ಸುದ್ದಿಗಳು

ತೆಲುಗು ನಟಿ ಅನಸೂಯಗೆ ಸಿಕ್ಕ ಆ ಎರಡು ಬಿಗ್ ಆಫರ್..!

ಹೈದ್ರಾಬಾದ್, ಏ.25:

ಒಂದೊಮ್ಮೆ ನಿರೂಪಕಿಯಾಗಿದ್ದ ಅನಸೂಯ ಭಾರದ್ವಾಜ್ ಈಗ ತೆಲುಗಿನ ಯುವ ನಟಿ. ಯುವ ನಾಯಕಿಯಾಗಿ ಭರವಸೆ ಮೂಡಿಸಿರೋ ಅನಸೂಯಗೆ ಎರಡು ಬಿಗ್ ಬಜೆಟ್ ಹಾಗೂ ಸ್ಟಾರ್ ನಟರ ಜೊತೆಗೆ ನಟಿಸುವ ಅವಕಾಶ ಸಿಕ್ಕಿದೆ. ಯೆಸ್‌. ಮೊದಲನೆಯದು ಮೆಗಾಸ್ಟಾರ್ ಚಿರಂಜೀವಿ ಜೊತೆಗಿನ ಸಿನಿಮಾ. ‌ಇನ್ನೊಂದು ನಟ ಅಲ್ಲು ಅರ್ಜುನ್ ಜೊತೆಗಿನ ಚಿತ್ರ.

ಇತ್ತೀಚಿನ ವರದಿಗಳ ಪ್ರಕಾರ ಅನಸೂಯ ಮೊದಲು ಅಲ್ಲು ಅರ್ಜುನ್ ನಾಯಕ ನಟನೆಯ ನಿರ್ದೇಶಕ ಸುಕುಮಾರ್ ರ ಮುಂಬರುವ ಹೊಸ ಚಿತ್ರದಲ್ಲಿ ನಟಿಸಲಿದ್ದಾರೆ. ಇದಕ್ಕೆ ಕಾರಣ ಕೂಡಾ ಇದೆ. ನಿರ್ದೇಶಕ ಸುಕುಮಾರ್ ರವರು ‘ರಂಗಸ್ಥಳಂ’  ಚಿತ್ರದಲ್ಲಿ ಅನಸೂಯಗೆ ಮೊದಲಿಗೆ ನಟಿಸಲು ಅವಕಾಶ ನೀಡಿದ್ದರು. ಈ ಚಿತ್ರ ಅನಸೂಯರ ಬದುಕನ್ನೇ ಬದಲಾಯಿಸಿತು.

ಹೀಗಾಗಿ ತನಗೆ ಬಂದಿರುವ ಎರಡು ಬಿಗ್ ಆಫರ್ ಗಳಲ್ಲಿ ಮೊದಲಿಗೆ ಸುಕುಮಾರ್ ರವರ ಚಿತ್ರದಲ್ಲಿ ನಟಿಸಲು ಅನಸೂಯ ನಿರ್ಧರಿಸಿದ್ದಾರೆ. ಹೀಗಾಗಿ ಈ ಚಿತ್ರ ಬಹಳ ಕುತೂಹಲ ಮೂಡಿಸಿದೆ. ಮತ್ತೊಂದೆಡೆ ನಟಿ ಅನಸೂಯ ಚಿರಂಜೀವಿ ಜೊತೆಗೆ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಹೊಸ ಚಿತ್ರವನ್ನು ಕೊರಟಾಲ ಶಿವ ನಿರ್ದೇಶಿಸಲಿದ್ದಾರೆ. ಈ ಚಿತ್ರದ ಬಗ್ಗೆ ಚಿತ್ರತಂಡ ಯಾವುದೇ ವಿಷಯವನ್ನು ಬಿಟ್ಟುಕೊಟ್ಟಿಲ್ಲ. ಒಟ್ಟಿನಲ್ಲಿ ಈ ಯುವ ನಟಿ ಮೆಗಾ ಸ್ಟಾರ್ ನಟರ ಜೊತೆಗೆ ನಟಿಸುವ ಅವಕಾಶ ಪಡೆದಿದ್ದಾರೆ. ‘ರಂಗಸ್ಥಳಂ’ ಚಿತ್ರದಲ್ಲಿ ನಟಿಸುವ ಮುಂಚೆಯೇ, ಅನಸೂಯ ಅವರು ಸಾಯಿ ಧರ್ಮಂ ತೇಜ್ ಜೊತೆಗೆ ‘ವಿನ್ನರ್’ ಎಂಬ ಆಲ್ಬಂ ಸಾಂಗ್ ನಲ್ಲಿ ಹೆಜ್ಜೆ ಹಾಕಿದ್ದರು. ಹಾಗೆಯೇ  ಎಫ್ -2 ಫನ್ ಮತ್ತು ಫ್ರಸ್ಟ್ರೇಷನ್ ನಲ್ಲಿ ಕಾಣಿಸಿಕೊಂಡಿದ್ದರು. ಜೊತೆಗೆ ಮೆಗಾ ನಾಯಕರು ಹೊಂದಿರುವ ಚಲನಚಿತ್ರಗಳಲ್ಲಿ ಕೂಡಾ ಅಭಿನಯಿಸಿದ್ದಾರೆ.

‘ಜಬರ್ ದಸ್ತ್’ ಎಂಬ ಜನಪ್ರಿಯ ಶೋ ಮೂಲಕ ಅನಸೂಯ ತನ್ನ ನಟನಾ ವೃತ್ತಿಜೀವನವನ್ನು ಆರಂಭಿಸಿದರು.

Related image

‘ರಾಬರ್ಟ್’ ಚಿತ್ರದ ಮುಹೂರ್ತ ಮೇ 6 ರಂದು ಫಿಕ್ಸ್!!

#balkaninews #anasuyabharadwaj #tollywood

Tags