ಸುದ್ದಿಗಳು

ಆ್ಯನಿಮೇಟೆಡ್ ರೂಪದಲ್ಲಿ ಬಂದ ‘ಕೆ.ಜಿ.ಎಫ್’ ಟೀಸರ್

ಬೆಂಗಳೂರು, ಆ.17: ರಾಕಿಂಗ್ ಸ್ಟಾರ್ ಯಶ್ ಹಾಗೂ ಶ್ರೀನಿಧಿ ಶೆಟ್ಟಿ ಅಭಿನಯದ ‘ಕೆ.ಜಿ.ಎಫ್’ ಚಿತ್ರದ ಚಿತ್ರೀಕರಣ ಈಗಾಗಲೇ ಮುಗಿದಿದೆ. ಇದೀಗ ಚಿತ್ರದ ಸಂಕಲನ ಕಾರ್ಯ ಭರದಿಂದ ಸಾಗುತ್ತಿರುವ ವೇಳೆಯ ನಡುವೆ ಆ್ಯನಿಮೇಟೆಡ್ ಟೀಸರ್ ಯ್ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ.

ಅಭಿಮಾನಿಗಳಿಂದ ಆ್ಯನಿಮೇಟೆಡ್ ರೂಪ

‘ಕೆ.ಜಿ.ಎಫ್’ ಚಿತ್ರದ ಈ 2ಡಿ ಆ್ಯನಿಮೇಟೆಡ್ ಟೀಸರ್ ಅನ್ನು ಯಶ್ ಅವರ ಅಭಿಮಾನಿಗಳು ಸೇರಿಕೊಂಡು ಸೃಷ್ಟಿಸಿದ್ದಾರೆ. ಈಗಾಗಲೇ ಚಿತ್ರವು ಸಖತ್ ಕುತೂಹಲವನ್ನುಂಟು ಮಾಡುತ್ತಿದ್ದು, ವರಮಹಾಲಕ್ಷ್ಮಿ ಹಬ್ಬದಂದು ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದೆ.

ಇನ್ನು ಇದೇ ಮೊದಲ ಬಾರಿಗೆ ಯಶ್ ರಗಡ್ ಆಗಿ ಕಾಣಿಸಿಕೊಳ್ಳುತ್ತಿದ್ದು, ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಬಿಡುಗಡೆಯಾಗಿದ್ದ ಈ ಚಿತ್ರದ ಟೀಸರ್ ಯೂಟ್ಯೂಬ್ ನಲ್ಲಿ 5 ಮಿಲಿಯನ್ ಗೂ ಹೆಚ್ಚು ವೀಕ್ಷಣೆಗೆ ಒಳಪಟ್ಟಿದೆ.

Tags