ಸುದ್ದಿಗಳು

‘ರಾಮಾರ್ಜುನ’ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆ

ಇದೇ ಮೊದಲ ಬಾರಿಗೆ ನಿರ್ದೇಶಕರಾದ ಅನೀಶ್ ತೇಜೇಶ್ವರ್

ಬೆಂಗಳೂರು.ಜ.12: ಕಳೆದ ವರ್ಷ ‘ವಾಸು ನಾನು ಪಕ್ಕಾ ಕಮರ್ಷಿಯಲ್’ ಚಿತ್ರದ ಮೂಲಕ ಗೆಲುವೊಂದನ್ನು ತಮ್ಮದಾಗಿಸಿಕೊಂಡ ಅನೀಶ್ ತೇಜೇಶ್ವರ್ ಈಗ ‘ರಾಮಾರ್ಜುನ’ ಎಂಬ ಮಾಸ್ ಸಿನಿಮಾ ಮಾಡಿದ್ದು, ಇಂದು ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದೆ.

ಗಮನ ಸೆಳೆಯುವ ಫಸ್ಟ್ ಲುಕ್

ಚಿತ್ರದಲ್ಲಿ ಬಹುಶಃ ಸಾವಿನ ಕುರಿತಾಗಿ ಹೇಳುತ್ತಿರಬಹುದು ಎಂದು ಮೇಲ್ನೋಟಕ್ಕೆ ತಿಳಿಯುತ್ತಿದೆ. ಅದರಲ್ಲೂ ಅನೀಶ್ ಹೇಳುವ ‘ನಾನು ರಣರಂಗದಲ್ಲಿರುವ ಭೀಷ್ಮ, ನನ್ನ ಸಾವು ನಾನೇ ಡಿಸೈಡ್ ಮಾಡ್ಬೇಕು’ ಎಂಬ ಡೈಲಾಗ್ ಇಂಬು ಕೊಡುತ್ತದೆ.

ವಿಶೇಷವೆಂದರೆ ಇಷ್ಟು ದಿನ ನಟರಾಗಿದ್ದ ಅನೀಶ್ ಈ ಚಿತ್ರದಿಂದ ನಿರ್ದೇಶಕರಾಗಿ ಭಡ್ತಿ ಪಡೆದಿದ್ದಾರೆ. ಡೈರೆಕ್ಷನ್ ಜೊತೆ ಪ್ರೊಡ್ಯೂಸರ್ ಕೂಡ ಆಗಿರುವ ಅವರು, ರಾಮಾರ್ಜುನ ಮೂಲಕ ಅಬ್ಬರಿಸಲು ರೆಡಿಯಾಗಿದ್ದಾರೆ.

ಹಳ್ಳಿ ಗೆಟಪ್ ನಲ್ಲಿ

ಫಸ್ಟ್ ಲುಕ್ ನಲ್ಲಿ ಅನೀಶ್ ಪಕ್ಕಾ ಮಾಸ್ ಆಗಿ ರಗಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಾಸು ಕಮರ್ಷಿಯಲ್ ಅಲ್ಲ. ಪಕ್ಕಾ ಮಾಸ್ ಎನ್ನುವ ಮೆಸೇಜ್ ಕೂಡ ಕೊಟ್ಟಿದ್ದಾರೆ. ಈ ಚಿತ್ರದ ಕಥೆ ಗ್ರಾಮೀಣ ಹಿನ್ನೆಲೆಯ ವಿಷಯ ವಸ್ತು ಹೊಂದಿದೆ ಎನ್ನಲಾಗಿದ್ದು, ತಮ್ಮದೇ ಪ್ರೊಡಕ್ಷನ್ ಹೌಸ್, ವಿಂಕ್ ವಿಜಲ್ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ನಿಂದ ನಿರ್ಮಾಣವಾಗುತ್ತಿರುವ ದ್ವಿತಿಯ ಸಿನಿಮಾವಾಗಿದೆ.

ಚಿತ್ರದ ಬಗ್ಗೆ

ಈಗಾಗಲೇ ‘ರಾಮಾರ್ಜುನ’ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಸದ್ಯ ಶೇ 30 ರಷ್ಟು ಮುಗಿದಿದೆ. ಚಿತ್ರದಲ್ಲಿ ನಿಶ್ವಿಕಾ ಸೌಮ್ಯ ಸ್ವಭಾವದ ಸಂಪ್ರದಾಯಸ್ಥ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.

“ರಾಮಾರ್ಜುನ’ ಶೀರ್ಷಿಕೆ ಕೇಳಿದರೆ, ಇಲ್ಲಿ ಇಬ್ಬರು ಹೀರೋಗಳೇನಾದರೂ ಇರುತ್ತಾರಾ ಎಂಬ ಪ್ರಶ್ನೆ ಬರುತ್ತದೆ. ಆದರೆ, ಇಲ್ಲಿ ಅನೀಶ್ ತೇಜೇಶ್ವರ್ ಒಬ್ಬರೇ ಇದ್ದು, ಎರಡು ಶೇಡ್ ಇರುವ ಪಾತ್ರ ಮಾಡುತ್ತಿದ್ದಾರೆ. ಹಾಗಾದರೆ, “ರಾಮಾರ್ಜುನ’ ಕಥೆ ಏನು? ಒಂದೇ ವಾಕ್ಯದಲ್ಲಿ ಹೇಳುವ ನಿರ್ದೇಶಕ ಅನೀಶ್, ರಾಮ ಹೇಳಿದರೆ ಅವರ ಮಾತನ್ನು ಕೇಳುವುದು ಕಡಿಮೆ. ಆದರೆ, ಅರ್ಜುನ ಹೇಳಿದರೆ ಕೇಳುತ್ತಾರೆ. ಅರ್ಜುನನದು ಏನಿದ್ದರೂ ದಂಡಂ ದಶಗುಣಂ. ಇಲ್ಲಿ ಹೀರೋಗೆ ಎರಡು ರೀತಿಯ ಪಾತ್ರಗಳಿವೆ” ಎನ್ನುತ್ತಾರೆ.

#anishtejeshwar #balkaninews #filmnews, #kannadasuddigalu

Tags