ಸುದ್ದಿಗಳು

ನನ್ನ ಕಲ್ಪನೆಯಲ್ಲಿರುವ ನುಸ್ರತ್ ಗಿಂತ ನನಗ್ಯಾರೂ ಇಷ್ಟವಾಗಲ್ಲ’ : ಅನಂತು ವರ್ಸಸ್ ನುಸ್ರತ್ ಟ್ರೈಲರ್ ಬಿಡುಗಡೆ

ವಿನಯ್ ರಾಜ್ ಕುಮಾರ್ ಅಭಿನಯದ ಮೂರನೇ ಚಿತ್ರ

ಬೆಂಗಳೂರು, ಸ.12: ಇತ್ತಿಚೆಗಷ್ಟೇ ‘ಗ್ರಾಮಾತಣ’ ಚಿತ್ರದ ಟೀಸರ್ ಮೂಲಕ ಗಮನ ಸೆಳೆದಿದ್ದ ನಟ ವಿನಯ್ ರಾಜ್ ಕುಮಾರ್ ಇದೀಗ ಮತ್ತೊಮ್ಮೆ ‘ಅನಂತು ವರ್ಸಸ್ ನುಸ್ರತ್’ ಟ್ರೈಲರ್ ಮೂಲಕ ಸದ್ದು ಮಾಡುತ್ತಿದ್ದಾರೆ.

ಗಮನ ಸೆಳೆಯುವ ಟ್ರೈಲರ್

ಸದ್ಯ ಈ ಚಿತ್ರದ ಟ್ರೈಲರ್ ಇಂದು ಪುನೀತ್ ರ ಪಿ.ಆರ್.ಕೆ ಸಂಸ್ಥೆಯು ತನ್ನ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆ ಮಾಡಿದ್ದು, ನೋಡುಗರಿಂದ ಮೆಚ್ಚುಗೆ ಪಡೆಯುತ್ತಿದೆ. ಚಿತ್ರದಲ್ಲಿ ನಾಯಕ ಅನಂತುವಿನ ಮದುವೆಗಾಗಿ ಹುಡುಗಿಯನ್ನು ಹುಡುಕಲು ಹೊರಡುವ ವೇಳೆಯಲ್ಲಿ ಅವನಿಗೆ ನಾಯಕಿ ನುಸ್ರತ್ ನೆನಪಾಗುತ್ತಾಳೆ. ಮುಂದೆ ಏನಾಗಲಿದೆ ಎಂಬುದನ್ನು ನೋಡಲು ಚಿತ್ರ ತೆರೆ ಕಾಣುವವರೆಗೂ ಕಾಯಬೇಕಾಗುತ್ತದೆ.

ಚಿತ್ರದ ಬಗ್ಗೆ

‘ಅನಂತು ವರ್ಸಸ್ ನುಸ್ರತ್’ ಚಿತ್ರವನ್ನು ಸುಧೀರ್ ಶಾನುಭೋಗ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ವಿನಯ್ ವಕೀಲರ ಪಾತ್ರದಲ್ಲಿ ಕಾಣಿಸಿದ್ದಾರೆ. ಇನ್ನು ಅವರಿಗೆ ನಾಯಕಿಯಾಗಿ ಲತಾ ಹೆಗಡೆ ತೆರೆ ಹಂಚಿಕೊಂಡಿದ್ದಾರೆ. ಚಿತ್ರಕ್ಕೆ ಅಭಿಷೇಕ್ ಕಾಸರಗೋಡು ಅವರ ಛಾಯಾಗ್ರಹಣವಿದ್ದು, ಸುನದ್ ಗೌತಮ್ ಸಂಗೀತ ಸಂಯೋಜಿಸಿದ್ದಾರೆ.

ಕಾಮಿಡಿ ನಯನಾ

ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಪರಿಚಿತರಾಗಿರುವ ನಟಿ ನಯನ ಈ ಚಿತ್ರದಲ್ಲಿ . ನಾಯಕ ವಿನಯ್ ರಾಜ್ಕುಮಾರ್ ಸಹದ್ಯೋಗಿ ‘ಶಾಂತಲಕ್ಷ್ಮೀ’ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ಚಿತ್ರದಲ್ಲಿ ಡಾ. ರಾಜ್ ಕುಮಾರ್ ಅಭಿನಯಿಸಿದ್ದ ‘ಚಲಿಸುವ ಮೋಡಗಳು’ ಚಿತ್ರದಲ್ಲಿನ ‘ಮೈ ಲಾರ್ಡ್ ನನ್ನ ವಾದ ಕೇಳಿ’ ಎಂಬ ಹಾಡನ್ನು ಬಳಸಿಕೊಳ್ಳಲಾಗಿದೆ.

Tags