ಸುದ್ದಿಗಳು

ತನ್ನಂತೆ ಇರುವ ಪ್ರತಿಮೆ ನೋಡಿ ಬೆರಗಾದ ಅನುಷ್ಕಾ

ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮ

ಮುಂಬೈ, ನ.21: ಸದ್ಯ ಸೆಲಿಬ್ರಿಟಿಗಳ ಮೇಣದ ಪ್ರತಿಮೆಗಳು ಥೇಟ್ ಅದೇ ತರ ಇರುತ್ತವೆ ಅನ್ನುವುದು ಗೊತ್ತಿರುವ ವಿಚಾರ ಇದೀಗ ತನ್ನ ಪ್ರತಿಮೆ ನೋಡಿ ಬೆರಗಾಗಿದ್ದಾರೆ ಈ ನಟಿ.

ಅನುಷ್ಕಾ ಮೇಣದ ಪ್ರತಿಮೆ ಅನಾವರಣ

ದೊಡ್ಡ ದೊಡ್ಡ ಸೆಲಿಬ್ರಿಟಿಗಳ ಪ್ರತಿಮೆಗಳನ್ನು ಮೇಣದಲ್ಲಿ ಮಾಡಿಟ್ಟಿರುವುದು ಗೊತ್ತಿರುವ ವಿಚಾರ. ಈ ಮೇಣದ ಮ್ಯೂಸಿಯಂ ಸಿಂಗಪೂರ್‌ ನಲ್ಲಿದೆ. ಮೇಡಮ್ ಟುಸ್ಸಾಡ್ಸ್ ನಲ್ಲಿ ಇದೀಗ ಅನುಷ್ಕಾ ಅವರ ಮೇಣದ ಪ್ರತಿಮೆ ಮಾಡಿದ್ದಾರೆ.

ಅನುಷ್ಕಾ ಪ್ರತಿಮೆ ನೋಡಿ ಬೆರಗಾದ ನಟಿ

ಹೌದು, ಗಣ್ಯಾತಿಗಣ್ಯರು ಇರುವ ಈ ಮೇಣದ ಮ್ಯೂಸಿಯಂನಲ್ಲಿ ಥೇಟ್ ಅನುಷ್ಕಾ ತರನೇ ಇರುವಂತಹ ಈ ಮೇಣದ ಪ್ರತಿಮೆಯನ್ನು ನೋಡಿದ ಅನುಷ್ಕಾ ಬೆರಗಾಗಿದ್ದಾರೆ.

ಮೇಣದ ಪ್ರತಿಮೆ ಫೋಟೋ ಹಂಚಿಕೊಂಡ ಅನುಷ್ಕಾ

ಇದೀಗ ಸೆಲ್ಫಿ ಹಿಡಿದ ಸ್ಟೈಲ್‌ ನಲ್ಲಿ ನಿಂತಿರುವ ಈ ಅನುಷ್ಕಾ ಅವರ ಮೇಣದ ಪ್ರತಿಮೆಯನ್ನು ನೋಡಿ ಅನುಷ್ಕಾ ನಿಬ್ಬೆರಗಾಗಿದ್ದಾರೆ. ಇದೀಗ ಈ ಮೇಣದ ಪ್ರತಿಮೆ ಜೊತೆಗೆ ಫೊಟೋ ತೆಗೆದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Tags

Related Articles