ಸುದ್ದಿಗಳು

ಡಾ|| ರಾಜ್ ಕುಮಾರ್ ‘ಎಲ್ಲಾ ನಟರ ಚಕ್ರವರ್ತಿ’

ಅನಿಲ್ ಕಪೂರ್ ಬಾಲಿವುಡ್ ನ ಎವರ್ ಗ್ರೀನ್ ನಟ. ಈಗಲೂ ಯಂಗ್ ಆಂಡ್ ಎನರ್ಜಿಟಿಕ್ ಆಗಿ ಕಾಣುವ ಇವರು ವಯಸ್ಸು 60 ದಾಟಿದರೂ ಯಾವ ಹೀರೋಗಳಿಗೂ ಕಮ್ಮಿಯಿಲ್ಲ.

ಗಣೇಶ ಉತ್ಸವದ ಸಲುವಾಗಿ ಬಾಲಿವುಡ್ ನಟ ಅನಿಲ್ ಕಪೂರ್ ಬೆಂಗಳೂರಿಗೆ ಬಂದಿದ್ರು. ಕಾರ್ಯಕ್ರಮದಲ್ಲಿ ಬಂದು ಮಾತಾಡಿದ ಅನಿಲ್ ಕಪೂರ್  ಕನ್ನಡ ಚಲನಚಿತ್ರ, ಸಂಗೀತ, ನಾಟಕ ಉದ್ಯಮ ಮತ್ತು ಇನ್ನಿತರ ವ್ಯಕ್ತಿಗಳೊಂದಿಗಿರುವ ಬಾಂಧವ್ಯದ ಬಗ್ಗೆ ಮಾತಾಡಿದ್ರು.

Image result for rajkumar

ಕನ್ನಡ ಚಿತ್ರರಂಗದಲ್ಲಿ ಡಾ|| ರಾಜ್ ಕುಮಾರ್ ಅಂದ್ರೆ ಅಭಿಮಾನಿಗಳಿಗೆ ದೇವ್ರು ಇದ್ದಂತೆ. ಈಗ ಅಣ್ಣಾವ್ರ ಬಗ್ಗೆ ಅನಿಲ್ ಕಪೂರ್ ಮಾತಾಡಿದ್ದಾರೆ.

“ಅವರು ಕೇವಲ ಡಾ.ರಾಜ್‌ ಕುಮಾರ್ ಮಾತ್ರವಲ್ಲ. ಅವರು ಚಕ್ರವರ್ತಿ ಡಾ.ರಾಜ್‌ ಕುಮಾರ್ – ಎಲ್ಲಾ ನಟರ ಚಕ್ರವರ್ತಿ. ಅವರು ಭಾರತೀಯ ಚಿತ್ರರಂಗಕ್ಕೆ ಎಷ್ಟು ಕೊಡುಗೆ ನೀಡಿದ್ದಾರೆಂದರೆ ಹೇಳಲಾಗದು. ಅವರು ಬಿಟ್ಟುಹೋದ ಪರಂಪರೆ ಕೇವಲ ಕನ್ನಡ ಚಿತ್ರರಂಗ ಪ್ರಿಯರಿಗೆ ಒಂದು ನಿಧಿಯಲ್ಲ, ಆದರೆ ಎಲ್ಲ ಭಾರತೀಯರಿಗೂ. ಅವರು ಯಾವಾಗಲೂ ನಮ್ಮ ಹೃದಯದಲ್ಲಿ ಇರುತ್ತಾರೆ”. ಎಂದು ರಾಜ್ ಕುಮಾರ್ ಬಗ್ಗೆ ಅನಿಲ್ ಕಪೂರ್ ಹಾಡಿ ಹೊಗಳಿದ್ದಾರೆ.

ಟಾಲಿವುಡ್ ನಲ್ಲಿ ಮಿಂಚುತ್ತಿರುವ ಕನ್ನಡದ ಬೆಡಗಿ

#anilkapoor #rajkumar #anilkapoormovie

Tags