ಸುದ್ದಿಗಳು

‘ಅಂದುಕೊಂಡಂಗಲ್ಲ ಜೀವನ’ ಚಿತ್ರಕ್ಕೆ ಮುಹೂರ್ತ

ಮತ್ತೊಂದು ಹೊಸಬರ ತಂಡ

ಬೆಂಗಳೂರು, ಸ.11: ಗಾಂಧಿನಗರಕ್ಕೆ ದಿನದಿಂದ ದಿನಕ್ಕೆ ಹೊಸಬರು ಬರುತ್ತಿದ್ದಾರೆ. ಅವರಂತೆಯೇ ಮತ್ತೊಂದು ಹೊಸಬರ ತಂಡ ಪ್ರವೇಶವಾಗಿದೆ. ಹೌದು, ಶ್ರೀ ಹೊನ್ನಾದೇವಿ ಕಂಬೈನ್ಸ್ ಲಾಂಛನದಲ್ಲಿ ತೇಜಸ್ವಿನಿ ಕೆ ಬೆಳ್ತಂಗಡಿ ನಿರ್ದೇಶನ ಮಾಡುತ್ತಿರುವ ‘ಅಂದುಕೊಂಡಂಗಲ್ಲ ಜೀವನ’ ಚಿತ್ರಕ್ಕೆ ಇತ್ತಿಚೆಗಷ್ಟೇ ಮುಹೂರ್ತವಾಗಿದೆ.

ಚಿತ್ರದ ಮುಹೂರ್ತ

ಈ ಚಿತ್ರಕ್ಕೆ, ಇತ್ತೀಚೆಗೆ ಕನಕಪುರ ರಸ್ತೆಯ ಲಕ್ಷ್ಮೀಪುರದ ಶ್ರೀಶನೇಶ್ವರ ದೇವಸ್ಥಾನದಲ್ಲಿ ನೆರವೇರಿದೆ. ಮಕ್ಕಳು ಹಳ್ಳಿ ಕಟ್ಟೆ ಮೇಲೆ ಆಟ ಆಡುವ ಮೊದಲ ಸನ್ನಿವೇಶಕ್ಕೆ ಮೈಕೋ ಚಾಮಯ್ಯ ಆರಂಭ ಫಲಕ ತೋರುವ ಮೂಲಕ ಚಿತ್ರವು ಆರಂಭವಾಗಿದೆ. ಕನಕಪುರ ರಸ್ತೆಯ ಕಗ್ಗಲಿಪುರ, ತಲಘಟ್ಟುಪುರ, ಹಾರೋಹಳ್ಳಿ ಸೇರಿದಂತೆ ಮುಂತಾದ ಕಡೆ ಚಿತ್ರಕ್ಕೆ 30ದಿನಗಳ ಕಾಲ ಎರಡು ಹಂತದ ಚಿತ್ರೀಕರಣ ನಡೆಯಲಿದೆ.

ಚಿತ್ರದ ಬಗ್ಗೆ

ಶ್ರೀನಿವಾಸ್ ಮೂರ್ತಿ ಅವರು ಬರೆದಿರುವ ಕಥೆಗೆ ತೇಜಸ್ವಿನಿ ಕೆ ಬೆಳ್ತಂಗಡಿ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಇದೊಂದು ಕಾಲೇಜು ಮತ್ತು ಕೌಟುಂಭಿಕ ಕಥಾ ಹಂದರವನ್ನು ಒಳಗೊಂಡಿದೆ. ಚಿತ್ರಕ್ಕೆ ಅಭಿಜಿತ್ ವಿ ಸಾಹಿತ್ಯ ಮತ್ತು ಸಂಗೀತ, ಶಿವರಾಜ್ ಮೇಹು ಸಂಕಲನ, ಯೇಸು ಛಾಯಾಗ್ರಹಣವಿದೆ.

ಮಹಿಳಾ ನಿರ್ದೇಶಕಿ

ಇನ್ನು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಮಹಿಳಾ ನಿರ್ದೇಶಕಿಯ ಆಗಮನವಾಗಿದೆ. ತಾರಾಬಳಗದಲ್ಲಿ ರಾಘವ್, ಶಾಂತ್ ಕುಮಾರ್, ಪ್ರದೀಪ್, ಸುರಕ್ಷಾ, ಸುಧಾ ಬೆಳವಾಡಿ, ಪ್ರಭು ಶ್ರೀನಿವಾಸ್, ಸೂರಜ್ ಸೇರಿದಂತೆ ಮುಂತಾದವರು ನಟಿಸುತ್ತಿದ್ದಾರೆ.

Tags