ಸುದ್ದಿಗಳು

ನಮ್ಮೆಲ್ಲರಿಗೂ ಮಗಳನ್ನು ಪರಿಚಯಿಸಿದ ಅನು ಪ್ರಭಾಕರ್

ಆಗಸ್ಟ್ 15, 2018 ರಂದು ಜನಿಸಿದ ನಂದನ್ ಪ್ರಭಾಕರ್

ಬೆಂಗಳೂರು.ಜ.10: ‘ಹೃದಯಾ ಹೃದಯಾ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ ನಾಯಕಿ ಅನು ಪ್ರಭಾಕರ್. ಕ್ರಮೇಣ ಒಂದೊಂದೇ ಸಿನಿಮಾಗಳಲ್ಲಿ ನಟಿಸಿರುವ ಇವರು ರಘು ಮುಖರ್ಜಿಯವನ್ನು ಮದುವೆಯಾದರು.

ಮಗಳ ಬಗ್ಗೆ

ಅನು ಪ್ರಭಾಕರ್ ತಮ್ಮ ಟ್ವಿಟರ್ ಖಾತೆಯಲ್ಲಿ ತಮ್ಮ ಮಗಳು ನಂದನ್ ಪ್ರಭಾಕರ್ ಅವರೊಂದಿಗೆ ಪತಿ ಸಮೇತ ತೆಗೆಸಿಕೊಂಡ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಈ ಮೂಲಕ ತಮ್ಮ ಮಗಳನ್ನು ಪರಿಚಯಿಸಿ ಕೊಟ್ಟಿದ್ದಾರೆ.

ಟ್ವೀಟರ್ ನಲ್ಲಿ ಹೀಗಿದೆ

ಅನು ಪ್ರಭಾಕರ್ ತಮ್ಮ ಪತಿ, ನಟ ರಘು ಮುಖರ್ಜಿ ಹಾಗೂ ಮಗಳ ಜೊತೆಯಿರುವ ಫೋಟೋವನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. “ನಿಮೆಲ್ಲರಿಗೂ ಪರಿಚಯಿಸುತ್ತಿದ್ದೀವಿ ನಮ್ಮ ಮಗಳು `ನಂದನ ಪ್ರಭಾಕರ್ ಮುಖರ್ಜಿ’” ಎಂದು ಬರೆದು ಮೂವರ ಫೋಟೋ ಸಮೇತ ಪೋಸ್ಟ್ ಮಾಡಿದ್ದಾರೆ.

ಈ ಟ್ವೀಟ್ ಗೆ ಪ್ರಿಯಾಂಕ ಉಪೇಂದ್ರ ರೀ-ಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದಾರೆ “ಶುಭಾಶಯಗಳು. ದೇವರು ಆಕೆಯ ಜೀವನದಲ್ಲಿ ಸಾಕಷ್ಟು ಖುಷಿ ಹಾಗೂ ಪ್ರೀತಿಯನ್ನು ನೀಡಲಿ”

ಮಗಳ ಬಗ್ಗೆ

ಅನು ಪ್ರಭಾಕರ್ ಹಾಗೂ ರಘು ಮುಖರ್ಜಿ ಅವರು 2016 ಏಪ್ರಿಲ್ 25 ರಂದು ಕುಟುಂಬ ಸದಸ್ಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದು ಇಬ್ಬರದ್ದು ಎರಡನೇ ಮದುವೆಯಾಗಿದ್ದು, ಅನು ಪ್ರಭಾಕರ್ ರವರು ಆಗಸ್ಟ್ 15, 2018ರಂದು ಅಂದರೆ ಸ್ವಾತಂತ್ರ್ಯ ದಿನಾಚರಣೆಯಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

#anuprabhakar #balkaninews #anuprabhakar, #filmnews, #kannadasuddigalu

Tags