ಸುದ್ದಿಗಳು

‘ಅನುಷ್ಕಾ’ಳಿಗೆ ರೀ-ರೆಕಾರ್ಡಿಂಗ್

ಚೆನೈನಲ್ಲಿ ‘ಅನುಷ್ಕಾ’ ಚಿತ್ರಕ್ಕೆ ಲೈವ್ ರೀ-ರೆಕಾರ್ಡಿಂಗ್

ಬೆಂಗಳೂರು, ಡಿ.10: ದೇವರಾಜ್ ಕುಮಾರ್ ನಿರ್ದೇಶನಲ್ಲಿ ಮೂಡಿ ಬರುತ್ತಿರುವ ‘ಅನುಷ್ಕಾ’ ಚಿತ್ರದ ಚಿತ್ರೀಕರಣ ಮುಗಿದು, ಚೆನೈನಲ್ಲಿ ಚಿತ್ರದ ಲೈವ್ ರೀ-ರೆಕಾರ್ಡಿಂಗ್ ಕೆಲಸಗಳು ನಡೆಯುತ್ತಿವೆ. ಈ ಚಿತ್ರವು ಏಕಕಾಲಕ್ಕೆ ಮೂರು ಭಾಷೆಗಳಲ್ಲಿ ಮೂಡಿ ಬರಲಿದೆ.

ಚಿತ್ರದ ಬಗ್ಗೆ

‘ಡೇಂಜರ್ ಜೋನ್’ ಹಾಗೂ ‘ನಿಶ್ಯಬ್ದ-2’ ಚಿತ್ರಗಳಿಗೆ ನಿರ್ದೇಶನ ಮಾಡಿದ್ದ ದೇವರಾಜ್ ಕುಮಾರ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಅಮೃತ ಐಯ್ಯಂಗಾರ್ ಇಲ್ಲಿ ‘ಅನುಷ್ಕಾ’ ಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ವೀರವನಿತೆ ‘ಅನುಷ್ಕಾ’

ಇತಿಹಾಸದ ಸಾರಾಂಶ ಸಾರುವ ಈ ಚಿತ್ರವು ಈಗಾಗಲೇ ಎಲ್ಲರ ಗಮನ ಸೆಳೆದಿದೆ. ಈ ಚಿತ್ರವನ್ನು ಶ್ರೀನಂಜುಂಡೇಶ್ವರ ಪ್ರೊಡಕ್ಷನ್ ಹೌಸ್ ಲಾಂಛನದಲ್ಲಿ ಎಸ್.ಕೆ.ಗಂಗಾಧರ್ ನಿರ್ಮಿಸಿದ್ದು, ಇದೀಗ ಮೂರು ಭಾಷೆಗಳ ಈ ಚಿತ್ರಕ್ಕೆ ಚನ್ನೈನಲ್ಲಿ ಸಂಗೀತ ನಿರ್ದೇಶಕ ವಿಕ್ರಂ ಸೆಲ್ವ ನಿರ್ದೇಶನದಲ್ಲಿ ಲೈವ್ ರೀ-ರೆಕಾರ್ಡಿಂಗ್ ನಡೆಯುತ್ತಿದೆ.

ತಾರಾಬಳಗ ಮತ್ತು ತಾಂತ್ರಿಕ ವರ್ಗ

ಈ ಚಿತ್ರದಲ್ಲಿ ನಾಯಕನಾಗಿ ರೂಪ್ ಶೆಟ್ಟಿ ಕಾಣಿಸಿಕೊಂಡಿದ್ದು, ಉಳಿದ ತಾರಾಬಳಗದಲ್ಲಿ ಸಾಧುಕೋಕಿಲ, ರೂಪ ಶರ್ಮ, ಬಾಲರಾಜ್, ಆದಿ ಲೋಕೇಶ್ ಸೇರದಂತೆ ಮುಂತಾದವರಿದ್ದಾರೆ. ಇನ್ನು ಚಿತ್ರಕ್ಕೆ ದೇವರಾಜ್ ಕುಮಾರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ವೀನಸ್ ಮೂರ್ತಿ ಛಾಯಾಗ್ರಹಣ, ಶ್ರೀಧರ್ ಸಂಕಲನ ಕಾರ್ಯವಿದೆ.

Tags