ಸುದ್ದಿಗಳು

ನೆರೆ ಸಂತ್ರಸ್ತರ ನೆರವಿಗೆ ಧಾವಿಸಿದ ಮಾಲಿವುಡ್ ನಟಿ!

ತಿರುವನಂತಪುರಂ, ಆ.13: ಕೇರಳದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ಥಗೊಂಡಿದೆ. ಅಲ್ಲಿನ ಜನಜೀವನ ಅಕ್ಷರಶಃ ಪ್ರವಾಹದಲ್ಲಿ ಕೊಚ್ಚಿಹೋಗಿದೆ. ಪ್ರವಾಹದಲ್ಲಿ ಕೊಚ್ಚಿಹೋದವರನ್ನು ಆರಕ್ಷಕ ಸಿಬ್ಬಂದಿ, ಅಗ್ನಿಶಾಮಕದಳ, ಪ್ಯಾರಾಮಿಲಿಟರಿಯವರು ನಿರಂತರವಾಗಿ ರಕ್ಷಿಸುತ್ತಿದ್ದಾರೆ. ಇವರಿಗೋಸ್ಕರ ಅಲ್ಲಲ್ಲಿ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಾರ್ವಜನಿಕರ ರಕ್ಷಣೆಯಲ್ಲಿ ತೊಡಗಿವೆ. ಇದರ ಜೊತೆಜೊತೆಗೆ ಸಿನೆಮಾ ನಟ-ನಟಿಯರು  ಪ್ರವಾಹ ಪೀಡಿತರ ನೆರವಿಗೆ ಧಾವಿಸುತ್ತಿದ್ದಾರೆ. ಇದೀಗ ಮಲಯಾಳಂ ನಟಿ ಅನುಪಮ ಪರಮೇಶ್ವರನ್ ತಮ್ಮ ನಾಡಿನ ಜನರಿಗೆ ಸಹಾಯ ಹಸ್ತ ಚಾಚಿದ್ದಾರೆ.

ನಾಡಿನ ಜನತೆಗೆ ಸಹಾಯ ಹಸ್ತ

 ಕಳೆದ ಮೂರು ದಿಗಳಿಂದ ಸಿನೆಮಾ ನಟ-ನಟಿಯರು ಕೇರಳದ ಪ್ರವಾಹದಲ್ಲಿ ಸಿಲುಕಿರವ ಜನರ ಕುರಿತು ಕಾಳಜಿ ತೋರಿಸುವುದರ ಮೂಲಕ ತಮ್ಮ ಕೈಲಾದಷ್ಟು ಧನ ಸಹಾಯ ಮಾಡುತ್ತಿದ್ದಾರೆ. ಮೊನ್ನೆ ಕಾಲಿವುಡ್ ಸ್ಟಾರ್ ಬ್ರದರ್ಸ್ ಸೂರ್ಯಾ ಹಾಗೂ ಕಾರ್ತಿಕ್ 25 ಲಕ್ಷ ರೂ, ಟಾಲಿವುಡ್ ನಟ ವಿಜಯ್ ದೇವರಕೊಂಡ 5ಲಕ್ಷ ರೂ, ಗಳನ್ನು ಪರಿಹಾರ ನಿಧಿಗೆ ನೀಡಿದ್ದರು. ಈಗ ಮಾಲಿವುಡ್ ಉದಯೋನ್ಮುಖ ನಟಿ ಅನುಪಮ ಪರಮೇಶ್ವರನ್ ಒಂದು ಲಕ್ಷ ರೂ ನೀಡುವುದರ ಮೂಲಕ ತಮ್ಮ ನಾಡಿನ ಜನತೆಗೆ ಸಹಾಯ ಹಸ್ತ ಚಾಚಿದ್ದಾರೆ.

 

Tags