ಸುದ್ದಿಗಳು

ಅಂತರಾಷ್ಟ್ರಿಯ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಬಾಲಿವುಡ್ ನಟ!

ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಅಂತರಾಷ್ಟ್ರಿಯ ಖಾಸಗಿ ವಾಹಿನಿಯಾದ ‘ಬಾಫ್ಟಾ’ ವಾಹಿನಿಯು  ಪ್ರತಿ ವರ್ಷ ನೀಡಲಾಗುತ್ತಿರುವ ಪ್ರಶಸ್ತಿಗೆ ಬಾಲಿವುಡ್ ಖ್ಯಾತ ನಟ ಅನುಪಮ್ ಖೇರ್ ಅವರ ಸಾಧನೆಯ ಹಾದಿಯನ್ನು ಗುರುತಿಸಿ, ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿಕೊಂಡಿದೆ ಎಂದು ವರದಿಯಾಗಿದೆ. ಜೊತೆಗೆ ಅವರಿಗೆ ಪೈಪೋಟಿ ನೀಡಲು  ಐರಿಷ್ ನಟ ಬ್ರಿಯಾನ್ ಎಫ್. ಒ’ಬೈರ್ನೆ ಸಹ ನಾಮನಿರ್ದೇಶನವಾಗಿದ್ದಾರೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಭಾರತೀಯ ನಟ ನಾಮನಿರ್ದೇಶನಗೊಂಡಿರುವುದು ಇಡೀ ಚಿತ್ರರಂಗ ಹೆಮ್ಮೆಪಡುವ ವಿಷಯವಾಗಿದೆ ಎಂದು ಮಾಧ್ಯಮ ಮೂಲಗಳು ತಿಳಿಸಿವೆ.

‘ಬಾಯ್ ವಿಥ್ ದ ಟಾಪ್ಕ್ನೋಟ್’ ಗೆ ಅತ್ಯುತ್ತಮ ಪೋಷಕ ನಟ ನಾಮನಿರ್ದೇಶನಕ್ಕಾಗಿ ಬಫ್ಟಾ ನಿಯೋಜಕತ್ವಕ್ಕೆ ಅನುಪಮ್ ಖೇರ್ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ ಎನ್ನಲಾಗಿದೆ. ಇದು ನನಗೆ ಒಂದು ದೊಡ್ಡ ಗೌರವಾನ್ವಿತ ಪ್ರಶಸ್ತಿಯಾಗಿದೆ ಜೊತೆಗೆ”ವಿಶ್ವದ ಅತ್ಯುತ್ತಮ ನಟರ ಪೈಕಿ ನಾಮನಿರ್ದೇಶನಗೊಳ್ಳಲು ಇದು ಅದ್ಭುತ ಸಾಧನೆಯಾಗಿದೆ” ಎಂದು ತಮ್ಮ ಅಭಿಪ್ರಾಯವನ್ನು ಟ್ವಿಟ್ಟರ್ ನಲ್ಲಿ ವ್ಯಕ್ತಪಡಿಸಿದ್ದಾರೆ.

ಇಲ್ಲಿಯವರೆಗೂ “ನನಗೆ ಅದ್ಭುತ ಅವಕಾಶಗಳನ್ನು ನೀಡಿರುವ ಭಾರತೀಯ ಚಲನಚಿತ್ರೋದ್ಯಮಕ್ಕೆ ಸಹ ಧನ್ಯವಾದಗಳನ್ನು ಅನುಪಮ್ ಖೇರ್ ಅರ್ಪಿಸಿದ್ದಾರೆ ಎಂದು ಮಾಧ್ಯಮ ಮೂಲಗಳು ತಿಳಿಸಿವೆ.

Tags

Related Articles

Leave a Reply

Your email address will not be published. Required fields are marked *