಬ್ಬಯ್ಯ

ಹೌದು, ರಚಿತಾ ರಾಮ್ ಮತ್ತು ನಿಧಿ ಸುಬ್ಬಯ್ಯ ಶಿವರಾಜ್ ಕುಮಾರ್ ರವರ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಭರದಿಂದ ಸಾಗಿದ್ದು, ಅದ್ದೂರಿಯಾಗಿ ನಡೆಯುತ್ತಿದೆ. ಇತ್ತಿಚೆಗಷ್ಟೇ ಆನಂದ್  ಚಿತ್ರೀಕರಣದ ಬಿಡುವಿನ ವೇಳೆಯಲ್ಲಿ ಚಿತ್ರದ ನಾಯಕಿಯರು ಜೊತೆಗೂಡಿ ಕೆಲವು ಪೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ರಚಿತಾ  ಮತ್ತು ನಿಧಿ ಈ ಪೋಟೋಗಳಲ್ಲಿ ಮುದ್ದು ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಈ ಪೋಟೋಗಳಲ್ಲಿ ಶಿವಣ್ಣ ಕೂಡ ಭಾಗಿಯಾಗಿದ್ದರು.

ಚಿತ್ರದ ಬಗ್ಗೆ

‘ಶಿವಲಿಂಗ’ ಚಿತ್ರದ ನಂತರ ಪಿ. ವಾಸು ಮತ್ತು ಶಿವರಾಜ್ ಕುಮಾರ್ ‘ಆನಂದ್’ ಚಿತ್ರದ ಮೂಲಕ ಮತ್ತೆ ಒಂದಾಗಿದ್ದಾರೆ. ಈ ಬಾರಿಯೂ ಕೂಡ ಥ್ರಿಲ್ಲರ್ ಶೈಲಿಯಲ್ಲಿಯೇ ಸಿನಿಮಾ ಮಾಡಲಾಗುತ್ತಿದೆ. ಹಿರಿಯ ನಟ-ನಿರ್ಮಾಪಕ ದ್ವಾರಕೀಶ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

#sandalwood #kannadamovies #balkaninews #shivarajkumar #anandkannadamovie #shivarajkumarandrachitharam #rachitharammovies #rachitharamandnidhisubbaaih

 

Tags